ಮೈಸೂರು (Mysuru)- ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಗಣೇಶ್ ಕಾರ್ಣಿಕ್ (Ganesh Karnik) ಭರವಸೆ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟವನ್ನು ಬಿಜೆಪಿ ಸಮರ್ಥವಾಗಿ ನಿಭಾಯಿಸಿದೆ. ದೇಶದ ಜನರಿಗೆ ದಾಖಲೆ ಮಟ್ಟದಲ್ಲಿ ಲಸಿಕೆ ನೀಡಿದೆ. ಇದೆಲ್ಲವನ್ನು ಗಮನಿಸಿ ಪದವೀಧರರು ನಮ್ಮನ್ನು ಗೆಲ್ಲಿಸಲಿದ್ದಾರೆ ಎಂದರು.
ಕಾಂಗ್ರೆಸ್ ಸೋಲಿನ ಹತಾಶೆಯಿಂದ ಬಿಜೆಪಿಯ ಮಾರ್ಗಗಳನ್ನು ಅನುಸರಿಸುತ್ತಿದೆ. ನಮ್ಮನ್ನು ನೋಡಿಕೊಂಡು ಕಾಂಗ್ರೆಸ್ ನವರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಬಿಜೆಪಿ ಚಿಂತನ ಶಿಬಿರ ಮಾಡುತ್ತಿತ್ತು, ಇದನ್ನೇ ಇಂದು ಕಾಂಗ್ರೆಸ್ ಫಾಲೋ ಮಾಡುತ್ತಿದೆ ಎಂದು ಹೇಳಿದರು.
ಶಾಲಾ ಪಠ್ಯಕ್ರಮದಲ್ಲಿ ಬದಲಾವಣೆ ವಿಚಾರದ ಕುರಿತು ಮಾತನಾಡಿದ ಅವರು, ಆಮ್ ಆದ್ಮಿ ಪಾರ್ಟಿ ನ್ಯಾಷನಲ್ ಫ್ರಾಡ್ ಪಾರ್ಟಿ. ಪ್ರಚಾರದ ಕೀಳುಮಟ್ಟಕ್ಕೆ ಭಗತ್ ಸಿಂಗ್ ವಿಚಾರ ತೆಗೆಯಲಾಗಿದೆ ಅಂತ ಸುಳ್ಳುಸುದ್ದಿ ಹಬ್ಬಿಸಿದೆ. ನಾವು ಭಗತ್ ಸಿಂಗ್ ರವರನ್ನ ಕ್ರಾಂತಿಕಾರಿ ಅಂತ ಪೂಜಿಸುತ್ತೇವೆ. ಆದರೆ ಇತರ ಪಕ್ಷಗಳು ಸ್ವಂತ ಪ್ರಚಾರಕ್ಕೋಸ್ಕರ ಕೀಳುಮಟ್ಟದ ಪ್ರಚಾರ ಮಾಡುತ್ತಿವೆ. ಇದನ್ನ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಮೈಸೂರು ಇಂಡಸ್ಟ್ರಿ ಹಬ್ ಆಗುತ್ತಿದೆ. ಸೆಮಿ ಕಂಡಕ್ಟರ್ ಹಾಗೂ 10ವೇ ರಸ್ತೆ ನಿರ್ಮಾಣವಾಗುತ್ತಿದೆ. ಈ ಮೂಲಕ ಮೈಸೂರಿನಲ್ಲಿ ಇಂಡಸ್ಟ್ರಿಗಳು ನಿರ್ಮಾಣವಾಗುತ್ತಿದೆ. ದೇಶದಲ್ಲಿ ಎರಡೇ ಕಡೆಗಳಲ್ಲಿ ಸೆಮಿ ಕಂಡಕ್ಟರ್ ಗಳು ನಿರ್ಮಾಣವಾಗುತ್ತಿದೆ. ಈ ಪೈಕಿ ಮೈಸೂರು ಸಹ ಒಂದು. ಈ ಮೂಲಕ ವೇಗವಾಗಿ ಆರ್ಥಿಕತೆ ಹಾಗೂ ಉದ್ಯೋಗ ಅಭಿವೃದ್ಧಿಯಾಗಲಿದೆ. ಈ ಪೈಕಿ ಮೈಸೂರು ಸಹ ಇಂಡಸ್ಟ್ರಿ ಹಬ್ ಆಗುತ್ತಿದೆ ಎಂದರು.