ಮನೆ ಶಿಕ್ಷಣ ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್

ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್

0

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ ಸಿ) 2023 ರ ಸೆಪ್ಟೆಂಬರ್ 15 ರಿಂದ 24 ರ ನಡುವೆ ನಡೆಸಿದ ನಾಗರಿಕ ಸೇವೆಗಳ ಅಂತಿಮ ಪರೀಕ್ಷೆಯ ಫಲಿತಾಂಶವನ್ನು ಇಂದು (16, ಏಪ್ರಿಲ್, 2024) ಪ್ರಕಟಿಸಿದೆ.

https://upsc.gov.in/ ವೆಬ್​ಸೈಟ್​ ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಆದಿತ್ಯ ಶ್ರೀವಾಸ್ತವ ಎನ್ನುವರು ದೇಶಕ್ಕೆ ಟಾಪರ್ ಆಗಿದ್ದು. ಅನಿವೇಶ್ ಪ್ರಧಾನ್ ದ್ವಿತೀಯ ಹಾಗೂ ಡೋಣೂರು ಅನನ್ಯಾ ರೆಡ್ಡಿ ತೃತೀಯ ಸ್ಥಾನಗಳಿಸಿದ್ದಾರೆ. ಒಟ್ಟು 1016 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅವರನ್ನು ಕೇಂದ್ರ ವಿವಿಧ ಸೇವೆಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಲೋಕಸೇವ ಆಯೋಗ ತಿಳಿಸಿದೆ.

ಇಲ್ಲಿದೆ ಟಾಪ್ 20 ಅಭ್ಯರ್ಥಿಗಳ ರ‍್ಯಾಂಕ್ ಪಟ್ಟಿ

ರ‍್ಯಾಂಕ್ 1: ಆದಿತ್ಯ ಶ್ರೀವಾಸ್ತವ ರ‍್ಯಾಂಕ್ 2: ಅನಿಮೇಶ್ ಪ್ರಧಾನ್ ರ‍್ಯಾಂಕ್ 3: ಡೋಣೂರು ಅನನ್ಯಾ ರೆಡ್ಡಿ ರ‍್ಯಾಂಕ್ 4:  ಪಿ ಕೆ ಸಿದ್ಧಾರ್ಥ್ ರಾಮಕುಮಾರ್ ರ‍್ಯಾಂಕ್ 5: ರುಹಾನಿ ರ‍್ಯಾಂಕ್ 6: ಸೃಷ್ಟಿ ದಾಬಾಸ್ ರ‍್ಯಾಂಕ್ 7:ಅನ್ಮೋಲ್ ರಾಥೋಡ್ ರ‍್ಯಾಂಕ್ 8: ಆಶಿಶ್ ಕುಮಾರ್ ರ‍್ಯಾಂಕ್ 9: ನೌಶೀನ್ ರ‍್ಯಾಂಕ್ 10: ಐಶ್ವರ್ಯಮ್ ಪ್ರಜಾಪತಿ ರ‍್ಯಾಂಕ್ 11: ಕುಶ್ ಮೋಟ್ವಾನಿ ರ‍್ಯಾಂಕ್ 12: ಅನಿಕೇತ್  ಶಾಂಡಿಲ್ಯ ರ‍್ಯಾಂಕ್ 13: ಮೇಧಾ ಆನಂದ್ , ರ‍್ಯಾಂಕ್ 14: ಶೌರ್ಯ ಅರೋರಾ ರ‍್ಯಾಂಕ್ 15: ಕುನಾಲ್ ರಸ್ತೋಗಿ ರ‍್ಯಾಂಕ್ 16: ಅಯಾನ್ ಜೈನ್ ರ‍್ಯಾಂಕ್ 17: ಸ್ವಾತಿ ಶರ್ಮಾ ರ‍್ಯಾಂಕ್ 18: ವಾರ್ದಾ ಖಾನ್ ರ‍್ಯಾಂಕ್ 19: ಶಿವಕುಮಾರ್ ರ‍್ಯಾಂಕ್ 20:  ಆಕಾಶ್ ವರ್ಮಾ

ಯುಪಿಎಸ್‌ ಸಿ ಫಲಿತಾಂಶ ಚೆಕ್‌ ಮಾಡುವುದು ಹೇಗೆ?

ಕೇಂದ್ರ ಲೋಕಸೇವಾ ಆಯೋಗದ ವೆಬ್‌ ಸೈಟ್‌ ವಿಳಾಸ https://upsc.gov.in/ ಕ್ಕೆ ಭೇಟಿ ನೀಡಿ.

 ತೆರೆದ ವೆಬ್‌ಪುಟದಲ್ಲಿ ‘ Final Result – Civil Services Examination, 2023 ಎಂದಿರುವ ಲಿಂಕ್‌ ಕ್ಲಿಕ್ ಮಾಡಿ.

 ಪಿಡಿಎಫ್‌ ಫೈಲ್‌ ಒಂದು ಓಪನ್‌ ಆಗುತ್ತದೆ. ಇಲ್ಲಿ ಅಭ್ಯರ್ಥಿಗಳು ಹೆಸರು, ರಿಜಿಸ್ಟರ್ ನಂಬರ್‌ ಅನ್ನು ಹಾಕಿ ಚೆಕ್‌ ಮಾಡಬಹುದು.