ಮನೆ ಯೋಗಾಸನ ಸುಪ್ತವೀರಾಸನ

ಸುಪ್ತವೀರಾಸನ

0

ಇದರಲ್ಲಿ ನೆಲದಮೇಲೆ ಮಲಗಿ ವೀರಾಸನ ಭಂಗಿಯನ್ನು ಅಭ್ಯಸಿಸ ಬೇಕಾಗಿರುವುದರಿಂದ ಇದಕ್ಕೆ ಈ ಹೆಸರು. ಅಭ್ಯಾಸಿಯು ನೆಲದ ಮೇಲೆ ಹಿಂದಕ್ಕೆ ಒರಗಿ ಮಲಗಿಕೊಂಡು, ಈ ಭಂಗಿಯಲ್ಲಿ ತೋಳುಗಳನ್ನು ತಲೆಯ ಹಿಂಬದಿಗೆ ನೀಲವಾಗಿ ಹಿಗ್ಗಿಸಿಡಬೇಕಾಗಿದೆ.

Join Our Whatsapp Group

ಅಭ್ಯಾಸ ಕ್ರಮ 

1. ಮೊದಲು ‘ವಿರಾಸನ’ ಹಾಕಿ ನೆಲದ ಮೇಲೆ ಕುಳಿತುಕೊಳ್ಳಬೇಕು.

 2.ಆ ಬಳಿಕ,,ಉಸಿರನ್ನು ಹೊರಕ್ಕೆ ಬಿಟ್ಟು ಮುಂಡವನ್ನು ಹಿಂದಕ್ಕೆ ಬಾಗಿಸಿ, ಮೊಣಕೈಗಳನ್ನು ಒಂದಾದ ಮೇಲೊದರಂತೆ ನೆಲದ ಮೇಲೆ ಒತ್ತಿಡಬೇಕು.

3.ಆ ಬಳಿಕ,ಒಂದೊಂದಾಗಿ ತೋಳುಗಳನ್ನು ನೆಲದ ಮೇಲೂರಿ ಆಮೇಲೆ ಕ್ರಮಕ್ರಮವಾಗಿ ತಲೆಯ ಹಿಂಬಬದಿಯನ್ನೂ ಬಳಿಕ ಬೆನ್ನುನ್ನೂ ನೆಲದ ಮೇಲೊರಗಿಸಬೇಕು. ತರುವಾಯ ತೋಳುಗಳನ್ನು ತಲೆಯ ಮೇಲ್ಗಡೆಗೆ ತಂದು, ಅವನ್ನು ನೀಳವಾಗಿ ಚಾಚಿಡಬೇಕು.ಈ ಭಂಗಿಯಲ್ಲಿ ಸಾಧನವಾಗುವಷ್ಟು ಕಾಲ ನೆಲೆಸಿ, ನೀಳವಾದ ಉಸಿರಾಟ ನಡೆಸುತ್ತಿರಬೇಕು. ಆ ಬಳಿಕ ತೋಳುಗಳನ್ನು ಮುಂಡದ ಪಕ್ಕಗಳಿಗೆ ತಂದು, ಮೊಣಕೈಗಳನ್ನು ನೆಲಕ್ಕೆ ಊರೆ ಕೊಟ್ಟು ಉಸಿರನ್ನು ಹೊರಕ್ಕೆ ಬಿಡುತ್ತ ಮೇಲೆದ್ದು ಮತ್ತೆ ಕುಳಿತುಕೊಳ್ಳಬೇಕು .

4.ಕೈಗಳನ್ನು ತಲೆಯಮೇಲೆ ನೀಳವಾಗಿ ಚಾಚಿಡಬೇಕು.ಇಲ್ಲವೆ ತೊಡೆಗಳ ಬಳಿ ಅವುಗಳನ್ನಿರಿಸಬಹುದು.

 ಆದರೆ ತಲೆಯಮೇಲೆ ಅವುಗಳನ್ನು ನೀಡಿದಾಗ ಹೆಗಲೆಲುಬುಗಳನ್ನು ನೆಲದಿಂದ ಮೇಲೆತ್ತಬಾರದು.

5.ಹೊಸದಾಗಿ ಆ ಆಸನವನ್ನು ಅಭ್ಯಸಿಸುವವರು. ಮೊಣಕಾಲು ಮಂಡಿಗಳನ್ನು ಬೇರೆ ಬೇರೆ ಇರಿಸಬಹುದು.

ಪರಿಣಾಮಗಳು 

 ಈ ಆಸನವು ಕಿಬ್ಬೊಟ್ಟೆಯೊಳಗಿನ ಅಂಗಗಳನ್ನೂ ಮತ್ತು ವಸ್ತಕುಹರದ ಭಾಗವನ್ನೂ (Pelvic region)ಹಿಗ್ಗಿಸುತ್ತದೆ. ಈ ಭಂಗಿಯನ್ನು 10 -15 ಸಲ ಅಭ್ಯಾಸ ಮಾಡುವುದರಿಂದ, ಕಾಲು ನೋವಿನಿಂದ ಪೀಡಿತರಾದವರು ಬಲುಬೇಗ ಗುಣ ಹೊಂದುವರು ಆದುದರಿಂದ ಬಹಳ ಹೊತ್ತು ನಿಂತಿರಬೇಕಾದವರಿಗೂ ಮತ್ತು ಕ್ರೀಡಾಪಟುಗಳಿಗೂ ಈ ಆಸನವು ಸತ್ಛಲಕಾರಿಯೆಂದು ಸಲಹೆ ಮಾಡಲಾಗಿದೆ. ಇದರ ಅಭ್ಯಾಸವನ್ನು ಊಟಮಾಡಿದ ಮೇಲೆಯಾದರೂ ಮಾಡಬಹುದು. ರಾತ್ರಿ ಮಲಗುವ ಮುನ್ನ ಇದನ್ನು ಅಭ್ಯಸಿಸಿದಲ್ಲಿ ಮಾರನೆಯ ಬೆಳಿಗ್ಗೆ ಕಾಲುಗಳಿಗೆ ತುಂಬಾ ವಿಶ್ರಾಂತಿ ದೊರಕಿದಂತಿರುತ್ತದೆ. ರಾಷ್ಟ್ರೀಯ ರಕ್ಷಣಾ ಸಂಸ್ಥೆಯಲ್ಲಿ(National Defence Academy or N. D. A)ಸೈನ್ಯ ಶಿಕ್ಷಣ ಪಡೆಯುತ್ತಿದ್ದ. ಈ ಗ್ರಂಥಕರ್ತ ಶಿಷ್ಯರೆಲ್ಲೆನೇಕರು ಈ ಆಸನವನ್ನು ಸರ್ವಾಂಗಾಸನವನ್ನೂ ಕ್ರಮವಾಗಿ ಅಭ್ಯಾಸಮಾಡಿ,ಬಹುದೂರ ದಂಡಿನ ಪ್ರಯಾಣ ನಡಿಗೆಯಿಂದ ತಮಗಾದ ಆಯಾಸವನ್ನು ಪರಿಹರಿಸಕೊಂಡಿದ್ದಾರೆ.