ಮನೆ ಅಪರಾಧ ನಕಲಿ ದಾಖಲೆ ತೋರಿಸಿ ಸಂಸತ್ ಪ್ರವೇಶಕ್ಕೆ ಯತ್ನಿಸಿದ ಮೂವರ ಬಂಧನ

ನಕಲಿ ದಾಖಲೆ ತೋರಿಸಿ ಸಂಸತ್ ಪ್ರವೇಶಕ್ಕೆ ಯತ್ನಿಸಿದ ಮೂವರ ಬಂಧನ

0

ನವದೆಹಲಿ: ನಕಲಿ ಆಧಾರ್ ಕಾರ್ಡ್ ತೋರಿಸಿ ಹೆಚ್ಚಿನ ಭದ್ರತೆ ಹೊಂದಿರುವ ಸಂಸತ್ತಿನ ಸಂಕೀರ್ಣಕ್ಕೆ ಪ್ರವೇಶಿಸಲು ಯತ್ನಿಸಿದ ಮೂವರನ್ನು ಭದ್ರತಾ ಸಿಬಂದಿಗಳು ವಶಕ್ಕೆ ಪಡೆದಿರುವ ಘಟನೆ ಜೂನ್ 4ರಂದು ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.

Join Our Whatsapp Group

ಕಾರ್ಮಿಕರೆಂದು ಹೇಳಿಕೊಂಡು ನಕಲಿ ಆಧಾರ್ ಕಾರ್ಡ್ ತೋರಿಸಿ ಸಂಸತ್ ಒಳಗೆ ಪ್ರವೇಶಿಸಲು ಯತ್ನಿಸಿದ್ದಾರೆ ಆದರೆ ಭದ್ರತಾ ಸಿಬಂದಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದು ಬೆಳಕಿಗೆ ಬಂದಿದೆ ಈ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಮೂಲದ ಮೂವರನ್ನು ಬಂಧಿಸಿದ್ದಾರೆ.

ದೆಹಲಿ ಪೊಲೀಸರು ಫೋರ್ಜರಿ ಮತ್ತು ವಂಚನೆ ಆರೋಪದ ಮೇಲೆ ಮೂವರು ಆರೋಪಿಗಳಾದ ಕಾಸಿಂ, ಮೋನಿಸ್ ಮತ್ತು ಸೋಯೆಬ್ ಅವರನ್ನು ಬಂಧಿಸಿದ್ದಾರೆ. ಮಂಗಳವಾರ ಸಂಸತ್ ಭವನದ ಗೇಟ್ ನಂಬರ್ ಮೂರರಲ್ಲಿ ಭದ್ರತಾ ತಪಾಸಣೆಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗ ಮೂವರನ್ನು ಸಿಐಎಸ್‌ಎಫ್ ಸಿಬ್ಬಂದಿ ತಡೆದು ತಪಾಸಣೆ ನಡೆಸಿದ ವೇಳೆ ಅವರ ಬಳಿ ನಕಲಿ ಆಧಾರ್ ಕಾರ್ಡ್ ಇರುವುದು ಬೆಳಕಿಗೆ ಬಂದಿದೆ.

ಬಂಧಿತರು ಡೀ ವೀ ಪ್ರಾಜೆಕ್ಟ್‌ ಲಿಮಿಟೆಡ್‌ ನಿಯೋಜಿಸಿರುವ ಗುತ್ತಿಗೆ ನೌಕರರಾಗಿದ್ದು ಎಂದು ಹೇಳಲಾಗುತ್ತಿದ್ದು, ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 19/465/468/471/120B ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ.

ಕೆಲ ತಿಂಗಳ ಹಿಂದೆ ಮೈಸೂರು ಮಾಜಿ ಸಂಸದ ಪ್ರತಾಮ್ ಸಿಂಹ ಅವರಿಂದ ಪಾಸ್ ಪಡೆದುಕೊಂಡು ಸಂಸತ್ ಪ್ರವೇಶಿಸಿಡಾ ವ್ಯಕ್ತಿಗಳು ಲೋಕಸಭೆ ಕಲಾಪದ ವೇಳೆ ಅಶ್ರುವಾಯು ಸಿಡಿಸಿದ್ದ ಪ್ರಕರಣದ ನೆನಪು ಪೂರ್ಣ ಮಾಸುವ ಮುನ್ನವೇ ಈ ಘಟನೆ ಬೆಳಕಿಗೆ ಬಂದಿದೆ.