ಮನೆ ಜ್ಯೋತಿಷ್ಯ ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

0

ಪೃಥ್ವಿಯ ದಕ್ಷಿಣದಲ್ಲಿ ವಿಷಮ ವೃತ್ತದಿಂದ 12ರಿಂದ 20 ಡಿಗ್ರಿಯ ವರೆಗೆ,ರಾಶಿಯ ಚಕ್ರದಲ್ಲಿ 210 ರಿಂದ 240 ಅಂಶಗಳವರೆಗೆ ವೃಶ್ಚಿಕ ರಾಶಿಯ ಸ್ಥಾನ ವಿರುವುದು.ಇಂಗ್ಲೀಷ್ನಲ್ಲಿ ಇದಕ್ಕೆ ಸ್ಕಾರಪಿಯೊ,ಎಃದು ಕರೆಯುವರು ಆಕಾಶ ಮಂಡಲದಲ್ಲಿ ಒಂದು ಚೇಳಿನಂತೆ ಇದರ ಆಕಾರವಿರುವದು ವಿಶಾಖಾ, ಅನುರಾಧ ಮತ್ತು ಜೇಷ್ಠಾ ನಕ್ಷತ್ರದ ಭಾಗಗಳು ಈ ರಾಶಿಯಲ್ಲಿವೆ. ಇವುಗಳ ಸ್ವಾಮಿಗಳು ಕ್ರಮವಾಗಿ ಗುರು, ಶನಿ,, ಬುಧಗಳಾಗಿವೆ .

Join Our Whatsapp Group

     ಈ ರಾಶಿಗೆ ಆಲಿ, ಅಷ್ಟಮ, ಕಾಂಪಿ ಎಂಬ ಹೆಸರುಗಳು ಸಹ ಇವೆ.  ಪುರಾಣಗಳಂತೆ ಈ ರಾಶಿಯ ಪ್ರಭಾವವು ನದಿ, ಝರಿ, ಕೆರೆಗಳಲ್ಲಿ ಹೆಚ್ಚಿರುವುದು. ಸೂರ್ಯನು ಈ ರಾಶಿಯಲ್ಲಿ ಬಂದಾಗ ರೋಗಗಳು ಬಹಳವಾಗುವವು ಈ ರಾಶಿಯ ಸ್ವಾಮಿ  ಮಂಗಳನಾಗಿರುವನು.

      ಬೃಹತ್ಕಾಯಕವಾದ ವೃಶ್ಚಿಕ ರಾಶಿಯು ಸ್ರೀಜಾತಿ, ತೀಕ್ಷ್ಣ ಅಗ್ರ ಭಾಗ ವಿರುವದು. ಗುಪ್ತ ವಿಶಿಷ್ಠ ಪೂರ್ಣವಾದುದು  ಆಕಸ್ಮಿಕ ಮರಣ ತರುವಂತಹದು. ಆಗಿರುವುದು ವಿಷ ಕ್ರಿಮಿಗಳು, ತಮೋಗುಣ ಜಲತತ್ವ ಹಗಲು ಬಲಶಾಲಿತನ ಕಫ ಪ್ರಕೃತಿ, ಪಿತ್ತ ಪ್ರಕೃತಿಯ ಸಮರಾಶಿಯಾಗಿರುವುದು.

      ಶರೀರ ವಿಜ್ಞಾನದಂತೆ ಕಾಲ ಪುರುಷನ ಶರೀರದಲ್ಲಿ ವೃಶ್ಚಿಕ ರಾಶಿಗೆ ಬೆನ್ನೆಲುಬು ಮತ್ತು ಬೆನ್ನುಗಳಲ್ಲಿ ಸ್ಥಾನವಿದೆ. ಲಿಂಗ ಅಥವಾ ಯೋನಿಯ ಸಂಬಂಧವೂ ಇರುವುದು. ವೃಶ್ಚಿಕ ರಾಶಿಯ ದೃವ್ಯಗಳೆಂದರೆ ಲೋಹ ಕಬ್ಬು ಬೆಲ್ಲ ಸಕ್ಕರೆ,ಔಷಧಿ, ಎಣ್ಣೆ, ಅಡಿಕೆ,ಸಾಸಿವೆ ಮದಿರೆ ವಿಷಯುಕ್ತ ಪದಾರ್ಥಗಳು ನಾಶಯುಕ್ತ ವಸ್ತುಗಳು ಈ ರಾಶಿಯು  ಲೋಕದಲ್ಲಿನ ಮಲಯಾ ದೇಶದ ಪ್ರತೀಕವಾಗಿರುವದು. ವೃಶ್ಚಿಕ ರಾಶಿಯ ಸಂಬಂಧ ಅಂತರಾಷ್ಟ್ರೀಯ ಗುಪ್ತಚರ ವ್ಯವಸ್ಥೆ ನಾಟ್ಯ ಅಭಿನಯ, ಔಷಧ ಶಾಸ್ತ್ರ ಖನಿಜ್ಯೋದ್ಯಮ, ಸಂಶೋಧನೆಗಳೊಂದಿಗೆ ಸಹ ಇರುವುದು.

    ಈ ರಾಶಿಯ ಉದಯ ಕಾಲದಲ್ಲಿ ಜನಿಸಿದವರು,ಸುಂದರರು ವಿಚಾರ ಶೀಲರು, ಪರಿಶ್ರಮಿಗಳು, ಸಾಹಸಿಗಳು, ಸಂಶಯಿಗಳು ಅಕ್ರಮಣಕಾರಿಗಳು ಆಗುವರು ನೃತ್ಯ, ಸಂಗೀತ ಪ್ರೇಮಿಗಳು ಗಣಿತ ಜ್ಯೋತಿಷ್ಯ  ತಿಳಿದ ಸ್ವಚ್ಛಾಚಾರಿಗಳು,ಅವಸರವಾದಿಗಳು ಆಗುವರು. ಮಿತವ್ಯಯಿಗಳು. ಶ್ರೀಮಂತರು ಜಗಳದ ಸ್ವಭಾವದವರು, ಆಗುವವರು. ವೃಶ್ಚಿಕ ಲಗ್ನದಲ್ಲಿ ಜನಿಸಿದವರು,ರಾಸಾಯನಶಾಸ್ತ್ರಜ್ಞರು ಗುಪ್ತಚಾರರು, ಶಸ್ತ್ರಚಿಕಿಸಮತ್ಸಕರು, ಚಲನಚಿತ್ರ ನಟರು,ಸಂಗೀತ ವಾದ್ಯ ಪರಿಣಿತರು, ಭೂಗೋಲತಜ್ಞರು ಸಾಹಿತ್ಯಕಾರರೂ ಆಗುವರು. ಇವರು ಕಂಠ, ಎದೆ, ಗುಪ್ತಾಂಗಗಳ ರೋಗಗಳಿಂದ ದೂರವಿರಬೇಕು.

ಸೂರ್ಯನು ಈ ರಾಶಿಯಲ್ಲಿ ನವೆಂಬರ 15 ರಿಂದ ಡಿಸೆಂಬರ 14ರ ವರೆಗೆ ಇರುವನು. ಭಾರತೀಯ ಪದ್ದತಿಯಂತೆ ಮಾರ್ಗಶಿರ ಮಾಸದವರೆಗೆ ಇರುವನು ಈ ಸಮಯದಲ್ಲಿ ವೃಶ್ಚಿಕ ರಾಶಿಯವರಿಗೆ ಅನೇಕ ತೊಂದರೆಗಳಾಗಬಹುದು.ಈ ಸಮಯದಲ್ಲಿ ಜನಿಸಿದವರು ಚಿಕಿತ್ಸಕರಾಗ ಬಹುದು, ಮಾದಕ ವಸ್ತುಗಳಿಂದ ವಿಷಯುಕ್ತ ವಸ್ತುಗಳಿಂದ ಹಣಗಳಿಸ ಬಹುದಾಗಿದೆ.ಹೃದಯ ತಜ್ಞ, ಇಂಜಿನಿಯರ, ಲೇಖಕ ಸಹ ಆಗುವರು

   ಚಿಂದ್ರನು ಈ ರಾಶಿಯಲ್ಲಿರುವಾಗ ಜನಿಸಿದವರು ಕುಸಂಗತಿ, ಪಾಪ ಕರ್ಮ ಮಾಡುವರು. ಆಕರ್ಷಕ ವ್ಯಕ್ತಿತ್ವವನ್ನು ಹೊಂದಿ ಬಾಲ್ಯಾವಸ್ಥೆಯಲ್ಲಿ ಪಿತ್ತ ರಕ್ತ ದೋಷದಿಂದ ತೊಂದರೆ ಹೊಂದುವರು ಕಿಶೋರಾವಸ್ಥೆಯಲ್ಲಿ ಅನೈತಿಕ ಸಂಬಂಧವನ್ನು ಹೊಂದಬಹುದು.  ಆತ್ನನಿಗ್ರಹ ಇವರಿಗೆ ಅನಿವಾರ್ಯವಾಗುವುದು. ಈ ಸಮಸ್ಯೆ ಕಳೆದ ನಂತರ ಉನ್ನತಿ ಹೊಂದುವರು.

   ವೃಶ್ಚಿಕ ರಾಶಿಯಲ್ಲಿ ಚಂದ್ರನಿದ್ದರೆ ಸ್ತ್ರೀಯರಿಗೆ ಗರ್ಭಪಾತ, ಕಠಿಣವಾದ ರೀತಿಯಲ್ಲಿ ಸಂತಾನ ಪ್ರಾಪ್ತಿ ಆಗಬಹುದಾಗಿದೆ. ಈ ರಾಶಿಯವರು  ರಾಜನೀತಿಯಲ್ಲಿ ಸಫಲರಾಗುವರು. ಲೇಖನ,ಅಭಿನಯ ಕಲೆಗಳಲ್ಲಿ ಸಮರ್ಥ್ಯ ರೆನಿಸುವರು. ಆದರೆ ಆಲಸ್ಯ ತೊಂದರೆಗಳಿಂದಾಗಿ ಯಾವಾಗಲೂ ಚಿಂತೆಯಲ್ಲಿರುವರು. ಆದುದರಿಂದ ಅಪೂರ್ಣವಾದ ಪ್ರಸಿದ್ಧಿಯನ್ನು ಪಡೆಯುವರು ಭಾವನೆಗಳನ್ನು ನಿಯಂತ್ರಿಸಲು ಅಸಮರ್ಥರಾಗುವರು