ಶಿವನ ಅಣತಿಯ ಶಿಶುವೆ
ಕಂದಲನ ಪುಣ್ಯ ಫಲವೆ ||
ಧರೆಗೆ ಬಂದ ಗುರುವೇ ವರವೇ ||
ನಿನ್ನಿಂದ ಧನ್ಯ ಈ ಜಗವ || ಶಿವನ ||
ಬಾಲನಾಗಿ ನೀ ಲೀಲೆಯಿಂದ ||
ಆ ಮಹಿಷಿಯನ್ನು ಕೊಂದೆ ||
ಆಟವಾಡುತ ಭೀತಿ ಇಲ್ಲದೆ |
ಹುಲಿ ಹಾಲ ಹೊತ್ತು ತಂದೆ || ಶಿವನ ||
ಬಾಲ್ಯದಲ್ಲಿ ನೀ ರಾಜಭೋಗವ||
ತೊರೆದು ಜ್ಞಾನಿಯಾದೆ ||
ಬಾಲ್ಯದಲ್ಲಿ ನೀ ರಾಜಭೋಗವ
ತೊರೆದು ಜ್ಞಾನಿಯಾದೆ |
ಶಬರಿ ಭಕ್ತಿಯೇ ಬೆಟ್ಟವಾಗಿಹ ||
ಗಿರಿವಾಸಿಯಾದೆ || ಶಿವ