ಮನೆ ರಾಷ್ಟ್ರೀಯ ಕಸ್ಟಡಿಯಲ್ಲಿದ್ದ ಅಪ್ರಾಪ್ತ ವಯಸ್ಕ ಪತ್ನಿ, ಪತಿ ಸಾವು: ಗ್ರಾಮಸ್ಥರಿಂದ ಠಾಣೆ ಧ್ವಂಸ

ಕಸ್ಟಡಿಯಲ್ಲಿದ್ದ ಅಪ್ರಾಪ್ತ ವಯಸ್ಕ ಪತ್ನಿ, ಪತಿ ಸಾವು: ಗ್ರಾಮಸ್ಥರಿಂದ ಠಾಣೆ ಧ್ವಂಸ

0

ಪಾಟ್ನಾ: ಅಪ್ರಾಪ್ತ ವಯಸ್ಕ ಪತ್ನಿ, ಪತಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ಪಪ್ಪಿದ ಘಟನೆಗೆ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಗೆ ಬೆಂಕಿಯಿಟ್ಟು ಆಕ್ರೋಶ ಹೊರಹಾಕಿರುವ ಘಟನೆ‌ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

Join Our Whatsapp Group

ವ್ಯಕ್ತಿಯೊಬ್ಬ ತನ್ನ ಪತ್ನಿಯ ನಿಧನದ ಎರಡು ದಿನದ ಬಳಿಕ ಅಪ್ರಾಪ್ತ ವಯಸ್ಕ(14 ವರ್ಷ) ಸಂಬಂಧಿಯನ್ನು ವಿವಾಹವಾಗಿದ್ದರು. ಭಾರತದಲ್ಲಿ ಮಹಿಳೆಯರು ಮದುವೆಯಾಗಲು ಕಾನೂನುಬದ್ಧ ವಯಸ್ಸು 18 ಆಗಿರುವುದರಿಂದ ಗುರುವಾರ(ಮೇ.16 ರಂದು) ಮಧ್ಯಾಹ್ನ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಏಕಾಏಕಿ ಪೊಲೀಸ್‌ ವಶದಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದಾರೆ. ಠಾಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಪೊಲೀಸರು ಹೇಳಿದ್ದಾರೆ.

ಆದರೆ ಪೊಲೀಸರು ಇಬ್ಬರನ್ನು ಥಳಿಸಿ ಕಸ್ಟಡಿಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಲಾಕಪ್ ಬಾಗಿಲಿಗೆ ಹತ್ತಿ ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದಾರೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇಬ್ಬರ ಸಾವಿನ ಸುದ್ದಿ ಇಡೀ ಗ್ರಾಮಕ್ಕೆ  ಹರಡುತ್ತಿದ್ದಂತೆ, ಕೋಪಗೊಂಡ ಗ್ರಾಮಸ್ಥರು ತಾರಾಬರಿ ಪೊಲೀಸ್ ಠಾಣೆಯನ್ನು ಸುತ್ತುವರೆದು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಿದ್ದಾರೆ. ಠಾಣೆಗೆ ಬೆಂಕಿಯಿಟ್ಟು ಆಕ್ರೋಶ ಹೊರಹಾಕಿದ್ದಾರೆ. ಘಟನೆಯಲ್ಲಿ ಕನಿಷ್ಠ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಸದರ್ ಎಸ್‌ಡಿಪಿಒ ರಾಂಪುಕರ್ ಸಿಂಗ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಥಳಿಸಿದ ನಂತರ ಪೊಲೀಸರ ನಿರ್ಲಕ್ಷ್ಯದಿಂದ ದಂಪತಿ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ