ಮನೆ ರಾಜಕೀಯ ಪರಿಷತ್ ಅಭ್ಯರ್ಥಿಗಳ ಆಯ್ಕೆ: ಸಿಎಂ-ಡಿಸಿಎಂ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ ಜಿ ಪರಮೇಶ್ವರ್

ಪರಿಷತ್ ಅಭ್ಯರ್ಥಿಗಳ ಆಯ್ಕೆ: ಸಿಎಂ-ಡಿಸಿಎಂ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ ಜಿ ಪರಮೇಶ್ವರ್

0

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್​ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Join Our Whatsapp Group

ಸದಾಶಿವನಗರ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ, ಡಿಸಿಎಂ ಅವರಿಬ್ಬರೇ ತೀರ್ಮಾನ ಮಾಡಿದ್ರೆ ಸರಿಯಲ್ಲ.‌ ಪಕ್ಷದ ಹಿರಿಯ ನಾಯಕರ ಸಲಹೆ, ಅಭಿಪ್ರಾಯಗಳನ್ನೂ ಕೇಳಬೇಕು. ಹಿರಿಯರು, ಅನುಭವಿ ನಾಯಕರ ಜೊತೆ ಚರ್ಚೆ ಒಳ್ಳೆಯದು. ಪಕ್ಷದಲ್ಲಿ ಅನೇಕ ವರ್ಷ ದುಡಿದ ನಾಯಕರ ಸಲಹೆ ಪಡೆಯಬೇಕು. ಜಾತಿವಾರು, ಪ್ರಾದೇಶಿಕವಾರು, ಪಕ್ಷಕ್ಕೆ ದುಡಿದವರಿಗೆ ಸ್ಥಾನ ಕೊಡಬೇಕು ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ವಿಡಿಯೋ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಲ್ಲಾ ಪ್ರಯತ್ನ ಮಾಡ್ತಿದ್ದೇವೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ವಾರೆಂಟ್ ತೆಗೆದುಕೊಂಡು ಮಿನಿಸ್ಟ್ರಿ ಆಫ್ ಹೋಂ ಅಫೇರ್ಸ್​ಗೆ ತಿಳಿಸಲಾಗಿದೆ. ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಲೊಕೇಶನ್ ತಿಳಿದುಕೊಂಡು ಇಂಟರ್ ಪೋಲ್‌ನವರು ಟ್ರೇಸ್ ಮಾಡ್ತಾರೆ. ಈ ಸಂದರ್ಭದಲ್ಲಿ ಅವರು ನಾನು ವಾಪಸ್ ಬರ್ತೀನಿ ಅಂತಾ ತಿಳಿಸಿದ್ದಾರೆ. ಅದು ಬಹಳ ಸೂಕ್ತವಾಗಿದೆ. ಯಾಕೆಂದರೆ ಕಾನೂನಿಂದ‌ ಯಾರೂ ತಪ್ಪಿಸಿಕೊಳ್ಳುವುದಕ್ಕೆ ಆಗಲ್ಲ. 31ನೇ ತಾರೀಖಿಗೆ ಅವರ ಪಾಸ್‌ಪೋರ್ಟ್ ಅವಧಿ ಮುಗಿಯುತ್ತೆ. ಇದೆಲ್ಲವನ್ನೂ ಯೋಚಿಸಿ ಈ ನಿರ್ಧಾರಕ್ಕೆ ಪ್ರಜ್ವಲ್ ಬಂದಿರಬಹುದು ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ವಿಚಾರಕ್ಕೆ, ಅದು ಪಕ್ಷದ ತೀರ್ಮಾನ. ಹೈಕಮಾಂಡ್ ಎಲ್ಲವನ್ನೂ ನೋಡಿಕೊಳ್ಳುತ್ತದೆ. ಅದನ್ನು ಡಿ.ಕೆ.ಶಿವಕುಮಾರ್ ಮಾಡೋದಿಲ್ಲ, ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೆ. ಅವರೇ ಮುಂದುವರಿಯಲಿ ಅಂದ್ರೆ ಅವರೇ ಇರ್ತಾರೆ. ಬೇರೆಯವರು ಬರಲಿ ಅಂದ್ರೆ ಬೇರೆಯವರು ಬರ್ತಾರೆ ಎಂದು ತಿಳಿಸಿದರು.