ಮನೆ ಮನೆ ಮದ್ದು ಉನ್ಮಾದ

ಉನ್ಮಾದ

0

1. ತಿವ್ರ ಉನ್ಮಾದವಿದ್ದರೆ ತಲೆಯನ್ನು ತಣ್ಣೀರಿನಿಂದ ಹೊಡೆಯಬೇಕು ಬಿಸಿನೀರಿನ ಸ್ಥಾನ ಮಾಡಿಸಬೇಕು. ತಲೆಯ ಮೇಲೆ ಒಂದು ಭಾಗದಿಂದ ತೆಗೆಯುವುದರಿಂದ ಉದ್ವೇಗವು ಕಡಿಮೆಯಾಗುವುದು.

Join Our Whatsapp Group

2. ತೊಗರಿ ಕಾಳಿನಷ್ಟು ಇಂಗನ್ನು ಬೆಲ್ಲದಲ್ಲಿ ಹುದುಗಿಸಿ ನುಂಗಿಸುವುದರಿಂದ ಕಡಿಮೆಯಾಗುವುದು.

3. ಒಂದೆಲಗದ ರಸ ಒಂದು ಔನ್ಸ್ ನಷ್ಟು ಕುಡಿಸುತ್ತಾ ಬಂದರೆ ಗುಣವಾಗುವುದು. 

ಉದರ  ರೋಗಗಳು:-

1. ಪುನರ್ನವಾ ಬೇರನ್ನು ಹಾಲಿನಲ್ಲಿ ಅರೆದು ಸಕ್ಕರೆ ಬೆರೆಸಿ ಸೇವಿಸಲು ಎಲ್ಲಾ ವಿಧವಾದ ಉದರ ರೋಗಗಳು ಮಾಣುವುದು.

2. ಪಟಿಕ ಅರಳು ಮಾಡಿ ತುಪ್ಪದಲ್ಲಿ ಕೊಟ್ಟರೆ ಉಷ್ಣದ ಹೊಟ್ಟೆನೋವು ನಿವಾರಣೆ ಯಾಗುವುದು.

3. ಕುಬೇರಾಕ್ಷ ಚೂರ್ಣವನ್ನು ತುಪ್ಪದಲ್ಲಿ ಸೇವಿಸಲು ಜಠರದ ಎಲ್ಲಾ ವಿಧವಾದ ದೋಷಗಳೂ ನಿವಾರಣೆ ಆಗುವುದು.

4. ಭಾಸ್ಕರ ಲವಣ, ಹಿಂಗೃಷ್ಟಕ ಚೂರ್ಣವನ್ನು ಒಂದು ಚಮಚ ತುಪ್ಪದಲ್ಲಿ ಕಲಸಿ ನೆಕ್ಕುವುದರಿಂದ ಗುಣವಾಗುವುದು.

5. ಎಕ್ಕದ ಕಾಯಿ,ಎಳೆಯದನ್ನು ತೆಗೆದುಕೊಂಡು ಅದರ ಒಳಗಿನ ತಿರುಳನ್ನು ಬಾಳೆಹಣ್ಣಿನಲ್ಲಿಟ್ಟು ನುಂಗಿಸಲು ಸ್ತ್ರೀಯರ ಎಲ್ಲಾ ವಿಧವಾದ ಹೊಟ್ಟೆ ನೋವುಗಳು ಹಾರವಾಗುವುದು.

6. ಸುದರ್ಶಕ ಚೂರ್ಣವನ್ನಾದರೂ ಅಥವಾ ಶಂಖದ್ರಾವಕವನ್ನಾದರೂ ವೈದ್ಯರ ಸಲಹೆಯಂತೆ ಸೇವಿಸಲು ಜಠರದ ಉಣ್ಣು ಗುಣವಾಗುವುದು.