ಬೆಂಗಳೂರು: ಆದಾಯ ತೆರಿಗೆ ಪಾವತಿಸಿದ ಆರೋಪದಡಿ ಕಾಂಗ್ರೆಸ್ ಮಾಜಿ ವಿಧಾನ ಪರಿಷತ್ ಸದಸ್ಯನ ಮನೆ ಮೇಲೆ ಇಂದು ಬೆಳ್ಳಂಬೆಳ್ಳಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜೆ.ಪಿ.ನಗರದಲ್ಲಿರುವ ಮಾಜಿ ಎಂಎಲ್ ಸಿ ವೇಣುಗೋಪಾಲ್ ಮನೆಗೆ ಎರಡು ಇನ್ನೋವಾ ಕಾರಿನಲ್ಲಿ 15 ಮಂದಿ ಅಧಿಕಾರಿಗಳ ತಂಡ ತೆರಳಿ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ವೇಣುಗೋಪಾಲ್ ಮನೆ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.
Saval TV on YouTube