ಮನೆ ಸುದ್ದಿ ಜಾಲ ಒಂದು ದಿನಕ್ಕೆ ಮಾತ್ರ ಪೆಟ್ರೋಲ್‌ ಇದೆ: ಶ್ರೀಲಂಕಾ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಎಚ್ಚರಿಕೆ

ಒಂದು ದಿನಕ್ಕೆ ಮಾತ್ರ ಪೆಟ್ರೋಲ್‌ ಇದೆ: ಶ್ರೀಲಂಕಾ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಎಚ್ಚರಿಕೆ

0

ಕೊಲಂಬೊ (Colombo)- ಸದ್ಯ ದೇಶದಲ್ಲಿ ಒಂದು ದಿನಕ್ಕೆ ಆಗುವಷ್ಟು ಪೆಟ್ರೋಲ್‌ ಮಾತ್ರ ಉಳಿದಿದೆ ಎಂದು ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ (Ranil Wickremesinghe) ನಾಗರಿಕರನ್ನು ಎಚ್ಚರಿಸಿದ್ದಾರೆ.

ಆರ್ಥಿಕತೆ ಕುರಿತು ದೇಶವನ್ನು ಉದ್ದೇಶಿಸಿ ಸೋಮವಾರ ಮಾತನಾಡಿರುವ ಅವರು, ‘ಸದ್ಯಕ್ಕೆ, ನಾವು ಒಂದೇ ಒಂದು ದಿನಕ್ಕೆ ಆಗುವಷ್ಟು ಪೆಟ್ರೋಲ್ ದಾಸ್ತಾನನ್ನು ಮಾತ್ರ ಹೊಂದಿದ್ದೇವೆ. ಹಣ ಪಾವತಿಸುವ ಬಗ್ಗೆ ಬ್ಯಾಂಕ್‌ ಖಾತರಿ ನೀಡಿರುವ (ಲೈನ್ ಆಫ್‌ ಕ್ರೆಡಿಟ್ ಅಥವಾ ಎಲ್‌ಒಸಿ) ಆಧಾರದಲ್ಲಿ ಡೀಸೆಲ್‌ ಪೂರೈಸಿ ನೆರವಾದ ಭಾರತಕ್ಕೆ ಧನ್ಯವಾದಗಳು. ಭಾರತದ ಪೂರೈಕೆಯಿಂದಾಗಿ ಡೀಸೆಲ್ ಕೊರತೆಯನ್ನು ನಿವಾರಿಸಲಾಗುವುದು ಎಂದು ಅವರು ಹೇಳಿದರು.

ನಿನ್ನೆ ಭಾರತದಿಂದ ಬಂದ ಡೀಸೆಲ್‌ನಿಂದಾಗಿ ಕೊರತೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ. ಭಾರತ ಮೇ 18 ಮತ್ತು ಜೂನ್ 1 ರಂದು ಇನ್ನೂ ಎರಡು ಹಂತಗಳಲ್ಲಿ ಡೀಸೆಲ್ ಪೂರೈಕೆ ಮಾಡಲಿದೆ. ಜೊತೆಗೆ, ಎರಡು ಹಂತಗಳಲ್ಲಿ ಪೆಟ್ರೋಲ್ ಬರಲಿದೆ. ಮೇ 18 ಮತ್ತು 29 ರಂದು ಪೆಟ್ರೋಲ್‌ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ದೇಶಕ್ಕೆ ಅಗತ್ಯವಿರುವ ಆಮದಿಗೆ ಪಾವತಿಸಲು 75 ದಶಲಕ್ಷ ಡಾಲರ್‌ (₹583 ಕೋಟಿ) ವಿದೇಶಿ ವಿನಿಮಯದ ಅಗತ್ಯವಿದೆ ಎಂದು ಅವರು ಇದೇ ವೇಳೆ ಹೇಳಿದರು.