ಮನೆ ಮನೆ ಮದ್ದು ಅಲರ್ಜಿ: ಭಾಗ-2

ಅಲರ್ಜಿ: ಭಾಗ-2

0

31. ಕರಿಗಣಿಕೆ, ಕೆಂಪುಗಣಿಕೆ ಸೊಪ್ಪನ್ನು ತಂದು  ಪಲ್ಯ ಮಾಡಿ ಸೇವಿಸುವುದರಿಂದ ಅಜೀರ್ಣದ ಬಾಧೆ ನಿವಾರಣೆಯಾಗುವುದು.

Join Our Whatsapp Group

32. ಪ್ರತಿದಿನವೂ ತುಳಸೀ ಎಲೆಗಳನ್ನು ಒಂದು ಹಿಡಿಯಷ್ಟು ಸಂಗ್ರಹಿಸಿ ಕುಟ್ಟಿ ರಸವನ್ನು ಸೇವಿಸುತ್ತಾ ಬಂದರೆ ಅಗ್ನಿ ಮಾಂದ್ಯ ಗುಣವಾಗಿ ಬಾಯಿ ರುಚಿ ಉತ್ತಮವಾಗುವುದು.

33. ದೊಣ್ಣೆ ಮೆಣಸಿನಕಾಯಿ ಅಥವಾ ಯಾವುದೇ ಮೆಣಸಿನಕಾಯಿಯನ್ನು ಹಾಗೇ ಹಲ್ಲಿನಿಂದ ಕಚ್ಚಿಕೊಂಡು ಅಗಿದು ಸೇವಿಸಿದರೆ ಅಗ್ನಿಮಾಂದ್ಯ ನಿವಾರಣೆ ಆಗುತ್ತದೆ.

34. ಪ್ರತಿದಿನವೂ ದ್ರಾಕ್ಷಿ ಹಣ್ಣನ್ನಾಗಲಿ, ಕಿತ್ತಳೆ ಹಣ್ಣುಗಳನ್ನಾಗಲಿ, ದಾಳಿಂಬೆ ಹಣ್ಣುನ್ನಾಗಲೀ, ಆಗಿದು ಸೇವಿಸುತ್ತಾ ಬಂದರೆ ಅಜೀರ್ಣದ ದೋಷ ನಿವಾರಣೆ ಆಗುವುದು ಪ್ರತಿದಿನವೂ ಒಂದು ಬಾಳೆಹಣ್ಣನ್ನು ತಿನ್ನುತ್ತಾ ಬಂದರೆ ಅಗ್ನಿ ಮಾಂಧ್ಯ ನಿವಾರಣೆಯಾಗುವುದು.

35. ಮೂಲಂಗಿಯನ್ನು ಚೆನ್ನಾಗಿ ತೊಳೆದು ತುರಿದು  ಅದಕ್ಕೆ ಮೊಸರು ಸೇರಿಸಿ ಊಟಕ್ಕೆ ಉಪಯೋಗಿಸುವುದರಿಂದ ಆಹಾರವು ಜೀರ್ಣವಾಗಿ ಹಸಿವು   ಹುಟ್ಟಿಸುವುದು.

36. ಪ್ರತಿದಿನವೂ ಖರ್ಜೂರದ ಹಣ್ಣನ್ನು ಊಟವಾದ ನಂತರ ಸೇವಿಸುವುದರಿಂದ ಬಾಯಿ ರುಚಿ ಹೆಚ್ಚಾಗಿ ಅಗ್ನಿ ಪುಟತ್ವ ವೃದ್ಧಿಯಾಗುವುದು.

37. ಅಜೀರ್ಣದ ದೋಷ  ಉಂಟಾದಾಗ ಕೆಸವಿನ ದಂಡಿನ ಸಾರು, ಹುಳಿಗಳನ್ನು ಮಾಡಿ ಸೇವಿಸಿದರೆ ಬಾಯಿ ರುಚಿಯಾಗಿ,  ಅಗ್ನಿ ಮಾಂದ್ಯ ನಿವಾರಣೆಯಾಗುವುದು.

38. ಬೆಳಿಗ್ಗೆ ಏಳುವಾಗಲೇ ಹುಳಿಯಾದ ತೇಗು ಬರುತ್ತಿದ್ದರೆ, ಅದು ಅಜೀರ್ಣ ದೋಷದಿಂದ ಆಹಾರವು ಪಚನವಾಗದೆ ಈ ತೊಂದರೆ ಆದಾಗ ಅಡಿಗೆಯಲ್ಲಿ ಒಂದು ಅವರೇ ಕಾಳಿನಷ್ಟು ಇಂಗು ಹಾಕಿ ಸೇವಿಸಿದರೆ  ಅಜೀರ್ಣ ನಿವಾರಣೆ ಆಗಿ ಹುಳಿ ತೇಗು ನಿಂತು ಹೋಗುವುದು.

39. ಕಬ್ಬಿಣದ ಸೌಟಿನಲ್ಲಿ ಒಗ್ಗರಣೆ ಮಾಡಿ,ಕುದಿಯುವ ಸಾರು ಹುಳಿ ಗೊಜ್ಜುಗಳಲ್ಲಿ ಅದನ್ನು ಅದ್ದಿ,ಚುರ್ ಅನ್ನಿಸುವುದರಿಂದ ಆಹಾರದಲ್ಲಿ ಕಬ್ಬಿಣದ ಅಂಶ ಸೇರಿ ಜೀರ್ಣ ಶಕ್ತಿ ಹೆಚ್ಚಿ,ರೋಗಾಣುಗಳು  ರಕ್ತದಲ್ಲಿ ನಾಶವಾಗುವಂತೆ ಸಹಾ ಮಾಡಿ ರೋಗ ನಿರೋಧಕ ದಿನ ಶಕ್ತಿ ಹೆಚ್ಚಿತ್ತದೆ.

40. ಕೆಲವರು ಊಟ ಮಾಡಿದ ಮೇಲೆ ಬಾಯಾಡಿಸಬೇಕು,ಅದಕ್ಕೆ ಹುರಿಗಾಳು,ಕಡಲೇಕಾಯಿ ಬೀಜ, ಹಲಸಂದಿ ಕಾಳುಗಳನ್ನು ಹುರಿದು ಉಪಯೋಗಿಸುತ್ತಿದ್ದರೆ.ಹೀಗೆ ಮಾಡುವುದರಿಂದ ನರಗಳ ದುರ್ಬಲತೆ ಕಡಿಮೆಯಾಗಿ ಅಜೀರ್ಣ ನಿವಾರಣೆ ಆಗುತ್ತದೆ. ಒಂದೆರಡು ವಾರಗಳವರೆಗೆ ಕ್ರಮವಾಗಿ ಸೇವಿಸಬೇಕು.

41. ಅನಾನಸ್ ಹಣ್ಣನ್ನು ಸಣ್ಣಗೆ ಹೆಚ್ಚಿ ಕರಿಕಾಳು ಮೆಣಸಿನ ಚೂರ್ಣ ಹಾಕಿ ಸೇವಿಸಿದರೆ ಅಜೀರ್ಣದ ದೋಷ ನಿವಾರಣೆಯಾಗುವುದು.

42. ಹಸಿಯ ಸೌತೆಕಾಯಿಯನ್ನು ಸಣ್ಣಗೆ ಹಚ್ಚಿ ಕೋಸಂಬರಿ ತರಹ ಮಾಡಿ ಅದಕ್ಕೆ ಕಾಳುಮೆಣಸಿನ ಪುಡಿ,ಉಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಹಾಕಿ, ಇಂಗನ್ನು ನೀರಿನಲ್ಲಿ ನೆನೆಸಿ ಒಂದೆರಡು ತೊಟ್ಟು ಹಾಕಿ  ಸೇವಿಸಿದರೆ ಯಾವ ರೋಗವೂ ಬರದ ಜೀರ್ಣಶಕ್ತಿ ಹೆಚ್ಚುತ್ತದೆ.

43. ಜೀರ್ಣ ಶಕ್ತಿಯು ತ್ವರಿತಗೊಳ್ಳಲು ಊಟವಾದ ಮೇಲೆ ಸೋಂಪು ಕಾಳನ್ನು ಬಾಯಲ್ಲಿ ಹಾಕಿಕೊಂಡು  ಅಗಿಯುತ್ತಾ ನೀರನ್ನು ನಂಗುತ್ತಿರಬೇಕು.

44. ಊಟವಾದ ನಂತರ ಹಸಿ ಅಡಿಕೆಯನ್ನು ಹಾಕಿಕೊಂಡು ವಿಳ್ಯದೆಲೆಗೆ ಸುಣ್ಣ ಹಚ್ಚಿಕೊಂಡು ಅಗಿಯುತ್ತಾ ಸಾಧ್ಯವಾದಷ್ಟು ಕಾಲ, ಬಂದ ರಸವನ್ನು ನುಂಗುತ್ತಿದ್ದರೆ ಯಾವ ಅಜೀರ್ಣ ದೋಷವೂ ಉಂಟಾಗಲಾರದು.

45. ಅಜೀರ್ಣ ರೋಗದಿಂದ ನರಳುವವರು ಜೇನುತುಪ್ಪದಲ್ಲಿ ಸಜ್ಜೆರೊಟ್ಟಿ ತಿಂದರೆ ನಿವಾರಣೆ ಆಗುವುದು. ಹೀಗೆ ಒಂದೆರಡು ವಾರ ಆಚರಿಸಬೇಕು.

46. ಮೆಂತ್ಯವನ್ನು ತುಪ್ಪದಲ್ಲಿ ಹುರಿದುಕೊಂಡು ಒಣಗಿದ ಸಾಸುವೆ ಸೊಪ್ಪನ್ನು ಬಾಣಲೆಗೆ ಹಾಕಿ ಬೆಚ್ಚಗೆ ಮಾಡಿಕೊಂಡು, ಉಪ್ಪು ಸೇರಿಸಿ ಕುಟ್ಟಿ ಪುಡಿ ಮಾಡಿ ಊಟದ ಮೊದಲ ಅನ್ನಕ್ಕೆ ಈ ಚೂರ್ಣ ಸೇರಿಸಿ ಊಟ ಮಾಡುವುದರಿಂದ ಅಗ್ನಿ ಮಾಂದ್ಯ ನಿವಾರಿಸುತ್ತದೆ.

47. ಒಂದು ಚಮಚ ಅಜವಾನ, ನಾಲ್ಕು ಕರಬೇವಿನ ಎಲೆಯನ್ನು ನುಣ್ಣಗೆ ಅರೆದು,ನೀರಿನಲ್ಲಿ ಬೆರೆಸಿ ಶೋಧಿಸಿ ಚೆನ್ನಾಗಿ ಕಾಯಿಸಿ ಆರಿಸಿದ ಹಾಲಿನಲ್ಲಿ ಸೇರಿಸಿ ಕುಡಿಯುವುದರಿಂದ ಅಜೀರ್ಣ ನಿವಾರಣೆಯಾಗುವುದು

48. ಹೊಟ್ಟೆಯಲ್ಲಿ ಬಾಧೆ, ಹೊಟ್ಟೆ ಹುಣ್ಣು, ಅಜೀರ್ಣ ಹಾಗೂ ಅಧಿಕ ಮದ್ಯಪಾನದಿಂದ ತಲೆ ಹಿಡಿದಿದ್ದರೆ,ಎರಡು ಲೋಟ ಬಿಸಿ ನೀರನ್ನು ಕುಡಿಯುವುದರಿಂದ ಗುಣವಾಗುವುದು.

49. ಪರಂಗಿ ಹಣ್ಣು ಚೆನ್ನಾಗಿ ಸೇವಿಸುವುದರಿಂದ ಶೀಘ್ರವಾಗಿ ಪವಚನವಾಗುವುದು.

50. ಹೊಟ್ಟೆ ನೋವಿನಿಂದ ನರಳುತ್ತಾ ಅಜೀರ್ಣ ದೋಷದಿಂದ ತೊಂದರೆ ಪಡುತ್ತಿರುವವರು ನೆಲ್ಲಿ ಕಾಯಿ ರಸಕ್ಕೆ ಸಕ್ಕರೆ ಮಿಶ್ರ ಮಾಡಿ ಕುಡಿಯುವುದರಿಂದ ಗುಣವಾಗುವುದು.

51. ಮಧ್ಯಾಹ್ನದ ಊಟವಾದ ಮೇಲೆ ಅರ್ಧ ಗಂಟೆ ವಿಶ್ರಾಂತಿ ತೆಗೆದುಕೊಳ್ಳಬೇಕು.ರಾತ್ರಿ ಊಟವಾದ ನಂತರ ಸ್ವಲ್ಪ ದೂರ ನಡೆದರೆ ಅಜೀರ್ಣ ನಿರ್ವಹಣೆ ಆಗುವುದು .

52. ಪುದಿನ ಸೊಪ್ಪಿನ ಚಟ್ನಿ,ಕೊತ್ತಂಬರಿ ಸೊಪ್ಪಿನ ಚಟ್ನಿ, ಕರಬೇವಿನ ಸೊಪ್ಪಿನ ಚಟ್ನಿ, ತಯಾರಿಸಿ ಸೇವಿಸುರವುದರಿಂದ  ಅಜೀರ್ಣ ದೋಷ ನಿವಾರಣೆ ಆಗುವುದು.

53. ದೊಡ್ಡಪತ್ರೆ ಸೊಪ್ಪುಗಳನ್ನು ಸಣ್ಣಗೆ ಹೆಚ್ಚಿ ಉಪ್ಪು ಸೇರಿಸಿ ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚಾಗುವುದು.

54. ಪುದಿನ ಸೊಪ್ಪು, ಕೊತ್ತಂಬರಿ ಸೊಪ್ಪುಗಳಿಗೆ ನಿಂಬೇರಸ ಸೇರಿಸಿ,ಉಪ್ಪು ಸ್ವಲ್ಪ ಹಾಕಿ ಸೇವಿಸಿದರೆ ಜಠರ ರಸ ಸುರಿದು   ಜೀರ್ಣಶಕ್ತಿ ಹೆಚ್ಚುವುದು.

55. ಪುದಿನ ಸೊಪ್ಪಿನಲ್ಲಿ ಟೀ ತಯಾರಿಸಿ ಸೇವಿಸುತ್ತಾ ಬಂದರೆ ಜೀರ್ಣ ಶಕ್ತಿ ಹೆಚ್ಚಾಗುವುದು.

56. ಪ್ರತಿದಿನವೂ ಮೋಸಂಬಿ ಹಣ್ಣನ್ನು ಸೇವಿಸುವುದು ಅಥವಾ ಅದರ ರಸ ಸೇರಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.ಅದೇ ರೀತಿ ನೇರಳೇಹಣ್ಣನ್ನು ತಿಂದರೆ ಜೀರ್ಣ ಶಕ್ತಿ  ಹೆಚ್ಚುವುದು.

57. ನಾವು ತಯಾರಿಸುವ ಉಪ್ಪಿಟ್ಟು,ರೊಟ್ಟಿ, ಹುಳಿ,ಸಾರುಗಳಿಗೆ ಕರಿಬೇವಿನ ಸೊಪ್ಪನ್ನು ಹಾಕಿರುತ್ತೇವೆ. ಅದನ್ನು ಬಿಸಾಡದೆ ಅಗಿದು ತಿಂದರೆ ಅಗ್ನಿ ಪುಟತ್ವ ಹೆಚ್ಚಾಗುವುದು.ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದೆ.

58. ಚಟ್ನಿ ಪುಡಿ ಮೆಣಸಿನಪುಡಿ, ವಾಂಗೀಭಾತ್ ಪುಡಿಗಳಿಗೆ ಕರಿಬೇವಿನ ಸೊಪ್ಪನ್ನು ಸೇರಿಸಿ ಪುಡಿ  ಮಾಡುವುದರಿಂದ ಅಗ್ನಿ ಪುಟತ್ವ ಹೆಚ್ಚಿ ಅಜೀರ್ಣ ನಿವಾರಣೆ ಆಗುವುದು.

59. ಊಟವಾದ ನಂತರ ಈರುಳ್ಳಿ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುವುದು.

60. ಊಟವಾದ ಮೇಲೆ ಓಮಿನ ಕಾಳನ್ನಾದರೂ ಏಲಕ್ಕಿ ಕಾಳನ್ನಾದರೂ ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುವುದು.

61. ಅವರೆಕಾಳನ್ನು ಚೆನ್ನಾಗಿ ಬೇಯಿಸಿ,ತಿನ್ನುವುದು ಅವರೇ ಕಾಳನ್ನು ಹುರಿದು ಊಟವಾದ ಮೇಲೆ ತಿನ್ನುತ್ತಾ ಬಂದರೆ ಅಗ್ನಿಮಾಂದ್ಯ ನಿವಾರಣೆ ಆಗುವುದು.

62. ಅನ್ನವನ್ನು ಮಾಡುವಾಗ ಗಂಜಿ ಬಸಿಯಬಾರದು. ಹಾಗೆ ಬಸಿದರೆ ಬಸಿದ ಗಂಜಿಯನ್ನು ಶೇಖರಿಸಿ ಉಪ್ಪು ಸೇರಿಸಿ ಕುಡಿಯುವುದರಿಂದ ‘ಅನ್ನಾಂಗ ಬಿ’ಯು ನಮ್ಮ ದೇಹ ಸೇರಿ ಜೀರ್ಣಕ್ರಿಯೆಗೆ ಸಹಾಯವಾಗುವುದು.

63. ದ್ವಾದಶಿ ದಿವಸ ಅಗಸೇ ಸೊಪ್ಪಿನ ಪಲ್ಯ ಮಾಡಬೇಕೆಂಬ ನಿಯಮ,ಮಲಬದ್ದತೆ ನಿವಾರಣೆ ಮಾಡಿ ಅಗ್ನಿ ಪುಟತ್ವ ಹೆಚ್ಚಿಸುತ್ತದೆ .

64. ಊಟವಾದ ನಂತರ ಏನನ್ನಾದರೂ ಆಗಿಯುತ್ತಾ ಇದ್ದರೆ,ಜೊಲ್ಲು ರಸವು ಆಹಾರದಲ್ಲಿ ಸೇರಿ ಜೀರ್ಣಕ್ರಿಯೆಗೆ  ಸಹಾಯ ಮಾಡುವುದರಿಂದ,ಒಂದು ಚೂರು ಶುಂಠಿಯನ್ನು ಅಗಿಯುತ್ತಿದ್ದರೆ,ಅಜೀರ್ಣ ಗುಣವಾಗಿ ಹೊಟ್ಟೆಯ ಹುಣ್ಣು ಮಾಯುವುದು.

65. ಊಟವಾದ ಮೇಲೆ ಬಿಳಿಯ ಬೀಜವಿಲ್ಲದ ದ್ರಾಕ್ಷಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗುವುದು.

66. ಪ್ರತಿದಿನ ಬೆಳಿಗ್ಗೆ ಎದ್ದು, ಒಂದು ಲೋಟ ತಣ್ಣೀರಿಗೆ ಒಂದು ಚಮಚ ಜೇನು ಬೆರಿಸಿ ಕುಡಿಯುತ್ತಾ ಬಂದರೆ ಪುಟತ್ವ ಹೆಚ್ಚಾಗುವುದು.

67. ಪ್ರತಿದಿನವೂ ಊಟವಾದ ಮೇಲೆ ಒಂದು ಬಾಳೆಹಣ್ಣನ್ನು ಸೇವಿಸುತ್ತಾ ಬಂದರೆ ಅಗ್ನಿ ಮಾಂದ್ಯ ನಿವಾರಣೆ ಆಗುವುದು.

68. ಆಯಾ ಕಾಲಕ್ಕೆ  ತಕ್ಕಂತೆ ನುಗ್ಗೆ ಎಲೆಯ ಪಲ್ಯ  ಮಾಡಿ ಸೇವಿಸಿದರೆ ಅಜೀರ್ಣ  ನಿವಾರಣೆ ಆಗುವುದು. ನುಗ್ಗೇಕಾಯಿಯ ಹುಳಿ ಸೇವಿಸಿದರೆ ಅಗ್ನಿ ಪುಟತ್ವ ಹೆಚ್ಚಾಗುವುದು.

69. ಕಿರುನೆಲ್ಲಿ ನೆಲನೆಲ್ಲಿ ಬಿಟ್ಟೆ ನೆಲ್ಲಿ ಎಂದು ನೆಲ್ಲಿಕಾಯಿಯ ವಿಧಗಳುಂಟು. ನೆಲ್ಲಿ ಕಾಯಿಯನ್ನು ಜೇನುತುಪ್ಪದಲ್ಲಿಯಾಗಲೀ ಉಪ್ಪಿನೊಂದಿಗಾಗಲಿ ಸೇವಿಸುತ್ತಾ ಬರಲು ಜೀರ್ಣ ಶಕ್ತಿ ಹೆಚ್ಚಾಗುವುದು.

70. ಎಂಥಹ ಅಜೀರ್ಣ ರೋಗವಿದ್ದರೂ, ಎರಡು ಬೆಳ್ಳುಳ್ಳಿ ಗಡ್ಡೆಯ ಹಿಲಕುಗಳನ್ನು ನೀರಿನಲ್ಲಿ ಬೇಯಿಸಿ, ನುಣ್ಣಗೆ ಅರೆದು ಅದಕ್ಕೆ ಬೆಲ್ಲ ಅಥವಾ ಸಕ್ಕರೆ ಬೆರೆಸಿ ಕುಡಿಯುವುದರಿಂದ ಅಜೀರ್ಣ ರೋಗ ನಿವಾರಣೆ ಆಗುವುದು .

71. ಮಜ್ಜಿಗೆ ಅಥವಾ ಮೊಸರಿನ ಜೊತೆಯಲ್ಲಿ ನಿಂಬೆಕಾಯಿ ಉಪ್ಪಿನಕಾಯಿ, ಮಾವಿನ ಕಾಯಿ ಉಪ್ಪಿನಕಾಯಿ, ನೆಲ್ಲಿಕಾಯಿ ಉಪ್ಪಿನಕಾಯಿ ಸೇವಿಸುವುದರಿಂದ, ಅಗ್ನಿ ಪುಟತ್ವ   ಹೆಚ್ಚಿ ಅಜೀರ್ಣ  ನಿವಾರಿಸುವುದು.

72. ಸಣ್ಣ ಸಣ್ಣ ಮಾವಿನ ಮಿಡಿಗಳನ್ನು ಹೆಚ್ಚಿ, ಉಪ್ಪಿನ ಜೊತೆಯಾಲ್ಲಾಗಲೀ ಅಥವಾ ಜೇನುತುಪ್ಪದಲ್ಲಾಗಲೀ ಸೇವಿಸುವುದರಿಂದ ಜೀರ್ಣ ಶಕ್ತಿ ಹೆಚ್ಚುವುದು.