ಮನೆ ಆರೋಗ್ಯ ಅಪಸ್ಮಾರ ಮೂರ್ಛೆರೋಗ

ಅಪಸ್ಮಾರ ಮೂರ್ಛೆರೋಗ

0

ಚಿತ್ತಭ್ರಮೆ —ಗರ್ಭಾಶಯದ ದೋಷ, ಋತು ದೋಷ ಕ್ರಿಮಿ ದೋಷ, ಹಲ್ಲು ಬರುವುದು, ಅಜೀರ್ಣಗಳ ಕಾರಣವಾಗಿದೆ.ಶರೀರವನ್ನು ಚೊಕ್ಕಟ ಮಾಡಬೇಕು.

Join Our Whatsapp Group

ವಮನ, ವಿರೇಚನ, ನಶ್ಯ ಕಾರ್ಯಗಳನ್ನು ಮಾಡಿ ಔಷಧ ಕೊಟ್ಟರೆ ಶ್ರೀಘ್ರ ಪರಿಣಾಮಕಾರಿ ಮಾದಕ ಪದಾರ್ಥ, ಹೊಗೆ ಸೊಪ್ಪು ಮಾಂಸಹಾರ, ಮುಷ್ಟಿ ಮೈಥುನಗಳನ್ನು ಸಂಪೂರ್ಣವಾಗಿ ಬಿಡಬೇಕು. ಆದಷ್ಟು ವ್ಯಾಯಾಮ, ಪ್ರಾಣಾಯಾಮ ಮಾಡಬೇಕು. ಹೆಚ್ಚಾಗಿ ಹಾಲು ಕುಡಿಸಬೇಕು. ಬಾಣಂತಿಯರಲ್ಲಿಯೂ ಅಪಸ್ಮಾರವಾಗುವುದುಂಟು. ಆಗ ಕಾಲಿನ ಭಾಗ ಬಿಸಿಯಾಗಿರುವಂತೆ ಉಣ್ಣೆ ಕಟ್ಟಬೇಕು.ಮೂತ್ರ ಪರೀಕ್ಷೆ ಮುಖ್ಯ. ಇದನ್ನು ಮಲರೋಗ,ಉನ್ಮಾದ ತಮೋ ಗುಣ,ಜಡತೆ, ಅತಿ ನಿದ್ರೆ ಬುದ್ಧಿ ಮಾಂದ್ಯಗಳಿರುತ್ತವೆ.
1.ಬಲಿತ ಹಾಗೂ ಹಣ್ಣಾದ ಎಕ್ಕದ ಎಲೆಗಳನ್ನು ಚೆನ್ನಾಗಿ ಸುಟ್ಟು ಬೂದಿಯನ್ನು ಬಟ್ಟೆಯಲ್ಲಿ ಶೋಧಿಸಿಕೊಂಡು ಪ್ರತಿದಿನವೂ ಎರಡು ಹೊತ್ತು ಒಂದು ಗುಂಜಿಯಷ್ಟು ಬೂದಿಯನ್ನು ಜೇನುತುಪ್ಪದಲ್ಲಿ ಕಲಸಿ ನೆಕ್ಕಿಸಬೇಕು. ಬೆಲ್ಲದಲ್ಲಿ ಹಾಕಿ ಸೇವಿಸಬೇಕು
2.ಒಂದೆಲಗದ ಸಮೂಲ ಸೊಪ್ಪಿನ ರಸ ಎರಡು ಚಮಚಕ್ಕೆ ಜೇನುತುಪ್ಪ ಸೇರಿಸಿ 42 ದಿನಗಳ ಕಾಲ ಬೆಳಗಿನ ವೇಳೆ ಕುಡಿಯಬೇಕು.ಹಾಲು, ಅನ್ನ, ಬೇಳೆ, ಹುರುಳಿ ಕಟ್ಟು, ಕಾಳು ಮೆಣಸಿನ ಸಾರು ಊಟ ಮಾಡಬೇಕು.
3.ಬಾಳೆ ಗಿಡದಲ್ಲಿ ಗೊನೆ ಬಂದಮೇಲೆ ಅದನ್ನು ಕಡಿದು ಬಿಸಾಡುತ್ತಾರೆ. ಆ ಕಾಂಡದ ಮಧ್ಯೆ ದಿಂಡು ಇರುತ್ತದೆ.ಅದನ್ನು ತುರಿದು ಆ ರಸವನ್ನು ಎರಡು ಔನ್ಸ್ ನಷ್ಟು ಪ್ರತಿದಿನವೂ ಸೇವಿಸುತ್ತಿದ್ದರೆ ಅಪಸ್ಮಾರ ಕಡಿಮೆಯಾಗುತ್ತದೆ.