ಮನೆ ಅಪರಾಧ ವಿದ್ಯುತ್ ಬಿಲ್ ವಿಚಾರವಾಗಿ ನಡೆದ ಜಗಳದಲ್ಲಿ ಮಹಿಳಾ ಟೆಕ್ನಿಷಿಯನ್​ ಹತ್ಯೆ

ವಿದ್ಯುತ್ ಬಿಲ್ ವಿಚಾರವಾಗಿ ನಡೆದ ಜಗಳದಲ್ಲಿ ಮಹಿಳಾ ಟೆಕ್ನಿಷಿಯನ್​ ಹತ್ಯೆ

0

ಮಹಾರಾಷ್ಟ್ರ: ವಿದ್ಯುತ್ ಬಿಲ್​ ವಿಚಾರಕ್ಕೆ  ವ್ಯಕ್ತಿಯೊಬ್ಬ ಮಹಾರಾಷ್ಟ್ರ ಸ್ಟೇಟ್ ಎಲೆಕ್ಟ್ರಿಸಿಟಿ ಡಿಸ್ಟ್ರಿಬ್ಯೂಷನ್​ ಕಂ ಲಿಮಿಟೆಡ್​ ನ ಮಹಿಳಾ ಟೆಕ್ನಿಷಿಯನ್​ ನ ಹತ್ಯೆ ಮಾಡಿದ್ದಾರೆ.

Join Our Whatsapp Group

ಟೆಕ್ನಿಷಿಯನ್ 570 ರೂಪಾಯಿಯ ಹೆಚ್ಚಿನ ವಿದ್ಯುತ್ ಬಿಲ್ ನೀಡಿದ್ದಾರೆ ಎಂದು ಆರೋಪಿಸಿ ಹರಿತವಾದ ಆಯುಧದಿಂದ 16 ಬಾರಿ ಚುಚ್ಚಿ ಕೊಲೆ ಮಾಡಿದ್ದಾರೆ.

ಅಭಿಜಿತ್ ಪೋಟೆ ಅವರು ಬೆಳಿಗ್ಗೆ ಬಾರಾಮತಿ ತಹಸಿಲ್‌ ನ ಮೋರ್ಗಾಂವ್‌ ನಲ್ಲಿರುವ ಎಂಎಸ್‌ ಇಡಿಸಿಎಲ್ ಕಚೇರಿಯೊಳಗೆ ರಿಂಕು ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಪಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ ಎಂಎಸ್‌ ಇಡಿಸಿಎಲ್‌ ಕಚೇರಿಗೆ ತೆರಳಿ ಹತ್ತು ದಿನಗಳ ರಜೆ ಮುಗಿಸಿ ವಾಪಸಾದ ಥಿಟೆ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

302 (ಕೊಲೆ) ಸೇರಿದಂತೆ ಐಪಿಸಿಯ ಸಂಬಂಧಿತ ಸೆಕ್ಷನ್‌ ಗಳ ಅಡಿಯಲ್ಲಿ ಪೋಟೆಯನ್ನು ಬಂಧಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಈ ಘಟನೆಯು ಬಾರಾಮತಿಯಿಂದ 35 ಕಿ.ಮೀ ದೂರದಲ್ಲಿರುವ ಮೋರ್ಗಾಂವ್​ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ ವಿತರಣಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 34 ವರ್ಷದ ಮಹಿಳಾ ಉದ್ಯೋಗಿ ರಿಂಕು ಬನ್ಸೋಡೆ ಸಾವನ್ನಪ್ಪಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.

ಕಳೆದ ವಾರ ಇದೇ ಪ್ರದೇಶದಲ್ಲಿ ಗುಂಡವಲಿ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿಗಳ ಮೇಲೆ ಅಪ್ರಾಪ್ತರು ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಬಳಿಕ ವಿದ್ಯುತ್ ಇಲಾಖೆ ಸ್ಪಷ್ಟನೆ ನೀಡಿದ್ದು, ಮಹಿಳಾ ತಂತ್ರಜ್ಞರು ನೀಡಿದ್ದ ಬಿಲ್​ನಲ್ಲಿ ಯಾವುದೇ ತಪ್ಪಿರಲಿಲ್ಲ, ಏಪ್ರಿಲ್​ನಲ್ಲಿ ಆರೋಪಿ 63 ಯೂನಿಟ್​ಗಳನ್ನು ಬಳಸಿದ್ದು 570 ರೂ. ಬಿಲ್​ ಬಂದಿದೆ, ಬೇರೆತಿಂಗಳಿಗಿಂತ ಈ ತಿಂಗಳಿನಲ್ಲಿ ಸೆಕೆ ಹೆಚ್ಚಿರುವ ಕಾರಣ ವಿದ್ಯುತ್ ಹೆಚ್ಚು ಬಳಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.