ಮನೆ ಯೋಗಾಸನ ಲೋಲಾಸನ

ಲೋಲಾಸನ

0

 ‘ಲೋಲ’ ಎಂದರೆ ಕಿವಿಯಲ್ಲಿಯ ‘ಲೋಲಾಕಿ’ ನಂತೆ ಹಿಂದೆಮುಂದಾಡುವುದೆಂದರ್ಥ. ಈ ಭಂಗಿಯಲ್ಲಿ ಮೊದಲು ‘ಗೋಮುಖಾಸನ’ದಲ್ಲಿರುವಂತೆ ಕೈ ಗಳೆರಡನ್ನೂ ಕಾಲುಗಳನ್ನೂ ಒಂದಕ್ಕೊಂದು ಹೊಂದಿಸಿಟ್ಟು ಬಳಿಕ ಕೈಗಳನ್ನು  ಟೊಂಕಗಳ ಬಳಿಯಲ್ಲಿ ನೆಲದ ಮೇಲೂರಿ,ಇಡೀ ದೇಹವನ್ನು ಕೈ ಮತ್ತು ಮಣಿಕಟ್ಟುಗಳ ಆಧಾರದಿಂದಲೇ ಮೇಲೆತ್ತಿ, ಅದನ್ನು ತೂಗುಗುಂಡಿನಂತೆ ಹಿಂದಕ್ಕೂ ಮುಂದಕ್ಕೂ ಆಡಿಸಬೇಕು. ಆದ್ದರಿಂದ ಈ ಆಸನಕ್ಕೆ ಈ ಹೆಸರು.

Join Our Whatsapp Group

 ಅಭ್ಯಾಸ ಕ್ರಮ

1. ಮೊದಲು ಚಿತ್ರದಲ್ಲಿ ತೋರಿಸಿರುವಂತೆ ನೆಲದ ಮೇಲೆ ಕುಳಿತು, ಕಾಲುಗಳನ್ನು ನೇರವಾಗಿ ಮುಂಗಡೆಗೆ ಚಾಚಿಡಬೇಕು.

2. ಬಳಿಕ ಟೊಂಕಗಳ ಪಕ್ಕಕ್ಕೆ ಸರಿಯಾಗಿ ಅಂಗೈಗಳನ್ನು ನೆಲದಮೇಲೂರಿಡಬೇಕು.

3. ಆಮೇಲೆ ಆಸನವನ್ನು ಮೇಲೆ ಬ್ಬಿಸಿ, ಬಲಮಂಡಿಯನ್ನು ಹಿಂದಕ್ಕೆ ಭಾಗಿಸಿ, ಬಲಗಾಲನ್ನು ಎಡಪೃಷ್ಠದ ತಳಕ್ಕೆ ತಂದು ಅದರ ಮೇಲೆ ಪೃಷ್ಠವನ್ನು ಊರಿಡಬೇಕು.

4. ಈಗ ಎಡಮಂಡಿಯನ್ನು ಹಿಂದಕ್ಕೆ ಮಡಿಸಿ, ಮತ್ತೆ ಆಸನವನ್ನೆತ್ತಿ, ಎಡದಂ ಗಾಲನ್ನು ಬಲದೃಷ್ಟದ ತಳಕ್ಕೆ ತಂದು ಅದರ ಮೇಲೆ ಪೃಷ್ಠವನ್ನೂರಿಡಬೇಕು.

5. ಬಳಿಕ, ಬಲದ ಕಣಕಾಲು  ಎಡದಂಗಾಲಿನ ಮೀನ ಖಂಡದ ಮೇಲೆ ಬರುವಂತೆ ಕಾಲುಗಳೆರಡನ್ನೂ ತೊಡರಿಸಿ,ಕಲ್ಬೆರಳುಗಳನ್ನು ಹಿಮ್ಮೊಗವಾಗಿ ನೀಡಬೇಕು .

6. ಆಮೇಲೆ ಒಂದೆರಡು ಬಾರಿ ಉಸಿರಾಟ ನಡೆಸಿ, ಉಸಿರನ್ನು ಹೊರದೂಡಿ,  ಮುಂಡಭಾಗವನ್ನೂ ಮತ್ತು ಕಾಲುಗಳನ್ನು ನೆಲದಿಂದ ಮೇಲೆತ್ತಿ ತೋಳುಗಳನ್ನು ನೀಲವಾಗಿಸಿ, ಅಂಗೈಗಳ ಮೇಲೆ ಅವನು ಸಮತೋಲನ ಮಾಡಿ ನಿಲ್ಲಿಸಬೇಕು. ಈಗ ಸಾಮಾನ್ಯ ರೀತಿಯಲ್ಲಿಯೇ ಉಸಿರಾಟ ನಡೆಸುತ್ತ, ಮುಂಡವನ್ನೂ ಕಾಲುಗಳನ್ನೂ ಹಿಂದಕ್ಕೂ ಮುಂದಕ್ಕೂ ಅಡಿಸಬೇಕು.

7. ಇದಾದ ಬಳಿಕ, ದೇಹವನ್ನು ನೆಲದಮೇಲಿಳಿಸಿ, ಕಾಲುಗಳ ತೊಡರನ್ನು ಬಿಚ್ಚಬೇಕು.

8. ಈ ಭಂಗಿಯನ್ನು ಮಾಡಿ ಮುಗಿಸಿದ ಮೇಲೆ ಇನ್ನೊಂದು ಕಡೆಗೂ ಇದೆ ವಿಧವಾದ ಪ್ರತಿಭಂಗಿಯನ್ನಭ್ಯಸಿಸಿ, ಕೈಗಳ ಆಧಾರದ ಮೇಲೆ ದೇಹವನ್ನು ತೂಗಾಡಿಸಬೇಕು.

9. ಈ ಭಂಗಿಯನ್ನು ಸಾಧ್ಯವಾದಷ್ಟು ಕಾಲ ದೇಹವನ್ನು ಸಮತೋಲನದಿಂದಿರಿಸಬೇಕು.

ಪರಿಣಾಮಗಳು

 ಈ ಆಸನದ ಭಂಗಿಯು ಕೈಗಳಿಗೂ ಮಣಿಕಟ್ಟುಗಳಿಗೂ ಬೆನ್ನಿನಲ್ಲಿಯ ಮಾಂಸಖಂಡಗಳಿಗೂ ಮತ್ತು ಕಿಬ್ಬೊಟ್ಟೆಯೊಳಗಿನ ಅಂಗಗಳಿಗೂ  ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ. ಅಲ್ಲದೆ ಈ ಭಂಗಿಯ ಅಭ್ಯಾಸದಿಂದ ಕಾಲುಗಳಲ್ಲಿಯ ಮಾಂಸಖಂಡಗಳು ಸ್ಥಿತಿಸ್ಥಾಪಕತ್ವವನ್ನು ಪಡೆಯುತ್ತವೆ. ಮತ್ತು ತೋಳುಗಳ ಕೇಳತರದ  ಮಾಂಸ ಖಂಡಗಳು ಚೆನ್ನಾಗಿ ಬೆಳೆದು ಹುರುಪನ್ನು ಗಳಿಸುತ್ತವೆ.