ಮನೆ ರಾಷ್ಟ್ರೀಯ ಜೂನ್ 8 ರಂದು ಮೂರನೇ ಬಾರಿಗೆ ಮೋದಿ ಪ್ರಮಾಣವಚನ ಸಾಧ್ಯತೆ

ಜೂನ್ 8 ರಂದು ಮೂರನೇ ಬಾರಿಗೆ ಮೋದಿ ಪ್ರಮಾಣವಚನ ಸಾಧ್ಯತೆ

0

ಹೊಸದಿಲ್ಲಿ:ಜೂನ್ 8 ರಂದು ಸಂಜೆ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Join Our Whatsapp Group

ದೆಹಲಿಯಲ್ಲಿ ಬುಧವಾರ ಅಮಿತ್ ಶಾ ಅವರ ನೇತೃತ್ವದಲ್ಲಿ ಮಹತ್ವದ ಎನ್ ಡಿಎ ಮೈತ್ರಿಕೂಟದ ನಾಯಕರ ಸಭೆ ನಡೆಯಲಿದ್ದು ಅಲ್ಲಿ ತೀರ್ಮಾನ ಅಂತಿಮವಾಗಲಿದೆ ಎಂದು ತಿಳಿದು ಬಂದಿದೆ.

ಲೋಕಸಭಾ ಚುನಾವಣ ಫಲಿತಾಂಶದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದ್ದು ಮ್ಯಾಜಿಕ್ ನಂಬರ್ 272 ಕ್ಕಿಂತ ಕಡಿಮೆ ಸ್ಥಾನ ಹೊಂದಿದೆ. ಆದರೆ ಎನ್ ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಹೊಂದಿದೆ. ಮಿತ್ರ ಪಕ್ಷ ಜೆಡಿಯು ಮತ್ತು ಟಿಡಿಪಿ, ಎಲ್ ಜೆಪಿ ಬೆಂಬಲ ಅಗತ್ಯವಾಗಿದೆ.

ಮುಂಬರುವ ಪ್ರಧಾನಿ ಮತ್ತು ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆಯಿಂದಾಗಿ ರಾಷ್ಟ್ರಪತಿ ಭವನ ಬುಧವಾರದಿಂದ ಭಾನುವಾರದವರೆಗೆ ಸಾರ್ವಜನಿಕರಿಗೆ ಮುಚ್ಚಿರುತ್ತದೆ ಎಂದು ಮಂಗಳವಾರ ಅಧಿಕೃತ ಹೇಳಿಕೆ ತಿಳಿಸಿದೆ.

ರಾಷ್ಟ್ರಪತಿ ಭವನದಲ್ಲಿ ಮಂತ್ರಿ ಪರಿಷತ್ತಿನ ಪ್ರಮಾಣ ವಚನ ಸಮಾರಂಭದ ಮುಂಬರುವ ಕಾರ್ಯಕ್ರಮದ ಸಿದ್ಧತೆಗಾಗಿ ಭವನದ (ಸರ್ಕ್ಯೂಟ್ -1) ಭೇಟಿಯನ್ನು ಜೂನ್ 5 ರಿಂದ 9, 2024 ರವರೆಗೆ ಸಾರ್ವಜನಿಕರಿಗೆ ಮುಚ್ಚಲಾಗುತ್ತಿದೆ ಎಂದು ರಾಷ್ಟ್ರಪತಿಗಳ ಕಚೇರಿ ಹೇಳಿಕೆ ಹೊರಡಿಸಿದೆ.

ಸರ್ಕ್ಯೂಟ್-1 ಮುಖ್ಯ ಕಟ್ಟಡ, ಮುಂಭಾಗ, ಸ್ವಾಗತ, ನವಚಾರ, ಔತಣಕೂಟ ಹಾಲ್, ಮೇಲಿನ ‘ಲೋಗ್ಗಿಯಾ’, ಲುಟ್ಯೆನ್ಸ್ ಗ್ರ್ಯಾಂಡ್ ಮೆಟ್ಟಿಲುಗಳು, ಗೆಸ್ಟ್ ವಿಂಗ್, ಅಶೋಕ ಹಾಲ್, ನಾರ್ತ್ ಡ್ರಾಯಿಂಗ್ ರೂಮ್, ಲಾಂಗ್ ಡ್ರಾಯಿಂಗ್ ರೂಮ್, ಲೈಬ್ರರಿ, ದರ್ಬಾರ್ ಹಾಲ್ ಮತ್ತು ಭಗವಾನ್ ಬುದ್ಧನ ಪ್ರತಿಮೆ ಸ್ಥಳಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶವಿದೆ.