ಮನೆ ಸ್ಥಳೀಯ ವ್ಯವಸ್ಥಿತ ಘನ ತ್ಯಾಜ್ಯ ನಿರ್ವಹಣೆಯಿಂದ  ಆರೋಗ್ಯಪೂರ್ಣ ವಾತಾವರಣ ನಿರ್ಮಿಸಬಹುದು: ಡಾ. ಕೆ ವಿ ರಾಜೇಂದ್ರ

ವ್ಯವಸ್ಥಿತ ಘನ ತ್ಯಾಜ್ಯ ನಿರ್ವಹಣೆಯಿಂದ  ಆರೋಗ್ಯಪೂರ್ಣ ವಾತಾವರಣ ನಿರ್ಮಿಸಬಹುದು: ಡಾ. ಕೆ ವಿ ರಾಜೇಂದ್ರ

0

ಮೈಸೂರು :ವ್ಯವಸ್ಥಿತ ಘನ ತ್ಯಾಜ್ಯ ನಿರ್ವಹಣೆಯಿಂದ ಸುತ್ತಮುತ್ತಲಿನ ಪರಿಸರದ ನೈರ್ಮಲ್ಯ ಕಾಪಾಡಿಕೊಳ್ಳುವ ಜತೆಗೆ ಆರೋಗ್ಯಪೂರ್ಣ ವಾತಾವರಣ ನಿರ್ಮಿಸಬಹುದು ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಸಲಹೆ ನೀಡಿದರು.

Join Our Whatsapp Group

ಇಂದು ಮೈಸೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಘನ ಮತ್ತು ದ್ರವ ತ್ಯಾಜ್ಯಗಳು  ವ್ಯವಸ್ಥಿತ ನಿರ್ವಹಣೆ  ಸಂಬಂಧ ನಡೆದ  ಸಭೆಯಲ್ಲಿ ಮಾತನಾಡಿದ ಅವರು, ನಗರದ ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಹಸಿ ಕಸ, ಒಣ ಕಸ ಹಾಗೂ ನಿರುಪಯುಕ್ತ ಕಸ ಎಂದು ಮೂರು ಭಾಗಗಳಾಗಿ ಪ್ರತ್ಯೇಕವಾಗಿ ವಿಂಗಡಿಸಿ, ವಿಲೇವಾರಿ ಮಾಡಬೇಕು. ನಗರದ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯದ ರಾಶಿ ಕಂಡುಬರಬಾರದು ಎಂದು ತಿಳಿಸಿದರು.

ಮೈಸೂರನ್ನು  ತ್ಯಾಜ್ಯ ಮುಕ್ತ ನಗರಿಯಾನ್ನಾಗಿಸಲು  ರೂಪಿಸಲು ಮೈಸೂರು ಮಹಾನಗರ ಪಾಲಿಕೆಯ‌ ಅಧಿಕಾರಿಗಳು ಮುಂದಾಗಬೇಕು. ಈ ಬಾರಿ ಸ್ವಚ್ಛತಾ ನಗರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು   ಮೈಸೂರು ಮಹಾನಗರ ಪಾಲಿಕೆಯು ಪ್ಲಾಸ್ಟಿಕ್‌ ಮುಕ್ತ ಮೈಸೂರು ನಗರ ಮಾಡಲು ಅಧಿಕಾರಿಗಳು ಮುಂದಾಗಬೇಕು. ಇದನ್ನು ಎಲ್ಲರೂ ವೈಯಕ್ತಿಕವಾಗಿ ಪರಿಗಣಿಸಿ ಇಲಾಖೆಗಳ ಸಮನ್ವಯತೆಯೊಂದಿಗೆ  ಕೆಲಸ ನಿರ್ವಹಿಸಿ ಯಶಸ್ವಿ ಮಾಡಬೇಕು ಎಂದರು.

ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ ತ್ಯಾಜ್ಯದ ರಾಶಿಗಳು ಕಂಡುಬರುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಹಾಗೂ ಸುತ್ತಮುತ್ತಲಿನ ವಾತಾವರಣ ಹಾಳಾಗಲು ಕಾರಣವಾಗುತ್ತಿದೆ. ಹಾಗಾಗಿ ಮೊದಲು ತ್ಯಾಜ್ಯಗಳು ಹುಟ್ಟುತ್ತಿರುವ ಮೂಲವನ್ನು ತಿಳಿದು ಅಲ್ಲಿಂದಲೇ ನಿಯಂತ್ರಿಸಬೇಕು. 

ಪ್ಲಾಸ್ಟಿಕ್ ನಿರ್ಮೂಲನೆ ಮಾಡಿ ಮೈಸೂರನ್ನು ಮತ್ತೆ ಸ್ವಚ್ಛತಾ ನಗರಿ ಮಾಡಲು ಅಧಿಕಾರಿಗಳ ಜೊತೆಗೆ ಸಾರ್ವಜನಿಕರ ಸಹಕಾರವು ಬಹಳ ಮುಖ್ಯವಾಗಿರುತ್ತದೆ ಎಂದು ಅವರು ತಿಳಿಸಿದರು.

 ಚತ್ತೀಸ್‌ಗಢದ ಅಂಬಿಕಾಪುರದಲ್ಲಿ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ವಿನೂತ ಯೋಜನೆ ಜಾರಿಯಾಗಿದ್ದು ಈ ಯೋಜನೆಯ ಪರಿಕಲ್ಪನೆ ವಿಶೇಷವಾಗಿದೆ. 

 ಈ ಮಾದರಿಯಲ್ಲಿ ಟನ್ ಗಟ್ಟಲೇ ಉತ್ಪತ್ತಿಯಾಗುತ್ತಿರುವ  ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿಗೆ ಜಿಲ್ಲಾಡಳಿತ ಚಿಂತನೆ ನಡೆಸಿದ್ದು ಹಸಿವು ನೀಗಿಸುವುದರ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯ ತಡೆಗಟ್ಟುವಲ್ಲಿ ಈ ಯೋಜನೆ ಪರಿಣಾಮಕಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಕೊಟ್ಟರೆ ಅವರಿಗೆ ಇಂದಿರಾ ಕ್ಯಾಂಟಿನ್ ನಲ್ಲಿ  ಉಚಿತ ಊಟ ನೀಡುವ ಯೋಜನೆ ರೂಪಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮುಂಬರುವ ದಿನಗಳಲ್ಲಿ ಕ್ಲೀನ್ ಸಿಟಿ ಸರ್ವೆಯಲ್ಲಿ ಮೈಸೂರು 7 ಸ್ಟಾರ್ ಪಡೆಯುವುವ ಗುರಿಯನ್ನು ಹೊಂದಿದ್ದು, ಈ ಗುರಿಯನ್ನು ತಲುಪುವಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಾಹಿಸಬೇಕು ಎಂದು ತಿಳಿಸಿದರು.

ಪ್ಲಾಸ್ಟಿಕ್ ನ ಬಳಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಆದಷ್ಟು ಪ್ಲಾಸ್ಟಿಕ್ ಮುಕ್ತ ನಗರ ಮಾಡಬೇಕು. ಕೆಲವೊಂದು ಪುನರ್ ಬಳಕೆ ಮಾಡಬಹುದಾದ ವಸ್ತುಗಳನ್ನು ಉಪಯೋಗಿಸಿ ಅಯೋಗ್ಯಕರ ವಾತಾವರಣ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೈಸೂರಿನ 65 ವಾರ್ಡ್ ನ ಪ್ರತಿಯೊಬ್ಬ ಅಧಿಕಾರಿಯು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಗೆ ಬರುವ ಎಲ್ಲಾ ಕೆಲಸವನ್ನು ಕಟ್ಟು ನಿಟ್ಟಾಗಿ ಮಾಡಿ, ಪ್ರತಿಯೊಂದು ಹಂತದಲ್ಲಿಯೂ ಅಭಿವೃದ್ಧಿ ಮಾಡಬೇಕು ಎಂದರು.

ಈ ಬಾರಿಯ ದಸರಾ ಹಬ್ಬಕ್ಕೂ ಮೊದಲೇ ನಗರವನ್ನು ಸ್ವಚ್ಛ ಮಾಡುವುದರ ಮೂಲಕ ಮೈಸೂರಿಗೆ ಬಂದಂತಹ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಮುಜುಗರವಾಗದಂತೆ ನೋಡಿಕೊಳ್ಳಬೇಕು ಎಂದರು.

 ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಎನ್ ಎನ್ ಮಧು, ಮೂಡಾ ಆಯುಕ್ತರಾದ ದಿನೇಶ್, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸಿಂಧು, ಹೆಚ್ಚುವರಿ ಆಯುಕ್ತರಾದ ಕುಸುಮಾ ಕುಮಾರಿ,  ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ವೆಂಕಟೇಶ್ ಸೇರಿದಂತೆ ಮಹಾನಗರ ಪಾಲಿಕೆ ಎಇ, ಎಇಇ ಹಾಗೂ ಇಂಜಿನಿಯರ್ ಗಳು ಉಪಸ್ಥಿತರಿದ್ದರು.