ಮನೆ ಯೋಗಾಸನ ವೀರಾಸನ

ವೀರಾಸನ

0

‘ವೀರ ’ಎಂದರೆ ಶೂರ, ದಿಟ್ಟ ನಾದ ಯೋಧ, ಜಗಜಟ್ಟಿ ಆಹವಮಲ್ಲ. ಇದೊಂದು ಕುರಿತು ಅಭ್ಯಸಿಸುವ ಆಸನ. ಇದರಲ್ಲಿ ಮಂಡಿಗಳೆರಡನ್ನೂ ಜೋಡಿಸುವಂತೆ ಕಾಲುಗಳನ್ನು ಮಂಡಿಸಿ, ಹಿಂದಕ್ಕೆ ಜಾಚಿ, ಅವುಗಳನ್ನು ಟೊಂಕಗಳ ಪಕ್ಕಕ್ಕಿಟ್ಟು ಕುಳಿತುಕೊಳ್ಳುವ ಭಂಗಿ.

Join Our Whatsapp Group

   ಈ ವೀರಾಸನವು ಧ್ಯಾನಕ್ಕೂ ಮತ್ತು ಪ್ರಾಣಾಯಾಮಕ್ಕೂ ಯೋಗ್ಯವಾದುದೆಂದು ಸಲಹೆ ನೀಡಿದೆ. ಮಹಾಕವಿ ಕಾಳಿದಾಸರು “ರಘುವಂಶ ವೆಂಬ ತನ್ನ ಮಾಹಾ ಕಾವ್ಯದ 13ನೇ ಸ್ವರ್ಗದ 52ನೇ ಶ್ಲೋಕದಲ್ಲಿ ಈ ವೀರಾಸನವನ್ನು ಕುರಿತು ಈ ಬಗೆಯಲ್ಲಿ ತಿಳಿಸಿದ್ದಾನೆ; ‘ವೀರಾಸನೈಃ ಧ್ಯಾನಜುಷಾಂ, ಋಷೀಣಾಂ ಅಂದರೆ ಧ್ಯಾನ ಮಾಡುವವರಿಗೆ,ತಪಸ್ಸಿಗಳಿಗೆ ಈ ವೀರಾಸನವು  ಅತಿಶ್ರೇಷ್ಠವೆಂಬುದು ಇದರಿಂದ ವ್ಯಕ್ಯವಾಗುತ್ತದೆ. ಅಲ್ಲದೆ  ವಸಿಷ್ಠ ಋಷಿಗಳು ವೀರಾಸನದ ವಿವರಣೆಗಳನ್ನು ಹೀಗೆಂದು ತಿಳಿಸಿದ್ದಾರೆ. 

 ಅಂದರೆ,ಒಂದು ಕಾಲಿನ ಪಾದವನ್ನು ಇನ್ನೊಂದು ಕಾಲಿನ ತೊಡೆಯಲ್ಲಿಟ್ಟು ಇನ್ನೊಂದು ಕಾಲಿನ ಪಾದವನ್ನು ಮೊದಲಿನ ಕಾಲಿನ ತೊಡೆಯೊಳಗಿಟ್ಟು ಕೊಡುವ ಆಸನವೇ ವೀರಸನ.

 ಅಭ್ಯಾಸ ಕ್ರಮ

 1.ಮೊದಲು ನೆಲದಮೇಲೆ ಮಂಡಿಯೂರಿ ಕುಳಿತು, ಮಂಡಿಗಳನ್ನು ಜೋಡಿಸಿ,ಪಾದಗಳ ನಡುವಣಂತರ 18 ಅಂಗುಲಗಳಿರುವಂತೆ ಅವನು ಅಗಲಿಸಬೇಕು.

      2.ಬಳಿಕ  ಪೃಷ್ಠಗಳನ್ನು ನೆಲದ ಮೇಲೂರಿಟ್ಟು,ದೇಹದ ಭಾರವನ್ನು ಪಾದಗಳಿಗೆ ಬದಲಾಗಿ ಆ ಪೃಷ್ಠ ಗಳಿಗೇ ವಹಿಸಬೇಕು. ಕಾಲುಗಳನ್ನು ತೊಡೆಯ ಪಕ್ಕಗಳಲ್ಲಿರಿಸಿ, ಪ್ರತಿಯೊಂದು ಕಾಲಿನ ಮೀನ ಖಂಡದ ಒಳಬದಿ ಆಯಾ ತೊಡೆಗಳ ಒಳಬದಿಯನ್ನು ತಾಗಿಸುವಂತಿರಬೇಕು. ಕಾಲ್ಬೆ ರಳುಗಳು ಹಿಮ್ಮೊಗಮಾಡಿ ಹಿಮ್ಮಡಿಯನ್ನು  ಮೇಲ್ದಿಕ್ಕಿಗಿಟ್ಟು ನೆಲದಮೇಲೆ ಚಾಚಿಡಬೇಕು.ಅ ನಂತರ ಮಣಿಕಟ್ಟುಗಳನ್ನು ಮಂಡಿಗಳ ಮೇಲಿರಿಸಿ, ಅಂಗೈಗಳ ಮೇಲ್ಮೊಗಮಾಡಿ ತರ್ಜಿನೀ (ತೋರು) ಬೆರಳನ್ನು ಅಂಗುಷ್ಠದ (ಹೆಬ್ಬೆರಳಿನ)  ನಡುತಾಣಕ್ಕೆ ಸೇರಿಸಿ,ಉಳಿದ ಮೂರು ಬೆರಳುಗಳನ್ನೂ ಚಾಚಿ, ಅಂದರೆ ‘ಚಿನ್ಮುದ್ರೆ’ಮಾಡಿರಬೇಕು ಬಳಿಕ ಬೆನ್ನನ್ನು ನೆಟ್ಟಗಿರಿಸಬೇಕು.

3. ಈ ಭಂಗಿಯಲ್ಲಿ ಸಾಧ್ಯವಾದಷ್ಟು ಕಾಲ ನೆಲೆಸಿದ್ದು ನೀಳವಾದ ಉಸಿರಾಟವನ್ನು ನಡೆಸುತ್ತಿರಬೇಕು.

4. ಆ ಬಳಿಕ ಅಂಗೈಗಳನ್ನು ಮೊಣಕಾಲುಗಳ ಮೇಲೆ ಸ್ವಲ್ಪ ಕಾಲ ಇರಿಸಬೇಕು.

5. ಈಗ ಕೈ ಬೆರಳುಗಳನ್ನು ಒಂದರಲ್ಲೊಂದನ್ನು ಹೆಣದು, ತೋಳುಗಳನ್ನು ತಲೆಯ ಮೇಲೆ ತಂದು,ನೀಲವಾಗಿ ಎತ್ತಿ ಹಿಡಿದು ಹೆಣೆದ ಅಂಗೈಗಳನ್ನು ಮೇಲ್ಮೊಗಮಾಡಿಡಬೇಕು

6. ಈ ಭಂಗಿಯಲ್ಲಿ ನೀಳವಾಗಿ ಉಸಿರಾಡಿಸುತ್ತ, ಒಂದು ನಿಮಿಷದ ಕಾಲ ನೆಲೆಸಬೇಕು.

7. ಆಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು ಚಿನ್ಮುದ್ರೆಯನ್ನು ಬಿಚ್ಚಿ ಅಂಗೈಗಳನ್ನು ಅಂಗಾಲುಗಳ ಮೇಲಿಟ್ಟು ಮುಂಬಾಗಿ ಗದ್ದವನ್ನು ಮೊಣಕಾಲುಗಳ ಮೇಲೆ ಒರಗಿಸಬೇಕು

8. ಈ ಭಂಗಿಯಲ್ಲಿಯೂ ಒಂದು ನಿಮಿಷದ ಕಾಲ ನೆಲೆಸಿದ್ದು ಸಾಮಾನ್ಯ ಉಸಿರಾಟವನ್ನು ನಡೆಸುತ್ತಿರಬೇಕು.

9. ಆ ಬಳಿಕ ಉಸಿರನ್ನು ಒಳಕ್ಕೆಳೆದು ಮುಂಡವನ್ನು ಮೇಲೆತ್ತಿ ಪಾದಗಳೆರಡನ್ನೂ ಮುಂಗಡೆಗೆ ತಂದು ವಿಶ್ರಮಿಸಬೇಕು.

10. ಮೇಲೆ ವಿವರಿಸಿದಂತೆ ಈ ಭಂಗಿಯ ಅಭ್ಯಾಸವು ಕಷ್ಟವೆಂದು ತೋರಿದರೆ, ಮೊದಲು ಪಾದಗಳನ್ನು ಒಂದರ ಮೇಲೊಂದಿರಿಸಿ,  ಪೃಷ್ಠಗಳನ್ನು ಅವುಗಳ ಮೇಲೆ ಊರಿಡಬೇಕು. ಬಳಿಕ ಮೇಲ್ಲ ಮೆಲ್ಲಗೆ ಕಾಲ್ಬೆರಳುಗಳನ್ನು ದೂರದೂರಕ್ಕೆ ಸರಿಸುತ್ತ ಬಂದು, ಕಡೆಗೆ ಪಾದಗಳನ್ನು ಬೇರ್ಪಡಿಸಿ,ಕಡೆಗೆ ಅವುಗಳನ್ನು ತೊಡೆಗಳ ಹೊರಬದಿಗೆ ತಂದು ನಿಲ್ಲಿಸಬೇಕು, ಆಗ ಪೃಷ್ಠಗಳು ನೆಲದಮೇಲೆಯೇ ನೆಲೆಸಿರುತ್ತವೆ.  ಈ ಭಂಗಿಯಲ್ಲಿ ದೇಹಕ್ಕೆ ಪಾದಗಳ ಆಶ್ರಯವೇ ಇಲ್ಲ.

ಪರಿಣಾಮಗಳು  

ಈ ಆಸನದ ಭಂಗಿಯು, ಸಂಧಿವಾತದ ಕಿಲುನೋವನ್ನೂ ಮತ್ತು ಕೈಕಾಲು ಹಿಡಿತದಿಂದುಂಟಾಗುವ ನೋವನ್ನು ಗುಣಪಡಿಸುತ್ತದೆ.ಪಾದಗಳನ್ನೂಕಾಲ್ಗಿಣ್ಣುಗಳನ್ನೂ ಈ ಅಭ್ಯಾಸದಲ್ಲಿ ಹಿಗ್ಗಿಸಬೇಕಾಗಿರುವುದರಿಂದ ಅವುಗಳಲ್ಲಿ ವೃತ್ತಖಂಡಗಳು ಸರಿಯಾಗಿ ವೃದ್ಧಿಯಾಗುತ್ತವೆ.ಇದನ್ನು ಸಾಧಿಸಲು ತಿಂಗಳುಗಟ್ಟಲೆ ಪ್ರತಿದಿನದ ಅಭ್ಯಾಸವು ಬೇಕಾಗುತ್ತದೆ. ಹಿಮ್ಮಡಿನೋವು ಇಲ್ಲವೇ ಹಿಮ್ಮಡಿಹೆಲುಬು  ಮೇರೆಮೀರಿ ಬೆಳೆದಿದ್ದರೆ ಈ ಭಂಗಿಯ ಅಭ್ಯಾಸದಿಂದ ಆ ನೋವು ಹಿಂಗಿ, ಹಿಮ್ಮಡಿಗಳ ಹೆಬ್ಬೆರಳು ಕ್ರಮೇಣ ತೆಗ್ಗಿ ಹೋಗುತ್ತದೆ.ಈ ಆಸನಭಂಗಿಯನ್ನು ಊಟ ಮಾಡಿದ ತತ್ ಕ್ಷಣ ಬೇಕಾದರೂ ಅಭ್ಯಸಿಸಲು ಅಡ್ಡಿಯಿಲ್ಲ. ಇದರಿಂದ ಹೊಟ್ಟೆಬಾರವು ಕಡಿಮೆಯಾಗುತ್ತದೆ.