ಮನೆ ಮನೆ ಮದ್ದು ಅರೆತಲೆನೋವು ಅರ್ಧಾವಭೇದಕ

ಅರೆತಲೆನೋವು ಅರ್ಧಾವಭೇದಕ

0

1. ಬಲಗಡೆ ಬಂದರೆ ಎಡಭಾಗದ ಕಿವಿಗೆ ಶುಂಠಿ ಮತ್ತು ನುಗ್ಗೇಸೊಪ್ಪು ಕುಟ್ಟಿ ಶೋಧಿಸಿದ ರಸ ಐದು ತೊಟ್ಟು ಹಾಕಬೇಕು.

2. ಎಡಗಡೆ ಬಂದರೆ ಬಲಗಡೆ ಹಾಕಬೇಕು,  ಎಡಗಡೆ ಬಂದರೆ ಬಲಗಡೆ ಹಾಕಬೇಕು ಮಲಬದ್ಧತೆ ನಿವಾರಣೆ ಮಾಡಬೇಕು.

ಅಷ್ಟೀಲಾ ಪ್ರೋಸ್ಟೇಟ್ ಎನ್ ಲಾರ್ಜ್ ಮೆಂಟ್:-

 ಮೂತ್ರಾಶಯದ ಹತ್ತಿರ ಮೂತ್ರ ಮಾರ್ಗವನ್ನು ಅವಸರಿಸುವ ಅಷ್ಟೀಲಾ ಗ್ರಂಥಿ ಇರುವುದು. ಅದು ದೊಡ್ಡದಾಗಿ ಮೂತ್ರ ವಿಸರ್ಜನೆಗೆ ಅಡ್ಡಿಯನ್ನುಂಟು ಮಾಡುತ್ತದೆ.

1. ಸೀಮೆಅಕ್ಕಿ ಪಾಯಸ ಮಾಡಿ ಕುಡಿಸುವುದು, ಗಸಗಸೆ ಪಾಯಸ ಮಾಡಿ ಕುಡಿಸುವುದು, ಹೆಸರು ಕಾಳು ಪಾಯಸ ಮಾಡಿ ಸೇವಿಸುವುದರಿಂದ ಗುಣವಾಗುವುದು.

 2.ಮೂತ್ರ ವಿರೇಚನ ಕ್ಷಾಥ ಹಿಂಗ್ವಾಧಿ ಗುಟಿಯನ್ನು ದಿನಕ್ಕೆರಡು ಸಾರಿ ಸೇವಿಸಬೇಕು.

 ಅಂತ್ರ ವೃದ್ಧಿ ಅಂಡ ವಾಯು

1. ವೃಷಣ ದಪ್ಪನಾಗುವುದು, ಅದರಲ್ಲಿ ಕೆಟ್ಟ ನೀರು ಸೇರಿ ಹೈಡ್ರೋ ಸೆಲೆಯಾಗಬಹುದು.ಶೀತಲ ಚಡ್ಡಿಯನ್ನು ಹಾಕಿ ಕೈಯಿಂದ ಹಿಸುಕುತ್ತಿರಬೇಕು. ಕಾಲಿನ ಭಾಗ ತಿರುಗಿಸಿ ಮಲಗಿರಬೇಕು. ಸ್ವಾದಿಷ್ಟ ವಿರೇಚನ ಚೂರ್ಣ ಸೇವಿಸಬೇಕು.

 2.ಕುಬೇರಾಕ್ಷ ಚೂರ್ಣವನ್ನು ದಿನಕ್ಕೆ ಮೂರು ವೇಳೆ ಜೇನಿನಲ್ಲಿ ಸೇವಿಸಬೇಕು.

 3.ಸೈಂದವ ಲವಣವನ್ನು ಸೇವಿಸುತ್ತಿರಬೇಕು.

 4.ಗಜ್ಜುಗದ ಬಳಪವನ್ನು ನೀರಿನಲ್ಲಿ ಅರೆದು, ಪಟ್ಟು ಹಾಕಬೇಕು.