ಮನೆ ರಾಜ್ಯ ಚುನಾವಣೆಗಾಗಿ ಪ್ರತಿ ಸಕ್ಕರೆ ಕಾರ್ಖಾನೆಯಿಂದ 50 ಲಕ್ಷ ವಸೂಲಿ: ಬಸನಗೌಡ ಪಾಟೀಲ ಯತ್ನಾಳ್ ಆರೋಪ

ಚುನಾವಣೆಗಾಗಿ ಪ್ರತಿ ಸಕ್ಕರೆ ಕಾರ್ಖಾನೆಯಿಂದ 50 ಲಕ್ಷ ವಸೂಲಿ: ಬಸನಗೌಡ ಪಾಟೀಲ ಯತ್ನಾಳ್ ಆರೋಪ

0

ಅಥಣಿ: ಎಲ್ಲ ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಅಳವಡಿಸಿ ರೈತರಿಗೆ ನ್ಯಾಯ ಒದಗಿಸುವುದಾಗಿ ಹೇಳಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು, ಈಗ ಪ್ರತಿ ಕಾರ್ಖಾನೆ ಮಾಲೀಕರಿಂದ 50 ಲಕ್ಷ ಹಣ ಕೇಳುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.

Join Our Whatsapp Group

ಅಥಣಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತೂಕದ ಯಂತ್ರದ ಬಗ್ಗೆ ಸಚಿವರು ವಿಧಾನಸಭೆಯಲ್ಲೇ ಹೇಳಿದ್ದರು. ಆದರೆ, ಈಗ ಅವರ ಪುತ್ರಿ ಚುನಾವಣೆಗೆ ನಿಂತಿರುವ ಕಾರಣ ಮಾತು ಬದಲಿಸಿ, ಕಾರ್ಖಾನೆಗಳಿಂದ 50 ಲಕ್ಷ ವಸೂಲಿ ಮಾಡುತ್ತಿದ್ದಾರೆ.

ಕಾರ್ಖಾನೆ ಮಾಲೀಕರಿಂದ ತಲಾ 50 ಲಕ್ಷ ರೂ.ಗಳನ್ನು ಪಡೆದುಕೊಳ್ಳಲು ‘ಏಜೆಂಟ’ರನ್ನು ನೇಮಿಸಿದ್ದಾರೆ. 50 ಲಕ್ಷ ರೂಪಾಯಿ ಕೋರಿ ‘ಏಜೆಂಟ್’ ಒಬ್ಬ ನನ್ನನ್ನು ಸಂಪರ್ಕಿಸಿದ್ದ. ಆದರೆ ನಾನು ಹಣ ನೀಡಲು ನಿರಾಕರಿಸಿ 10 ತೂಕದ ಯಂತ್ರಗಳನ್ನು ನನ್ನ ಕಾರ್ಖಾನೆಗೆ ಅಳವಡಿಸುವಂತೆ ಹೇಳಿದೆ ಎಂದು ಯತ್ನಾಳ್ ಆರೋಪಿಸಿದ್ದಾರೆ.