ಮನೆ ಮನರಂಜನೆ ಧ್ರುವ ಸರ್ಜಾ ನಟನೆಯ ಚಿತ್ರ ಅಕ್ಟೋಬರ್‌ 11ಕ್ಕೆ ಬಿಡುಗಡೆ

ಧ್ರುವ ಸರ್ಜಾ ನಟನೆಯ ಚಿತ್ರ ಅಕ್ಟೋಬರ್‌ 11ಕ್ಕೆ ಬಿಡುಗಡೆ

0

ಸ್ಟಾರ್‌ ಸಿನಿಮಾಗಳು ಬಿಡುಗಡೆಯಾದರೆ ಚಿತ್ರಮಂದಿರ ಗಳಿಗೆ ಜನ ಬರುತ್ತಾರೆ ಎಂಬ ಮಾತಿನ ನಡುವೆಯೇ ಇಲ್ಲೊಂದು ಸ್ಟಾರ್‌ ಸಿನಿಮಾ ತನ್ನ ಬಿಡುಗಡೆ ಘೋಷಿಸಿ ಕೊಂಡಿದೆ. ಅದು “ಮಾರ್ಟಿನ್‌’.

Join Our Whatsapp Group

ಧ್ರುವ ನಾಯಕರಾಗಿರುವ “ಮಾರ್ಟಿನ್‌’ ಚಿತ್ರ ಅಕ್ಟೋಬರ್‌ 11ಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರತಂಡ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿದೆ.

ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ -ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಮಾರ್ಟಿನ್‌’ ಸಿನಿಮಾದಲ್ಲಿ ನಾಯಕ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ಜೋಡಿಯಾಗಿದ್ದಾರೆ.

ಉದಯ್‌ ಕೆ. ಮೆಹ್ತಾ ನಿರ್ಮಾಣದಲ್ಲಿ “ಮಾರ್ಟಿನ್‌’ ಸಿನಿಮಾ ಮೂಡಿ ಬರುತ್ತಿದೆ. “ಅದ್ಧೂರಿ’ ಸಿನಿಮಾದ ಬಳಿಕ 2ನೇ ಬಾರಿಗೆ ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ಎ. ಪಿ ಅರ್ಜುನ್‌ ಕಾಂಬಿನೇಶನ್‌ ನಲ್ಲಿ “ಮಾರ್ಟಿನ್‌’ ಸಿನಿಮಾ ಮೂಡಿ ಬರುತ್ತಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲೂ “ಮಾರ್ಟಿನ್‌’ ಸಿನಿಮಾವನ್ನು ತೆರೆಗೆ ಬರಲಿದೆ.