ಸಿಂಧನೂರು: ನಗರದ ಡಾ.ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ಊಟದಲ್ಲಿ ವ್ಯತ್ಯಾಸವಾಗಿದ್ದರಿಂದ 16 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ.
ಶುಕ್ರವಾರ ರಾತ್ರಿ ಹುರಳಿಕಾಳು, ರೊಟ್ಟಿ, ಅನ್ನಸಾಂಬರ್ ತಿಂದ ಬಳಿಕ ವಾಂತಿಭೇದಿ, ಹೊಟ್ಟೆನೋವು ಕಾಣಿಸಿದೆ. ಕೂಡಲೇ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. 14 ವಿದ್ಯಾರ್ಥಿನಿಯರ ಆರೋಗ್ಯ ಚೇತರಿಸಿದ್ದು, ಇನ್ನಿಬ್ಬರಿಗೆ ನಗರದ ಶಾಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಾಸ್ಟೆಲ್ ಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಹೇಶ ಪೋತೆದಾರ್, ಡಿಎಚ್ಓ ಸುರೇಂದ್ರಬಾಬು ಸೇರಿದಂತೆ ಇತರರ ಭೇಟಿ ನೀಡಿ, ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ಹಾಸ್ಟೆಲ್ ನಲ್ಲಿ ಸ್ವಚ್ಛತೆ ಕಾಪಾಡುವಂತೆ ಈ ವೇಳೆ ಸೂಚನೆ ನೀಡಲಾಯಿತು.














