ಮನೆ ರಾಷ್ಟ್ರೀಯ ದೆಹಲಿ ಅಬಕಾರಿ ನೀತಿ ಪ್ರಕರಣ: ತಿಹಾರ್‌ ಜೈಲಿನೊಳಗೆ ಬಿಆರ್‌ ಎಸ್‌ ನಾಯಕಿ ಕವಿತಾಳನ್ನು ಬಂಧಿಸಿದ ಸಿಬಿಐ

ದೆಹಲಿ ಅಬಕಾರಿ ನೀತಿ ಪ್ರಕರಣ: ತಿಹಾರ್‌ ಜೈಲಿನೊಳಗೆ ಬಿಆರ್‌ ಎಸ್‌ ನಾಯಕಿ ಕವಿತಾಳನ್ನು ಬಂಧಿಸಿದ ಸಿಬಿಐ

0

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿನ ಹಣಕಾಸು ವರ್ಗಾವಣೆ ಆರೋಪದಲ್ಲಿ ತಿಹಾರ್‌ ಜೈಲಿನೊಳಗೆ ವಿಚಾರಣೆಗೊಳಪಟ್ಟಿದ್ದ ಬಿಆರ್‌ ಎಸ್‌ ನಾಯಕಿ ಕೆ.ಕವಿತಾ ಅವರನ್ನು ಸಿಬಿಐ ಗುರುವಾರ (ಏ.11) ಬಂಧಿಸಿರುವ ಘಟನೆ ನಡೆದಿದೆ.

Join Our Whatsapp Group

ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕವಿತಾಳನ್ನು ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದ ಬೆನ್ನಲ್ಲೇ ಬಂಧಿಸಿರುವ ಬೆಳವಣಿಗೆ ನಡೆದಿದೆ. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಪುತ್ರಿ ಕೆ.ಕವಿತಾ, ರಾಜಧಾನಿಯಲ್ಲಿ ಅಬಕಾರಿ ಪರವಾನಿಗೆ ಪಡೆಯುವ ನಿಟ್ಟಿನಲ್ಲಿ ಆಡಳಿತಾರೂಢ ಆಮ್‌ ಆದ್ಮಿ ಪಕ್ಷಕ್ಕೆ 100 ಕೋಟಿ ರೂಪಾಯಿ ಲಂಚ ನೀಡಿರುವುದಾಗಿ ಇ.ಡಿ ಆರೋಪಿಸಿತ್ತು.

ಕಳೆದ ಮಂಗಳವಾರ ಕವಿತಾ ಅವರಿಗೆ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಕಿಕ್‌ ಬ್ಯಾಕ್‌ ಆರೋಪದಲ್ಲಿ ಮಾರ್ಚ್‌ 15ರಂದು ಹೈದರಾಬಾದ್‌ ನ ಬಂಜಾರಾ ಹಿಲ್ಸ್‌ ನಿವಾಸದಲ್ಲಿ ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.

ನನ್ನ ಉದ್ದೇಶಪೂರ್ವಕವಾಗಿ ಬಲಿಪಶು ಮಾಡಲಾಗಿದೆ. ರಾಜಕೀಯ ಮತ್ತು ವೈಯಕ್ತಿಕ ಜೀವನದ ಮೇಲೆ ಟಾರ್ಗೆಟ್‌ ಮಾಡಲಾಗಿದ್ದು, ನನ್ನ ಮೊಬೈಲ್‌ ಫೋನ್‌ ನಲ್ಲಿದ್ದ ವಿವರಗಳನ್ನು ಎಲ್ಲಾ ಟಿವಿ ಚಾನೆಲ್‌ ಗಳೂ ಪ್ರಸಾರ ಮಾಡಿವೆ. ಇದು ಕಕ್ಷಿದಾರರ ಖಾಸಗಿತನಕ್ಕೆ ಚ್ಯುತಿ ತಂದಿರುವುದಾಗಿ ಕೆ.ಕವಿತಾ ಪರ ವಕೀಲರು ಕೋರ್ಟ್‌ ಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.