ಮನೆ ಸ್ಥಳೀಯ ಗ್ರಾಮೀಣ ಶೈಲಿಯಲ್ಲಿ ಎತ್ತಿನ ಗಾಡಿ ಏರಿ ಮತದಾನ ಜಾಗೃತಿ

ಗ್ರಾಮೀಣ ಶೈಲಿಯಲ್ಲಿ ಎತ್ತಿನ ಗಾಡಿ ಏರಿ ಮತದಾನ ಜಾಗೃತಿ

0

ಮೈಸೂರು: ಲೋಕ ಸಭಾ ಚುನಾವಣೆ ಹಿನ್ನೆಲೆ ಮತದಾನ ಪ್ರಮಾಣವನ್ನು ಹೆಚ್ಚುಸುವ ನಿಟ್ಟಿನಲ್ಲಿ ನಂಜನಗೂಡು ತಾಲ್ಲೂಕು ಪಂಚಾಯಿತಿಯ ಸ್ವಿಪ್ ಸಮಿತಿ ವತಿಯಿಂದ ಗ್ರಾಮೀಣ‌ ಸೊಗಡಿನ ಶೈಲಿನಲ್ಲಿ ಎತ್ತಿನಗಾಡಿ ಜಾಥಾ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

Join Our Whatsapp Group

ನಂಜನಗೂಡು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಅವರ ಮಾರ್ಗದರ್ಶನದಂತೆ, ಬಿಳಿಗೆರೆ ಹೋಬಳಿ ಮಟ್ಟದಲ್ಲಿ ಕಳೆದ ಬಾರಿ ಮತದಾನ ಪ್ರಮಾಣ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳಿಂದ ಸುತ್ತೂರು ಗ್ರಾಮದಲ್ಲಿ ಎತ್ತಿನ ಗಾಡಿ ಜಾಥಾ ಹಮ್ಮಿಕೊಳ್ಳಲಾಯಿತು.

ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ ಮುಂಭಾಗದಿಂದ ಬಿಳಿಗೆರೆ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿಯ   ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ಸಿಬ್ಬಂದಿ ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಎತ್ತಿನ ಗಾಡಿ ಏರಿ ಸುತ್ತೂರಿನ ಪ್ರಮುಖ ರಸ್ತೆಗಳಲ್ಲಿ ಸಾಗಿ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸಿದರು.

ಈ ವೇಳೆ ಪಂಚಾಯತ್ ರಾಜ್  ಸಹಾಯಕ ನಿರ್ದೇಶಕರಾದ ವಿವೇಕ್,  ತಾಲ್ಲೂಕು ಸ್ವೀಪ್ ಸಮಿತಿಯ ದಿನೇಶ್, ಕಾವ್ಯ, ಸುತ್ತೂರು, ಹೊಸಕೋಟೆ, ಬಿಳಿಗೆರೆ, ತುಂನೇರಳೆ, ನಗರ್ಲೆ ಹಾಗೂ ಕಾರ್ಯ  ಗ್ರಾಮ ಪಂಚಾಯಿತಿಯ ಅಭಿವೃದ್ಧಿಗಳು, ಕಾರ್ಯದರ್ಶಿ, ತಾಲ್ಲೂಕು ಎನ್ ಅರ್.ಎಲ್ ಎಂ ನ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು‌.