ಮನೆ ದೇವಸ್ಥಾನ ದಕ್ಷಿಣ ಶಿರಡಿ ಸಾಯಿ ಮಂದಿರ ಮತ್ತು ದತ್ತಪೀಠ

ದಕ್ಷಿಣ ಶಿರಡಿ ಸಾಯಿ ಮಂದಿರ ಮತ್ತು ದತ್ತಪೀಠ

0

ವಡ್ಡರಹಳ್ಳಿ, ಕಮ್ಮಸಂದ್ರ ಮುಖ್ಯರಸ್ತೆ, ದಾಸನಪುರ ಹೋಬಳಿ,  ಬೆಂಗಳೂರು

ಸದಾ ಸತ್ವ ರೂಪಂ ಚಿದಾನಂದ ಕದಂ

ಜಗತ್ಸಂಭವಸ್ಥಾನ ಸಂಹಾರ ಹೇತುಂ ಸ್ತಭಕ್ಕೇಚ್ಛಯಾ ಮಾನುಷಂ

ದರ್ಶಯಂತಂ ನಮಾಮೀಶ್ವರಂ ಸದ್ಗುರುಂ ಸಾಯಿನಾಥಮ್|

Join Our Whatsapp Group

2012 ಇಸಿವಿಯಲ್ಲಿ ಪ್ರಾರಂಭ ಮಾಡಿದ ಈ ಕ್ಷೇತ್ರದಲ್ಲಿ ಸಣ್ಣದಾದ ಮೂಲ ವಿಗ್ರಹವನ್ನು ಸ್ಥಾಪಿಸಿ ಪೂಜೆ ಸಲ್ಲಿಸುತ್ತಿದ್ದರು. ಬಾಬಾ ಅವರ ಅನುಗ್ರಹದಿಂದ 2015 ನೇ ಇಸವಿಯಲ್ಲಿ ಮಂದಿರ ನಿರ್ಮಿಸಲು  ಬೇರೊಂದು ಜಾಗವನ್ನು ಖರೀದಿಸುತ್ತಾರೆ. ಈ ಮಂದಿರ ನಿರ್ಮಿಸಲು 10 ವರ್ಷದ  ಆಯೋಜನೆ ಹಾಕಿಕೊಂಡಿದ್ದರು. ಆದರೆ ಬಾಬಾರವರ ಕರುಣೆಯಿಂದ ಕೇವಲ ಎರಡೂವರೆ ವರ್ಷದಲ್ಲಿ ಭವ್ಯವಾದ ಶ್ರೀ ಶಿರಡಿ ಸಾಯಿಬಾಬಾ ಅವರ ಮಂದಿರ ನಿರ್ಮಾಣವಾಗುತ್ತದೆ .

ಈ ಎಲ್ಲಾ ಕಾರ್ಯಗಳು ಬಾಬಾ ಅವರ ಪ್ರೇರಣೆಯಂತೆ ನಡೆಯುತ್ತದೆ ವಿಶೇಷವಂದರೆ ಬಾಬಾ ಅವರು ಆರತಿ ಪ್ರಿಯರು ಆದ್ದರಿಂದ ಇಲ್ಲಿ ಭಕ್ತಾದಿಗಳಿಂದ ಬಾಬಾವರಿಗೆ ತುಪ್ಪದ ಆರತಿಯನ್ನು ಮಾಡುತ್ತಾರೆ. ಭಕ್ತರ ಕೋರಿಕೆಯನ್ನು ಬಾಬಾರವರಿಗೆ ನೆರವಾಗಿ ತಲುಪುತ್ತದೆ ಈ ಮಂದಿರದಲ್ಲಿ ಮೂರು ಕಾಲಗಳು ಭಜನೆ ಮತ್ತು ವಿಶೇಷವಾದ ಆರತಿ ನಡೆಯುತ್ತದೆ.

ಇಲ್ಲಿ ಮತ್ತೊಂದು ವಿಶೇಷವೆಂದರೆ ಬಾಬ ಅವರು ಪ್ರಾಣಿ ಪ್ರಿಯರು ಇಲ್ಲಿ ಗೋಶಾಲೆ ಇದ್ದು ಅದರ — ಲಾಲನೆ ಪಾಲನೆ ಪೋಷಣೆ ಮಂದಿರದವತಿಯಿಂದಲೇ ನಡೆಯುತ್ತದೆ. ಮಂದಿರಕ್ಕೆ ಬಂದ ಭಕ್ತಾದಿಗಳು  ಗೋಪೂಜೆಗಳನ್ನು ಮಾಡಿಸುತ್ತಾರೆ ಮತ್ತು ಮನೆಗಳ ಗೃಹಪ್ರವೇಶ ಸಮಯದಲ್ಲಿ ಗೋವುಗಳನ್ನು ಅಲ್ಲಿಂದ ತೆಗೆದು ಕೊಂಡು ಹೋಗಬಹುದು .

ಪ್ರತಿ ಗುರುವಾರ 12 ಗಂಟೆಯ ನಂತರ ಅನ್ನದಾಸೋಹ ನಡೆಯುತ್ತದೆ ಮತ್ತು ಇಲ್ಲಿ ವಿಶೇಷವಾದ ಹರಕೆ ಎಂದರೆ ಇಲ್ಲಿ ಕಂಬಗಳಿವೆ ಭಕ್ತಾದಿಗಳು ಬಂದು ಇಲ್ಲಿ ತಮ್ಮ ಕೋರಿಕೆಯಂತೆ ಹರಕೆಯನ್ನು  ಕಟ್ಟಬಹುದು.ಮತ್ತೊಂದು ವಿಶೇಷವೆಂದರೆ ಇಲ್ಲಿಯ ಪ್ರಸಾದ, ಬರುವಂತ ಭಕ್ತರಿಗೆ ವಿಭೂತಿಯನ್ನು ಕೊಡುತ್ತಾರೆ. ವಿಭೂತಿಯನ್ನು ಹಂಚ್ಚಿಕೊಂಡರೆ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು