ಮನೆ ರಾಷ್ಟ್ರೀಯ ಕಂಗನಾ ರಣಾವತ್‌ ಗೆ ಕಪಾಳಮೋಕ್ಷ ಮಾಡಿದ್ದ ಮಹಿಳಾ ಭದ್ರತಾ ಸಿಬಂದಿ ಅಮಾನತು

ಕಂಗನಾ ರಣಾವತ್‌ ಗೆ ಕಪಾಳಮೋಕ್ಷ ಮಾಡಿದ್ದ ಮಹಿಳಾ ಭದ್ರತಾ ಸಿಬಂದಿ ಅಮಾನತು

0

ಚಂಡೀಗಢ: ಚಂಡೀಗಢ್‌ ವಿಮಾನ ನಿಲ್ದಾಣದಲ್ಲಿ ನಟಿ, ಸಂಸದೆ ಕಂಗನಾ ರಣಾವತ್‌ ಗೆ ಕಪಾಳ ಮೋಕ್ಷ ಮಾಡಿದ್ದ ಮಹಿಳಾ ಭದ್ರತಾ ಸಿಬಂದಿ ಕುಲ್ವಿಂದರ್‌ ಕೌರ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Our Whatsapp Group

ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ರೈತರು 2020ರಲ್ಲಿ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಕಂಗನಾ ರಣಾವತ್‌ , ನೂರು ರೂಪಾಯಿಗಾಗಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಪ್ರತಿಭಟನೆಯಲ್ಲಿ ನನ್ನ ತಾಯಿಯೂ ಭಾಗಿಯಾಗಿದ್ದಳು. ಅದಕ್ಕೆ ಈ ಹೇಳಿಕೆಗೆ ಪ್ರತೀಕಾರವಾಗಿ ಕುಲ್ವಿಂದರ್‌ ಕೌರ್‌ ಕಂಗಾನಾಗೆ ಕಪಾಳಮೋಕ್ಷ ಮಾಡಿರುವುದಾಗಿ ತಿಳಿಸಿದ್ದರು.

ಹಿಮಾಚಲ್‌ ಪ್ರದೇಶದ ಮಾಂಡಿ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದ ಕಂಗನಾ ರಣಾವತ್‌ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು.

ವಿಮಾನ ನಿಲ್ದಾಣದಲ್ಲಿ ಭದ್ರತಾ ಪರಿಶೀಲನೆ ವೇಳೆ ದಿಢೀರನೆ ಆಗಮಿಸಿದ ಮಹಿಳಾ ಭದ್ರತಾ ಅಧಿಕಾರಿ, ಕಪಾಳಮೋಕ್ಷ ಮಾಡಿದ್ದಳು. ನಾನು ಯಾಕೆಂದು ಪ್ರಶ್ನಿಸಿದಾಗ, ನಾನು ರೈತರ ಹೋರಾಟವನ್ನು ಬೆಂಬಲಿಸುತ್ತೇನೆ ಎಂದಿದ್ದಳು. ನಾನು ಸುರಕ್ಷಿತವಾಗಿದ್ದೇನೆ, ಆದರೆ ಪಂಜಾಬ್‌ ನಲ್ಲಿ ಉಗ್ರವಾದ ಹೆಚ್ಚಳವಾಗುತ್ತಿರುವ ಬಗ್ಗೆ ಕಳವಳವಾಗುತ್ತಿದೆ ಎಂದು ಕಂಗನಾ ಎಕ್ಸ್‌ ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹರ್ಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ತಿಳಿಸಿದ್ದಾರೆ.