ಮನೆ ರಾಜ್ಯ ಕಾಂಗ್ರೆಸ್ ಲೂಟಿಗೆ ಕರ್ನಾಟಕವನ್ನೇ ಎಟಿಎಂ ಮಾಡಿಕೊಂಡಿದೆ: ಪ್ರಧಾನಿ ಮೋದಿ ಆರೋಪ

ಕಾಂಗ್ರೆಸ್ ಲೂಟಿಗೆ ಕರ್ನಾಟಕವನ್ನೇ ಎಟಿಎಂ ಮಾಡಿಕೊಂಡಿದೆ: ಪ್ರಧಾನಿ ಮೋದಿ ಆರೋಪ

0

ಬಾಗಲಕೋಟೆ: ಕಾಂಗ್ರೆಸ್ ಲೂಟಿಗೆ ಕರ್ನಾಟಕವನ್ನೇ ಎಟಿಎಂ ಮಾಡಿಕೊಂಡಿದೆ. ಆದ್ದರಿಂದ ಕಡಿಮೆ ಸಮಯದಲ್ಲಿ ಖಜಾನೆ ಖಾಲಿ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

Join Our Whatsapp Group

ಬಾಗಲಕೋಟೆಯಲ್ಲಿ ಸೋಮವಾರ ಬಾಗಲಕೋಟೆ, ‌ವಿಜಯಪುರ ಅಭ್ಯರ್ಥಿಗಳ ಪರವಾಗಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕರ ನಿಧಿಯೂ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂದು ಟೀಕಿಸಿದರು.

ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೂ ವೇತನ ನೀಡಲಾಗದಂತಹ ಸ್ಥಿತಿ ಬರುತ್ತದೆ. ನಿಮ್ಮ ಮಕ್ಕಳು ಉಪವಾಸ ಸಾಯಬೇಕಾದ ಪರಿಸ್ಥಿತಿ ತರುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ‌ವಸೂಲಿ ಗ್ಯಾಂಗ್ ಸರ್ಕಾರ‌ ನಡೆಸುತ್ತಿದೆ. ಖಜಾನೆಗೆ ಹಣ ಬರುತ್ತಿದ್ದಂತೆಯೇ ಲೂಟಿ ಮಾಡಿ ತಮ್ಮ ಖಜಾನೆ ಭರ್ತಿ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.

ಕೋಟ್ಯಂತರ ಮೊತ್ತದ ಹಗರಣ ಮಾಡುವ ಕನಸನ್ನು ಕಾಂಗ್ರೆಸ್ ನವರು ಕಾಣುತ್ತಿದ್ದಾರೆ. ರಾಜ್ಯ ಲೂಟಿ ಮಾಡುವವರಿಗೆ ಮೇ 7ರಂದು ಶಿಕ್ಷೆ ಆಗಬೇಕಲ್ಲವೇ ಎಂದು ಪ್ರಶ್ನಿಸಿದರು.

ಭಾರತದ ಭವಿಷ್ಯ ಬರೆಯುವ, ವಿಕಸಿತ ಭಾರತ ನಿರ್ಮಾಣ,‌ ಆತ್ಮನಿರ್ಭರ್ ಚುನಾವಣೆ ಇದಾಗಿದೆ. ಭಾರತ ಕೆಲವೇ ವರ್ಷಗಳಲ್ಲಿ ವಿಶ್ವದ ಮೂರನೇ ಆರ್ಥಿಕ ಶಕ್ತಿ ಆಗಲಿದೆ. ಇದನ್ನು ಮಾಡಲು ನಿಮ್ಮ ಒಂದು ಮತ ಆ ಶಕ್ತಿ ನೀಡಲಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ, ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ‌. ಗದ್ದಿಗೌಡರ, ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮೇಶ ಜಿಗಜಿಣಗಿ ಇದ್ದರು.