ಮನೆ ರಾಜ್ಯ ಮದ್ದೂರು | ಸೆಸ್ಕ್‌ ಸಿಬ್ಬಂದಿಯಿಂದ ಮೀಟರ್ ತೆರವು: ಆಕ್ರೋಶ

ಮದ್ದೂರು | ಸೆಸ್ಕ್‌ ಸಿಬ್ಬಂದಿಯಿಂದ ಮೀಟರ್ ತೆರವು: ಆಕ್ರೋಶ

0

ಮದ್ದೂರು:ಹಳೆ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ಸೆಸ್ಕ್‌ ಸಿಬ್ಬಂದಿ ತಾಲ್ಲೂಕಿನ ಮಾಲಗಾರನಹಳ್ಳಿಯಲ್ಲಿ ಹಲವು ಮನೆಗಳ ವಿದ್ಯುತ್ ಮೀಟರ್‌ಗಳನ್ನೇ ಶುಕ್ರವಾರ ಬಿಚ್ಚಿಕೊಂಡು ಹೋಗಿದ್ದಾರೆ.

Join Our Whatsapp Group


ಗ್ರಾಮದ ಚಂದ್ರಶೇಖರ್‌, ವೇದಾ, ರಾಜ ಸೇರಿದಂತೆ ಸುಮಾರು 8 ಮನೆಗಳ ವಿದ್ಯುತ್ ಮೀಟರ್‌ಗಳನ್ನು ಎ.ಇ ನಾಗಾಭಿಷೇಕ್ ಹಾಗೂ ಸಿಬ್ಬಂದಿ ಹಳೆ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ತೆರವು ಮಾಡಿದ್ದಾರೆ.
ಈ ವೇಳೆ ಮನೆಯವರು ಎಷ್ಟೇ ಮನವಿ ಮಾಡಿದರೂ ಸಿಬ್ಬಂದಿ ಕಿವಿಗೊಡಲಿಲ್ಲ ಎನ್ನಲಾಗಿದೆ. ಇದರಿಂದ ಶುಕ್ರವಾರ ರಾತ್ರಿ ‘ಗೃಹಜ್ಯೋತಿ’ಗೆ ಅರ್ಹರಿದ್ದರೂ ಈ ಮನೆಗಳಿಗೆ ಕರೆಂಟ್‌ ಇಲ್ಲದೆ ಕಾಲ ಕಳೆದರೂ.
ಈ ಬಗ್ಗೆ ಪ್ರಗತಿಪರ ಸಂಘಟನೆಗಳ ಮುಖಂಡರಾದ ನ.ಲಿ.ಕೃಷ್ಣ ಅವರು, ಸೆಸ್ಕ್ ಅಧಿಕಾರಿಗಳೊಂದಿಗೆ ಮಾತನಾಡಿ ವಿಷಯ ಕುರಿತು ಮಾತನಾಡಿದರೂ ಪ್ರಯೋಜನವಾಗದ ನಂತರ ತಹಶೀಲ್ದಾರ್ ಸೋಮಶೇಖರ್ ಅವರಿಗೆ ಈ ಬಗ್ಗೆ ಗಮನಕ್ಕೆ ತಂದು ಗ್ರಾಮಸ್ಥರೊಟ್ಟಿಗೆ ಚರ್ಚಿಸಿದ್ದಾರೆ.
ಅಷ್ಟರಲ್ಲಿ ಶನಿವಾರವೂ ಮತ್ತೆ ಸೆಸ್ಕ್‌ ಸಿಬ್ಬಂದಿ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಆ ಸಿಬ್ಬಂದಿ ವಾಪಸ್ ಹೋದರು.
ಆ ಬಳಿಕ ನ.ಲಿ.ಕೃಷ್ಣ ಅವರು ಪರಿಸ್ಥಿತಿ ಬಗ್ಗೆ ತಹಶೀಲ್ದಾರ್‌ರಿಗೆ ತಿಳಿಸಿ, ‘ಬರಗಾಲದ ಪರಿಸ್ಥಿತಿಯಲ್ಲಿ ಮೈಕ್ರೊ ಫೈನಾನ್ಸ್ ಬಗ್ಗೆ ಬಲವಂತದ ವಸೂಲಿಯನ್ನು ಮಾಡಬಾರದು ಎಂದು ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಆದೇಶಿದ ಬೆನ್ನಲ್ಲೇ ಈ ರೀತಿ ಸೆಸ್ಕ್‌ ಸಿಬ್ಬಂದಿ ಹಳೆ ಬಿಲ್ ಪಾವತಿಗಾಗಿ ಬಲವಂತವಾಗಿ ರೈತರ ಮನೆಗಳ ವಿದ್ಯುತ್ ಮೀಟರ್‌ಗಳನ್ನು ತೆರವುಗೊಳಿಸಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಸೂಕ್ತ ನಿರ್ದೇಶನ ನೀಡುವಂತೆ’ ಮನವಿ ಮಾಡಿದರು.
ತಹಶೀಲ್ದಾರ್ ಸೋಮಶೇಖರ್ ಅವರು ಸೆಸ್ಕ್‌ ಅಧಿಕಾರಿಗೆ ಮಾತನಾಡಿ, ರೈತರ ಮನೆಗಳ ವಿದ್ಯುತ್ ಮೀಟರ್‌ಗಳನ್ನು ಮರು ಅಳವಡಿಸಲು ಕ್ರಮವಹಿಸಲು ಸೂಚಿಸಿದ್ದಾರೆ.