ಮನೆ ರಾಜಕೀಯ ಅಕ್ರಮ ಪ್ರಾರ್ಥನಾ ಮಂದಿರ: ಸಮೀಕ್ಷೆಗೆ ಮುಂದಾದ ಶ್ರೀರಾಮ ಸೇನೆ

ಅಕ್ರಮ ಪ್ರಾರ್ಥನಾ ಮಂದಿರ: ಸಮೀಕ್ಷೆಗೆ ಮುಂದಾದ ಶ್ರೀರಾಮ ಸೇನೆ

0

ಬೆಂಗಳೂರು(Bengaluru): ರಾಜ್ಯದ 4 ಜಿಲ್ಲೆಗಳಲ್ಲಿ ಮನೆ, ಮದುವೆ ಹಾಲ್, ಸಮುದಾಯ ಕಟ್ಟಡಗಳಲ್ಲಿರುವ 500ಕ್ಕೂ ಹಚ್ಚು ಪ್ರಾರ್ಥನಾ ಮಂದಿರಗಳ ಪಟ್ಟಿಯನ್ನು ಸಿದ್ದಪಡಿಸಿದ್ದು, ತಿಂಗಳಾಂತ್ಯಕ್ಕೆ ಈ ಕುರಿತ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಬೆಳಗಾವಿ, ಧಾರವಾಡ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ 500 ಪ್ರಾರ್ಥನಾ ಮಂದಿರಗಳು ಪತ್ತೆಯಾಗಿವೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಆಯಾ ಜಿಲ್ಲೆಗಳ ಅಧಿಕಾರಿಗಳಿಗೆ ಪಟ್ಟಿ ಸಲ್ಲಿಸುವಂತೆ ಸಂಘಟನೆಯ ಜಿಲ್ಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಮೇ.29 ಮತ್ತು 30ರಂದು ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಭೇಟಿ ಮಾಡಿ ಜಿಲ್ಲಾವಾರು ಪಟ್ಟಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಧರ್ಮ ಸ್ವಾತಂತ್ರ್ಯದ ಹಕ್ಕು ರಕ್ಷಣೆ ಸುಗ್ರೀವಾಜ್ಞೆ-2022ಕ್ಕೆ ಸಂಪುಟ ಒಪ್ಪಿಗೆ ನೀಡಿದ ಬಳಿಕ ಈ ಸಮೀಕ್ಷೆಗೆ ಚಾಲನೆ ನೀಡಲಾಯಿತು. ರಾಜ್ಯಪಾಲರು ಒಪ್ಪಿಗೆ ನೀಡಿದ ಬಳಿಕ ಸಮೀಕ್ಷಾ ಕಾರ್ಯವನ್ನು ತೀವ್ರಗೊಳಿಸಲಾಯಿತು ಎಂದಿದ್ದಾರೆ.