ಹಿರಿಯೂರು (ಚಿತ್ರದುರ್ಗ): ಬಿರುಗಾಳಿ ಸಹಿತ ಸುರಿದ ಮಳೆಗೆ ಉದುರಿ ಬಿದ್ದ ಹುಣಸೆ ಹಣ್ಣು ತಿಂದು 12 ಕುರಿ ಮೃತಪಟ್ಟ ಘಟನೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿ ಕರಿಯಾಲ ಗ್ರಾಮದಲ್ಲಿ ನಡೆದಿದೆ.
ರಾಮಕೃಷ್ಣಪ್ಪ ಎಂಬುವವರ 70 ಕುರಿಗಳಲ್ಲಿ 12 ಕುರಿಗಳು ಸಾವನ್ನಪ್ಪಿದ್ದು, ಇನ್ನೂ ಹತ್ತು ಕುರಿಗಳ ಸ್ಥಿತಿ ಗಂಭೀರವಾಗಿದೆ. ಪಶುವೈದ್ಯ ಡಾ. ಅರುಣ್ ಚಿಕಿತ್ಸೆ ನೀಡಿದ್ದು, ಕೆಲವು ಕುರಿಗಳು ಸುಧಾರಿಸಿಕೊಳ್ಳುತ್ತಿವೆ.
ದರ ಕುಸಿತದ ಕಾರಣಕ್ಕೆ ಹುಣಸೆ ಹಣ್ಣು ಕೀಳದೇ ರೈತರು ಮರದಲ್ಲಿಯೇ ಬಿಟ್ಟುದ್ದರು. ಭಾನುವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಹಣ್ಣು ಉದುರಿದ್ದವು. ಸೋಮವಾರ ಸಂಜೆ ಈ ಹಣ್ಣುಗಳನ್ನು ಕುರಿಗಳು ತಿಂದಿದ್ದವು. ಹುಣಸೆಹಣ್ಣು ಕುತ್ತಿಗೆಯಲ್ಲಿ ಸಿಕ್ಕಿಕೊಂಡಿದ್ದರೆ, ಬೀಜಗಳು ಹೊಟ್ಟೆ ಒಳಗೆ ಸೇರಿ ಊದಿಕೊಂಡ ಪರಿಣಾಮ ಕುರಿಗಳು ಸಾವನ್ನಪ್ಪಿವೆ ಎಂದು ಮೂಲಗಳು ಮಾಹಿತಿ ನೀಡಿವೆ. ಕುರಿಗಳು ಸಾವನ್ನಪ್ಪಿವೆ ಎಂದು ಮೂಲಗಳು ಮಾಹಿತಿ ನೀಡಿವೆ.