ಮನೆ ಜ್ಯೋತಿಷ್ಯ ಧನುರ್ ರಾಶಿ

ಧನುರ್ ರಾಶಿ

0

 ರಾಶಿ ಚಕ್ರದಲ್ಲಿ ಧನು  ರಾಶಿಯು 240 ಅಂಶದಿಂದ 270 ಅಂಶಗಳವರೆಗಿದೆ. ಭೂಮಿಯಲ್ಲಿ ವಿಷಮ ವೃತ್ತ 20ರಿಂದ 25 ಡಿಗ್ರಿ ಯವರೆಗಿನ ಕ್ಷೇತ್ರದಲ್ಲಿದೆ. ಇಂಗ್ಲೀಷಿನಲ್ಲಿ ‘ಸೆಗಿಟೇರಿಯಸ್’ ಎನ್ನುವರು.ಈ ರಾಶಿಯು ಮೂಲಾ, ಪೂರ್ವಾಷಾಢಾ ಮತ್ತು ಉತ್ತರಾಷಾಢಾ ನಕ್ಷತ್ರಗಳ ಭಾಗಗಳನ್ನು ಒಳಗೊಂಡಿದೆ. ಈ ನಕ್ಷತ್ರಗಳ ಸ್ವಾಮಿಗಳೆಂದರೆ ಕೇತು, ಶುಕ್ರ ಸೂರ್ಯರಾಗಿದ್ದಾರೆ. ಧನು ರಾಶಿಯ ಸ್ವಾಮಿಯು ಗುರುವಾಗಿದ್ದಾನೆ.

Join Our Whatsapp Group

    ಈ ರಾಶಿಯೊಂದಿಗೆ ಗುರಿ ಹೊಡೆಯುವ ಒಂದು ಕಥೆ ಸಹಯ ಇರುವುದು. ಮೂಲಾನಕ್ಷತ್ರದಲ್ಲಿ ಜನಿಸಿದವರು ಅಲ್ಪಾಯು ಗಳಾಗುವರು. ಉಳಿದರೆ ಭಾಗ್ಯಶಾಲಿಗಳಾಗುವರು. ಆಕಾಶ ಮಂಡಲದಲ್ಲಿ ಪಶ್ಚಿಮದಿಂದ ಆರಂಭಿಸಿ. ಪೂರ್ವಾಷಾಡ,ಉತ್ತರಾಷಾಡ ನಕ್ಷತ್ರಗಳಿವೆ. ಸೂರ್ಯ ಈ ರಾಶಿಯಲ್ಲಿದ್ದಾಗ ಬೇಳೆ ಬಂದಿರುವುದು. ಶಿಕಾರಿ ಕಾರ್ಯಕ್ಕೆ ಸಮಯವು ಬಂದಿರುವುದು ಸ್ಪಷ್ಟವಾಗಿ ಈ ರಾಶಿಯನ್ನು ಸ್ವಚ್ಛವಾದ ರಾತ್ರಿಗಳಲ್ಲಿ ಕಾಣಬಹುದಾಗಿದೆ.

 ಅರ್ಧ ಮನುಷ್ಯ ಅರ್ಧ ಕುದುರೆಯಾಕೃತಿಯ ಈ ರಾಶಿಯು ಸುಂದರ ಆಕಾರ, ಮಧುರ ಭಾಷೆಯ ಜೀವ ಸಂಜ್ಞೆ ಹೊಂದಿರುವದು. ಪೂರ್ವ ದಿಕ್ಕಿನಲ್ಲಿ ಆನೆ ಕುದುರೆಗಳಿರುವ ಸ್ಥಾನಗಳಲ್ಲಿ ರುವದು. ಸೌಮ್ಯ ಹಾಗೂ ಕ್ರೂರ,ಕರ್ಮ ಚಂಚಲ, ಶಾಂತ ಲಕ್ಷಣ ಹೊಂದಿದ ದಿನದಲ್ಲಿ ಬಲಿಷ್ಠವಾದ ಅಲ್ಪ ಸಂತತಿಯ ರಾಶಿಯಿದಾಗಿದೆ  ಪೃಷ್ಟೋದಯವನ್ನು ಹೊಂದಿರುವದು. ಭೂಮಿಯ ಸಿಂಧು,ಕಚ್ಛ, ದೇಶವನ್ನು ಇದು  ಪ್ರತಿನಿಧಿಸುವುದು.

     ಶರೀರದಲ್ಲಿ ಧನುರಾಶಿಗೆ ಎರಡು ತೊಡೆಗಳು ಮತ್ತು ಪೃಷ್ಠ ಭಾಗಗಳು ಪ್ರತೀಕವೆನಿಸಿವೆ.ಅಲ್ಲದೇ ಈ ರಾಶಿಗೆ ಕುದುರೆಗಳು,ರಾಜಕೀಯ ವಾಹನ,ದೇವಾಲಯ ಶಸ್ತ್ರ ವಿಜ್ಞಾನ ಯಜ್ಞ,ಆಧ್ಯಯನಶಾಲೆ, ವಸ್ತ್ರ ಕೊಬ್ಬು, ವಿಮೆ, ಸಾಹಿತ್ಯ, ಸಂಸ್ಕೃತಿ ಬೌದ್ದಿಕ ಕಾರ್ಯಗಳು ಸಂಬಂಧಿಸುತ್ತವೆ ಈ ರಾಶಿಯ ದ್ರವ್ಯಗಳೆಂದರೆ ಉಪ್ಪು, ಬಟಾಣಿ,ಅನ್ನವಸ್ತ್ರ,  ಕಾಗದ, ಲೇಖನ ಸಾಮಗ್ರಿಗಳು. ಈ ಜಗತ್ತಿನಲ್ಲಿ ಈ ರಾಶಿಯು ಅರಬಸ್ಥಾನ,  ಆಸ್ಟ್ರೇಲಿಯಾ ಹಂಗೇರಿಯಾ ದೇಶಗಳನ್ನು ಪ್ರತಿನಿಧಿಸುವದು.

   ಪೂರ್ವದಲ್ಲಿ ಈ ರಾಶಿಯು ಉದಯಿಸುವಾಗ ಜನಿಸಿದವರು ಶ್ರೀಮಂತರು, ಧಾರ್ಶನಿಕರು, ಸುಂದರ ಶರೀರ ಉಳ್ಳವರು ಬಲಿಷ್ಠರು, ಸ್ಥೂಲರು ಆಗುವರು. ಸಾಧು ಸ್ವಭಾವದ ಅಗಲವಾದ  ಮುಖವುಳ್ಳವರು ಶಾಂತಿ, ನ್ಯಾಯಪ್ರಿಯರು, ಉದಾರರು ಆಡಂಬರ, ರಹಿತರೂ ಆಗಿ ಪ್ರಸಿದ್ದರಾಗುವರು ಧರ್ಮ, ಕಾಯಿದೆ, ಕಲೆಗಳಲ್ಲಿ ಆಸಕ್ತಿ ಹೊಂದುವರು .

  ವಿಶ್ವಾಸ ಪಾತ್ರರು, ವಿವೇಕಿಗಳು,ದಯಾಳುಗಳು ಸಂವೇದನ ಶೀಲರೂ ಆಗುವರು. ಜನ್ಮದಿಂದಲ್ಲೇ ಭಾಗ್ಯವಂತರಾಗುವರು.ದ್ಯೂತ, ಕುದುರೆ ರೇಸುಗಳಲ್ಲಿ ಪರಿಣಿತರಾಗುವರು. ಈ ರಾಶಿಯವರು ಅಧ್ಯಾಪಕರು ವಕೀಲರು, ದಾರ್ಶನಿಕರು, ರಾಜನೀತಿಜ್ಞರು, ಸಲಹೆಗಾರರು,ವ್ಯವಸಾಯಿಗಳು ಉಪದೇಶಕರು, ಸನ್ಯಾಸಿಗಳು,ಲೇಖಕರು, ವೈದ್ಯರೂ ಆಗುವರು ದುರ್ಘಟನೆಯ, ಪುಷ್ಪಸರೋಗಗಳು ಕೊಬ್ಬಿನ ದೋಷಗಳು ಉಂಟಾಗುವವು.

     ಸೂರ್ಯನು ಈ ರಾಶಿಯಲ್ಲಿ 15 ಡಿಸೆಂಬರದಿಂದ ಜನೇವರಿ 14ರವರೆಗೆ ಇರುವನು. ಈ ಸಮಯದಲ್ಲಿ ಜನಿಸಿದವರು ಭೋಗಿಗಳು ಉಚ್ಚ ರೀತಿ ನೀತಿ ಯುಳ್ಳವರು, ಸಜ್ಜನರು ವ್ಯವಹಾರ ಕುಶಲರು, ಧಾರ್ಮಿಕರು ಸರಕಾರದಿಂದ ಗೌರವ ಪಡೆಯುವವರು ಹಾಗೂ ಶಿಲ್ಪ ಮತ್ತು ತಂತ್ರಶಾಸ್ತ್ರಗಳನ್ನು ಬಲ್ಲವರಾಗಿರುವರು. ಆದರೆ ಈ ರಾಶಿಯ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ.

    ಈ ರಾಶಿಯಲ್ಲಿ ಚಂದ್ರನಿದ್ದಾಗ ಜನಿಸಿದವರು, ಚತುರರು ಬುದ್ದಿವಂತರು, ಉದ್ಯಮ ನಡೆಸುವವರು, ಮಾತಿನಲ್ಲಿ ಜಾಣರು ಆಗುವರು. ವಿದ್ಯಾವಂತರು ಹಣ ಗಳಿಸುವವರು, ಭ್ರಮಣಶೀಲರು, ನಂದಿ ಅಥವಾ ಸಮುದ್ರದ ಬಳಿ ವಾಸಿಸುವವರೂ ಆಗುವರು. ಮಿತ್ರರಿಗೆ ಹಿತಕಾರಿಗಳಾಗುವರು.

    ಈ ರಾಶಿಯವರು ಎಲ್ಲರಿಗಿಂತ ಮುಂದಿದ್ದು ತಮ್ಮಿಷ್ಟದಂತೆ ಕಾರ್ಯ ಮಾಡುವರು. ಆತ್ಮವಿಶ್ವಾಸ ವುಳ್ಳವರಾದ ಇವರು ರಾಜನೀತಿಯಲ್ಲಿ ಸಫಲತೆ ಹೊಂದು ವರು. ಮಾನವೀಯತೆಯನ್ನು ದಾರ್ಶನಿಕತೆಯನ್ನು ಹೊಂದಿ ಲೋಕದಲ್ಲಿ ಪ್ರಸಿದ್ಧಿಯನ್ನು ಹೊಂದುವರು.