ಮನೆ ಅಪರಾಧ ಸೈಬರ್​​ ಕಳ್ಳರ ಜಾಲಕ್ಕೆ 5.17 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಉದ್ಯಮಿ

ಸೈಬರ್​​ ಕಳ್ಳರ ಜಾಲಕ್ಕೆ 5.17 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಉದ್ಯಮಿ

0

ಬೆಂಗಳೂರು: ಸೈಬರ್​​ ಕಳ್ಳರ ಜಾಲಕ್ಕೆ ಸಿಲುಕಿ ವ್ಯಕ್ತಿಯೊಬ್ಬ 5.17 ಕೋಟಿ ರೂ. ಕಳೆದುಕೊಂಡಿದ್ದಾರೆ.

Join Our Whatsapp Group

ಉದ್ಯಮಿ ಅಶೋಕ್ ತಿರುಪಲಪ್ಪ ವಂಚನೆಗೆ ಒಳಗಾದವರು.

ಇದೇ ವರ್ಷ ಫೆಬ್ರವರಿ 3 ರಂದು ಅಶೋಕ್​ ಅವರ ವಾಟ್ಸಪ್​ ಗೆ ಅಪರಿಚಿತ ನಂಬರ್ ​​ನಿಂದ https://www.bys-app.com ಬರುತ್ತದೆ. ಆದರೆ ಅಶೋಕ್​ ಈ ಲಿಂಕ್​ ಅನ್ನು ತೆರೆದಿರುವುದಿಲ್ಲ.

ಸ್ವಲ್ಪ ಸಮಯದಲ್ಲಿ ಬಳಿಕ ಅಶೋಕ್​ ಅವರನ್ನು ವೈ-5-ಎವರ್ ಕೋರ್ ಫೈನಾನ್ಸಿಯಲ್ ಲೀಡರ್ ಎಂಬ ವಾಟ್ಸಪ್​ ಗ್ರೂಪ್​ಗೆ ಆ್ಯಡ್​ ಮಾಡಲಾಗುತ್ತದೆ. ಬಳಿಕ ತೇಜಸ್ ಖೋಡೆ, ಗೋಪಾಲ್ ಕಾವಲ್ರೆಡ್ಡಿ, ಕೇರೋಲಿನ್ ಕ್ರುಕ್ಸ್ ಎಂಬ ಅಪರಿಚಿತರು ಅಶೋಕ್​ ಅವರಿಗೆ ಕರೆ ಮಾಡಿ “ಲಿಂಕ್ ಮೇಲೆ ಕ್ಲಿಕ್​ ಮಾಡಿ ಆ್ಯಪ್​ ಡೌನ್​​ಲೋಡ್​ ಮಾಡಿ. ಆ ಆ್ಯಪ್​ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ಪ್ರೇರೇಪಿಸಿದ್ದಾರೆ.

ಸ್ವಲ್ಪ ದಿನಗಳ ಬಳಿಕ ಅಶೋಕ್ ಆ್ಯಪ್​ ಡೌಲೋಡ್​ ಮಾಡುತ್ತಾರೆ. ಬಳಿಕ ಅಶೋಕ್​ ತಮ್ಮ ಎಸ್​ಬಿಐ ಅಕೌಂಟ್​ನಿಂದ ಆರೋಪಿಗಳು ಸೂಚಿಸಿದ ಅಕೌಂಟ್​ಗೆ ಹಂತ ಹಂತವಾಗಿ ಹಣ ಹಾಕಲು ಆರಂಭಿಸುತ್ತಾರೆ. ಹೀಗೆ ಬರೊಬ್ಬರಿ 5.17 ಕೋಟಿ ರೂ. ಹಣವನ್ನು ಅಶೋಕ್​ ಆರೋಪಿಗಳು ಸೂಚಿಸಿದ ಅಕೌಂಟ್​ಗೆ ಹಾಕುತ್ತಾರೆ. ಇದಾದ ಬಳಿಕ ಆರೋಪಿಗಳು ಮತ್ತೆ ಅಶೋಕ್​ ಅವರನ್ನು ಸಂಪರ್ಕಿಸಿ ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ಹೇಳುತ್ತಾರೆ.

ಆಗ ಅಶೋಕ್​ ಇದಕ್ಕೆ ಒಪ್ಪದೆ, ಮೊದಲು ಹೂಡಿಕೆ ಮಾಡಿದ್ದ ಹಣವನ್ನು ಮರಳಿ ಪಡೆಯಲು ಆ್ಯಪ್ ​​ನಲ್ಲಿ ಪ್ರಯತ್ನಿಸುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಆಗ ಅಶೋಕ್​ ಅವರಿಗೆ ತಾನು ಮೋಸ ಹೋಗಿದ್ದೇನೆ ಎಂದು ತಿಳಿಯುತ್ತದೆ. ಕೊನೆಗೆ ಅಶೋಕ್​ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಅಶೋಕ್​ ದೂರಿನ ಅನ್ವಯ ಸೈಬರ್​ ಕ್ರೈಂ ಪೊಲೀಸರು Fyers Securities Pvt Ltd, Eercore Company ಎಂಬ ಕಂಪನಿಗಳ ಮೇಲೆ ಎಫ್​ಐಆರ್ ದಾಖಲಿಸಿದ್ದಾರೆ.

ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸಿದ್ದಾರೆ.