ಮನೆ ಕಾನೂನು ಸುವರ್ಣ ವಾಹಿನಿಯ ಅಜಿತ್ ಹನುಮಕ್ಕನವರ್ ವಿರುದ್ಧ ಪ್ರಕರಣ ದಾಖಲು

ಸುವರ್ಣ ವಾಹಿನಿಯ ಅಜಿತ್ ಹನುಮಕ್ಕನವರ್ ವಿರುದ್ಧ ಪ್ರಕರಣ ದಾಖಲು

0

ಬೆಂಗಳೂರು: ಸುವರ್ಣ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾರತದ ಮುಸ್ಲಿಮರಿಗೆ ಅವಮಾನಿಸಲಾಗಿದೆ ಎಂದು ಆರೋಪಿಸಿ, ದೂರು ನೀಡಲಾಗಿದ್ದು, ಸುವರ್ಣ ಸುದ್ದಿವಾಹಿನಿ ಸಂಪಾದಕ ಅಜಿತ್ ಹನುಮಕ್ಕನವರ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Our Whatsapp Group

ತನ್ವೀರ್ ಅಹ್ಮದ್ ಎಂಬುವವರು ನೀಡಿದ ದೂರುಗಳನ್ನು ಎಫ್‌ಐಆರ್ ದಾಲು ಮಾಡಿಕೊಳ್ಳಲಾಗಿದೆ. ಹಾಜರಾಗಲು ನೋಟಿಸ್ ಜಾರಿ ಮಾಡಲಾಗಿದ್ದರೂ ಅವರು ವಿಚಾರಣೆಗೆ ಬಂದಿಲ್ಲ’ ಎಂದು ಪೊಲೀಸ್ ಮೂಲಗಳು ವಿಚಾರಣೆಗೆ ತಿಳಿಸಿವೆ.

ಮೇ ೯ರಂದು ರಾತ್ರಿ ೮.೩೦ಕ್ಕೆ ಅಜಿತ್ ಅವರು ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದರು. ಪರದೆಯ ಮೇಲೆ ಹಿಂದೂಗಳ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಭಾರಿ ಏರಿಕೆ ಎಂದು ಬರೆಯಲಾಗಿತ್ತು. ಭಾರತದ ರಾಷ್ಟ್ರಧ್ವಜ ಹಾಕಿ ಹಿಂದೂ ಜನಸಂಖ್ಯೆ ಶೇ ೭.೮೨ ಇಳಿಕೆ ಹಾಗೂ ಪಾಕಿಸ್ತಾನದ ರಾಷ್ಟ್ರಧ್ವಜ ಹಾಕಿ ಮುಸ್ಲಿಂ ಜನಸಂಖ್ಯೆ ಶೇ ೪೩.೧೫ ಬಾರಿ ಏರಿಕೆ ಎಂದು ಬರೆದು ಕಾರ್ಯಕ್ರಮ ನಡೆಸಿಕೊಡಲಾಗಿತ್ತು.

ಭಾರತದ ಮುಸ್ಲಿಮರನ್ನು ಪಾಕಿಸ್ತಾನದವರೆಂದು ಬಿಂಬಿಸಿ ಅವಮಾನ ಮಾಡಲಾಗಿದೆ. ಮುಸ್ಲಿಂ ಸಮುದಾಯದವರು ಭಾರತದ ದೇಶದ ಸ್ವಾತಂತ್ರ್ಯ ಹೋರಾಟದ ಹಾದಿಯಿಂದ ಇದುವರೆಗೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೂ, ಈ ಸಮುದಾಯವನ್ನು ಅವಮಾನಿಸುವ ರೀತಿಯಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಅಜಿತ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.