ಮನೆ ಆರೋಗ್ಯ ಹೃದ್ರೋಗಗಳು

ಹೃದ್ರೋಗಗಳು

0

ಹೃದಯವು ಸಮರ್ಪಕವಾಗಿ ಕಾರ್ಯನಿರ್ವಹಿಸಲು, ಆರೋಗ್ಯವಂತರಾಗಿರಲು ದೇಹದ ಇತರ ಸ್ನಾಯುಗಳಂತೆ ಹೃದಯದ ಸ್ನಾಯುಗಳಿಗೂ ಕೂಡ, ಸೂಕ್ತವಾದ ರಕ್ತದ ಅವಶ್ಯಕತೆ ಇರುತ್ತದೆ.ಹೃದಯದ ಕವಾಟಗಳಲ್ಲಿ ಸಮೃದ್ಧಿಯಾಗಿ ರಕ್ತವಿದ್ದರೂ ಸಹ, ಹೃದಯ ತನ್ನ ಮಾಂಸ ಕಂಡ (ಸ್ನಾಯು)ಗಳ ಘೋಷಣೆಗೋಸ್ಕರ ಇದನ್ನು ಉಪಯೋಗಿಸಿಕೊಳ್ಳುವುದಿಲ್ಲ.

Join Our Whatsapp Group

ಹೃದಯ ತನಗೆ ಬೇಕಾದ ರಕ್ತವನ್ನು ಕರೋನರಿ ಧಮನಿಗಳೆಂಬ (Coronary Arteries)ಎರಡು ಚಿಕ್ಕ ರಕ್ತನಾಳಗಳಿಂದ ಪಡೆಯುತ್ತದೆ.

ಹೃದಯದಿಂದ ಶರೀರದ ಇತರ ಅವಯವಗಳಿಗೆ ರಕ್ತವನ್ನು ಒಯ್ಯುವ Aorta ಎಂಬ ಮಹಾ ಅಪಧಮನಿಯಿಂದ ಹೊರಬರುವ,ಈ ಎರಡು ಕರೋನರಿ ಧಮನಿಗಳು ಹೃದಯದ ಕೆಳಭಾಗದಿಂದ (ಹೃತ್ಕೃಕ್ಷಿ )ಹೊರಟು ಕಿರೀಟದಂತೆ ಅವರಿಸುತ್ತದೆ. ಹೃದಯವನ್ನು ಹೀಗೆ ಆವರಿಸಿಕೊಂಡಿರುವ ಈ ಧಮನಿ ಗಳನ್ನು ಕರೋನರಿ ಎನ್ನುತ್ತಾರೆ.

ಕರೋನರಿ ಧಮನಿಗಳಿಂದ ಅನೇಕ ಶಾಖೆಗಳಾಗಿ ಹರಡಿಕೊಂಡಿರುವ ಚಿಕ್ಕ ಚಿಕ್ಕ ರಕ್ತನಾಳಗಳು ಹೃದಯದ ಮಾಂಸ ಖಂಡಗಳಿಗೆ ಬೇಕಾದ ರಕ್ತದ ಬೇಡಿಕೆಯನ್ನು ಪೂರೈಸುತ್ತವೆ. ಕರೋನರಿ ಧಮನಿಗಳು ಹೃದಯದ ಪ್ರಾಣ ಧಾರಗಳು ಎಂಬುದು ಅತಿಶಯೋಕ್ತಿಯಲ್ಲ.

ಒಂದೊಂದು ಕರೋನರಿ ಧಮನಿಗಳ ವ್ಯಾಸ 3 ಮಿ.ಮಿ.ನ್ನಷ್ಟು ಇರುತ್ತದೆ ಉದ್ದ 10 ರಿಂದ 12 ಸೆ.ಮಿ.ನಷ್ಟು ಪ್ರತಿ ಗಂಟೆಗೆ 60 ರಿಂದ 70 ಲೀಟರ್ ರಕ್ತವನ್ನು ಹೃದಯದ ಮಾಂಸಖಂಡಕ್ಕೆ ಪಂಪ್ ಮಾಡುತ್ತದೆ .

( 1) ಮಹಾಅಪಧಮನಿ (2)ನಾರ್ಮಲ್ ಸ್ಥಿತಿಯಲ್ಲಿರುವ ಧಮನಿ, (3) ಸ್ವಲ್ಪ ಭಾಗ ಮುಚ್ಚಿಕೊಂಡಿರುವ ಧಮನಿ ಅಂಜೈನ, (4) ಪೂರ್ತಿ ಮುಚ್ಚಲ್ಪಟ್ಟ ದಮನಿ (5) ಹಾರ್ಟ್ ಅಟ್ಯಾಕ್ ಕರೋನರಿ ಧಮನಿ  .

 ಹೃದಯದ ಸಾಮಾನ್ಯ ಸ್ಥಿತಿಯಲ್ಲಿ ರುವಾಗ, ಕರೋನರಿ ಧಮನಿಯ ಒಳಗೆ ಯಾವ ಅಡೆಚಣೆಯೂ ಇಲ್ಲದೆ ಕ್ಲಿಯರ್ ಆಗಿರುತ್ತದೆ. ಇದರಿಂದ ಹೃದಯಕ್ಕೆ ಆಮ್ಲಜನಕ  ಪೂರೈಕೆಯಲ್ಲಿ ಯಾವ ತೊಂದರೆಯೂ ಇರುವುದಿಲ್ಲ ಕರೋನರಿ ಧಮನಿ ಸಂಕುಚಿತಗೊಂಡಾಗ ಅಂಜೈನಾ ಒರಟಾಗುತ್ತದೆ.ಕರೋನರಿ ಧಮನಿ  ಸಂಪೂರ್ಣವಾಗಿ ಮುಚ್ಚಿ ಹೋದಾಗ ಹಾರ್ಟ್ಅಟ್ಯಾಕ್ ಆಗುತ್ತದೆ.