ಮನೆ ರಾಜ್ಯ ಕರ್ನಾಟಕದಲ್ಲಿ ಇರುವುದು ಪಿಕ್ ಪ್ಯಾಕೆಟ್ ಸರ್ಕಾರ: ಎಚ್.ಡಿ.ಕುಮಾರಸ್ವಾಮಿ

ಕರ್ನಾಟಕದಲ್ಲಿ ಇರುವುದು ಪಿಕ್ ಪ್ಯಾಕೆಟ್ ಸರ್ಕಾರ: ಎಚ್.ಡಿ.ಕುಮಾರಸ್ವಾಮಿ

0

ನಾಗಮಂಗಲ: ರಾಜ್ಯ ಈಗ ಇರೋದು ಪಿಕ್ ಪ್ಯಾಕೆಟ್ ಸರ್ಕಾರ ಎಂದು ಲೋಕಸಭಾ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Our Whatsapp Group


ಅವರು ನಾಗಮಂಗಲದಲ್ಲಿ ಏರ್ಪಡಿಸಿದ್ದ ಜನತಾದಳ ಹಾಗೂ ಬಿಜೆಪಿ ಮೈತ್ರಿ ಸಮಾವೇಶದಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಗ್ಯಾರಂಟಿ ಹೆಸರಿನಲ್ಲಿ ಜನಸಾಮಾನ್ಯರ ಬಡವರು ರೈತರ ಜೇಬಿಗೆ ಕತ್ತರಿ ಹಾಕಿದ್ದಾರೆ ಎಂದು ಆರೋಪಿಸಿದರು .
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಜನಸಾಮಾನ್ಯರಿಗೆ ಗ್ಯಾರಂಟಿ ಕೊಡುತ್ತೇನೆ ಎಂದು ಹೇಳಿ 2000 ಕೊಡಲು ಹತ್ತು ಸಾವಿರಕ್ಕಿಂತ ಹೆಚ್ಚು ಹಣವನ್ನು ಜನಸಾಮಾನ್ಯರಿಂದಲೆ ವಿದ್ಯುತ್ ಬಿಲ್ ಹೆಚ್ಚಳ, ರೈತರ ಪಂಪ್ಸೆಟ್ ಗಳಿಗೆ ಟ್ರಾನ್ಸ್ಫರ್ ಅಳವಡಿಕೆ ಶುಲ್ಕವನ್ನು ಲಕ್ಷಾಂತರ ಹೆಚ್ಚಿಸುವುದು, ಇಪ್ಪತ್ತು ರೂಪಾಯಿ ಸ್ಟ್ಯಾಂಪ್ ಪೇಪರ್ ನ 100 ರೂಪಾಯಿಗೆ ಏರಿಸಿರುವಂತದ್ದು, ಅದೇ ರೀತಿ ಎಲ್ಲಾ ಹಂತದಲ್ಲೂ ಜನಸಾಮಾನ್ಯ ಮೇಲೆ ಹಣದ ಬರೆಯನ್ನು ಹಾಕುತ್ತಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರ ಮಾತು ಮಾತಿಗೆ ಗ್ಯಾರಂಟಿ ಅನ್ನುತ್ತಾರೆ ಅಭಿವೃದ್ಧಿ ಕೆಲಸಗಳು ಒಂದು ನಡೆಯುತ್ತಿಲ್ಲ. ನಮ್ಮ ಸರ್ಕಾರ ರೈತರ ಪಂಪ್ಸೆಟ್ಗಳಿಗೆ 25000 ಗಳಿಗೆ ಪಂಪ್ಸೆಟ್ ಸಂಪರ್ಕ ಕಲ್ಪಿಸುತ್ತಿತ್ತು, ಆದರೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎರಡುವರೆಯಿಂದ 3 ಲಕ್ಷ ರೂಪಾಯಿಗಳ ವರೆ ರೈತರ ಮೇಲೆ ಬಂದಿದೆ .ಬಡವರಿಗಾಗಿ ನಿಗದಿಯಾದ ಯೋಜನೆಗಳ ಹಣವನ್ನೆಲ್ಲ ಇವರ ಗ್ಯಾರಂಟಿಗಾಗಿ ಬಳಸುತ್ತಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಈ ಜಿಲ್ಲೆಗೆ ಮಾಡಿದಂತಹ ರೈತರ ಮೇಲಿನ ಸಾಲದ ಮನ್ನಾ ವಿವಿಧ ಅಭಿವೃದ್ಧಿ ಕಾರ್ಯಗಳು ಎದ್ದು ಕಾಣುತ್ತವೆ.ಈಗಲೂ ಸರ್ಕಾರಿ ದಾಖಲೆಗಳಲ್ಲಿ ನೋಡಬಹುದು ,
ಅದನ್ನ ಬಿಟ್ಟು ಕುಮಾರಸ್ವಾಮಿ ಏನು ಮಾಡಿದರು ಅಂತ ಹೇಳುತ್ತಾರೆ . ಅವರು ದಾಖಲೆಗಳನ್ನು ನೋಡಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಏನನ್ನು ಮಾಡಿದ್ದಾರೆ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂಬುದು ತಿಳಿದು ಬರುತ್ತದೆ.ಈಗ ವಿಶ್ವೇಶ್ವರಯ್ಯ ನಾಲೆಯನ್ನ ಆಧುನಿಕರಣ ಮಾಡುವ ನೆಪದಲ್ಲಿ ರೂ.700 ಕೋಟಿ ರೂಪಾಯಿಗಳಿಗೆ ಸ್ಟಾರ್ ಚಂದ್ರನಿಗೆ ಕಂಟ್ರ್ಯಾಕ್ಟ್ ಕೊಟ್ಟು ಆ ಹಣವನ್ನೇ ಚುನಾವಣೆಗೆ ಬಳಸಿಕೊಳ್ಳುವಂತ ಕುತಂತ್ರ ಮಾಡಿದ್ದಾರೆ.ಇದು ನಿಮಗೆಲ್ಲಾ ಗೊತ್ತಾಗುತ್ತಿದೆ.ನಮ್ಮ ಮಂಡ್ಯ ಜಿಲ್ಲೆಯ ಜನ ಈ ಬಾರಿ ನನ್ನನ್ನ ಮೂರು ಲಕ್ಷಕ್ಕೂ ಅಧಿಕ ಮತಗಳನ್ನು ನೀಡಿ ಗೆಲ್ಲಿಸುತ್ತಾರೆ.ಮೋದಿ ಪ್ರಧಾನಿಯಾದ ನಾಲ್ಕೈದು ತಿಂಗಳಲ್ಲಿ ಮೇಕೆದಾಟು ಯೋಜನೆಯನ್ನು ನಾನೇ ಪ್ರಾರಂಭಿಸುತ್ತೇನೆ.ನಿಮಗೆ ಗೊತ್ತಿದೆ ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್ನವರು ನನ್ನನ್ನ ಎಷ್ಟು ಕೆಟ್ಟದಾಗಿ ನಡೆಸಿಕೊಂಡರು ಎಂಬುದು.ಎಲ್ಲಾ ನನ್ನ ತಾಯಂದಿರೇ ನೀವೆಲ್ಲ ನನಗೆ ಮತ ನೀಡುವ ಮೂಲಕ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕೆಲಸಕ್ಕೆ ನೀವೆಲ್ಲ ಕಾರಣಿಕೃತರಾಗುತ್ತೀರಾ ಎಂದು ಕುಮಾರಸ್ವಾಮಿರವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಸಂಸದ ಪ್ರತಾಪ್ ಸಿಂಹರವರು ಭಾರತವನ್ನು ಕಾಯಲು ನರೇಂದ್ರ ಮೋದಿ ಹೇಗೋ,ಮಂಡ್ಯ ಜಿಲ್ಲೆಯ ಕಾವೇರಿಯನ್ನು ಕಾಯಲು ಕುಮಾರಣ್ಣ ಬೇಕು .ಈ ವಿಚಾರ ಮಂಡ್ಯ ಜಿಲ್ಲೆಯ ಎಲ್ಲಾ ಜನತೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಕಾಂಗ್ರೆಸ್ನವರಿಂದ ನಾವು ಏನನ್ನು ನಿರೀಕ್ಷೆ ಮಾಡುವಂತಿಲ್ಲ.ನಮ್ಮ ಹಣವನ್ನೇ ಕಿತ್ತುಕೊಂಡು ನಮಗೆ ಕೊಡುತ್ತೇನೆಂದು ಟೋಪಿ ಹಾಕುತ್ತಿದ್ದಾರೆ ಎಂದರು.
ಮೋದಿ ರವರು ಭಾರತದ ಅಭಿವೃದ್ಧಿಯ ನೇತಾರನಾಗಿದ್ದಾರೆ . ಅವರು ವಿಶ್ವದಲ್ಲೇ ಭಾರತವನ್ನು ಗುರುತಿಸುವಂತಹ ಸ್ಥಿತಿಗೆ ತಂದಿದ್ದಾರೆ.ಇಡೀ ವಿಶ್ವವೇ ಮೋದಿ ಅವರನ್ನು ಅವರ ನಾಯಕತ್ವವನ್ನು ಪ್ರಶಂಶಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಎಲ್ಲಾ ಮತದಾರರು ಕುಮಾರಣ್ಣನಿಗೆ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವನ್ನು ತರುವ ಮೂಲಕ ಮಂಡ್ಯ ಜಿಲ್ಲೆಯ ಕಾವೇರಿಯ ಉಳಿಸಲು ಸಹಕರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ,ಮುಖಂಡರಾದ ಫೈಟರ್ ರವಿ ,ಡಾ. ರವೀಂದ್ರ, ನೆಲ್ಲಿಗೆರೆ ಬಾಲು ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರುಗಳು ಉಪಸ್ಥಿತರಿದ್ದು ನಾಗಮಂಗಲದ ಮಾಜಿ ಶಾಸಕರಾದ ಸುರೇಶ್ ಗೌಡರು ಪ್ರಾಸ್ತಾವಿಕ ನುಡಿಯೊಂದಿಗೆ ಎಲ್ಲಾ ಗಣ್ಯರುಗಳಿಗೆ ಸ್ವಾಗತ ಕೋರಿದರು. ಈ ಸಭೆಯಲ್ಲಿ ಜಾತ್ಯಾತೀತ ಜನತಾದಳ ಹಾಗೂ ಕಟ್ಟಾ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ಎಚ್.ಡಿ. ಕುಮಾರಸ್ವಾಮಿ ರವರಿಗೆ ಬೆಂಬಲ ಸೂಚಿಸಿದರು.
ಮಿಷನ್ ಮೋದಿ ಭಾರತ, ನಾಗಮಂಗಲ ತಾಲೂಕು ಉಪಾಧ್ಯಕ್ಷರಾದ ಲೋಕೇಶ್ ಸ್ವಾಮಿ ರವರು,ಕೃಷ್ಣೇಗೌಡರು ಉಪಸ್ಥಿತರಿದ್ದು ಕುಮಾರಸ್ವಾಮಿ ರವರಿಗೆ ಬೆಂಬಲ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೊಪ್ಪ ಹೋಬಳಿ ಸೇರಿದಂತೆ ನಾಗಮಂಗಲ ವಿಧಾನಸಭಾ ಕ್ಷೇತ್ರದ 40,000ಕ್ಕೂ ಹೆಚ್ಚು ಮತದಾರರು ಭಾಗವಹಿಸಿ ಕುಮಾರಸ್ವಾಮಿರವರ ಮಾತುಗಳನ್ನ ಕೇಳಿ ಜೈಕಾರಗಳೊಂದಿಗೆ ಬೆಂಬಲವನ್ನು ವ್ಯಕ್ತಪಡಿಸಿದರು.