ಮನೆ ರಾಷ್ಟ್ರೀಯ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್‌: ಭಾರತದ ನಿಖತ್ ಜರೀನ್‌ ಫೈನಲ್ಸ್‌ ಗೆ

ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್‌: ಭಾರತದ ನಿಖತ್ ಜರೀನ್‌ ಫೈನಲ್ಸ್‌ ಗೆ

0

ನವದೆಹಲಿ (NewDelhi)-ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ 52 ಕೆಜಿ ವಿಭಾಗದಲ್ಲಿ ಭಾರತದ ಬಾಕ್ಸಿಂಗ್ ಪಟು ನಿಖತ್ ಜರೀನ್ (Nikhat Zareen) ಫೈನಲ್ಸ್‌ ಗೆ ಲಗ್ಗೆಯಿಟ್ಟಿದ್ದಾರೆ.

ನಿಖತ್ ಜರೀನ್‌ ಅವರು ಸೆಮಿಫೈನಲ್ ನಲ್ಲಿ ಬ್ರೆಜಿಲ್‌ನ ಕ್ಯಾರೊಲಿನ್ ಡಿ ಅಲ್ಮೇಡಾ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಆ ಮೂಲಕ ಇಸ್ತಾನ್ ಬುಲ್ ನಲ್ಲಿ ನಡೆಯುತ್ತಿರುವ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತಕ್ಕೆ ಮೂರು ಪದಕಗಳು ಖಚಿತವಾಗಿದ್ದು, ನಿಖತ್ ಜರೀನ್ ಫೈನಲ್‌ಗೆ ಪ್ರವೇಶಿಸುವ ಮೂಲಕ ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.

ಮಾಜಿ ಯುವ ವಿಶ್ವ ಚಾಂಪಿಯನ್ ಆಗಿರುವ ಬಾಕ್ಸಿಂಗ್ ಪಟು ನಿಖತ್ ಜರೀನ್ ಫೆಬ್ರವರಿಯಲ್ಲಿ ನಡೆದ ಪ್ರತಿಷ್ಠಿತ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಮೆಂಟ್ ನಲ್ಲಿ ಚಿನ್ನ ಗೆದ್ದಿದ್ದರು. ಇದೀಗ ಇವರು 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ವಿಶ್ವ ಕ್ರೀಡಾಕೂಟದಲ್ಲಿ ತನ್ನ ಚೊಚ್ಚಲ ಪದಕವನ್ನು ಪಡೆಯಲು ಉತ್ಸುಕರಾಗಿದ್ದಾರೆ.

ಏತನ್ಮಧ್ಯೆ, 63 ಕೆಜಿ ತೂಕದ ವಿಭಾಗದಲ್ಲಿ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಪ್ರದರ್ಶನ ನೀಡುತ್ತಿರುವ 22 ವರ್ಷದ ಪರ್ವೀನ್, ಯುರೋಪಿಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ಐರ್ಲೆಂಡ್‌ನ ಆಮಿ ಬ್ರಾಡ್‌ಹರ್ಸ್ಟ್ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.

ಇನ್ನೂ ಭಾರತದ ಮೂರನೇ ಬಾಕ್ಸರ್ ಮನೀಶಾ(57ಕೆಜಿ) 2018ರ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಹೊರಹಾಕಲ್ಪಟ್ಟ 2019ರ ಏಷ್ಯನ್ ಚಾಂಪಿಯನ್ ಶಿಪ್ ಕಂಚಿನ ಪದಕ ವಿಜೇತ, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರು ಟೋಕಿಯೊ ಒಲಿಂಪಿಕ್ ಕಂಚಿನ ಪದಕ ವಿಜೇತೆ ಮತ್ತು ಮಾಜಿ ಯುರೋಪಿಯನ್ ಚಾಂಪಿಯನ್ ಇಟಲಿಯ ಇರ್ಮಾ ಟೆಸ್ಟಾ ಅವರನ್ನು ಎದುರಿಸಲಿದ್ದಾರೆ.