ಮನೆ ಕ್ರೀಡೆ T20 World Cup 2024: ಪಾಕ್ ವಿರುದ್ಧ ಭಾರತದ ಪ್ಲೇಯಿಂಗ್ XI ಹೀಗಿರಲಿದೆ

T20 World Cup 2024: ಪಾಕ್ ವಿರುದ್ಧ ಭಾರತದ ಪ್ಲೇಯಿಂಗ್ XI ಹೀಗಿರಲಿದೆ

0

ಟಿ20 ವಿಶ್ವಕಪ್ ​ನ ಹೈವೊಲ್ಟೇಜ್ ಕದನಕ್ಕಾಗಿ ವೇದಿಕೆ ಸಜ್ಜಾಗಿದೆ. ಭಾನುವಾರ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ನ 19ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ.

Join Our Whatsapp Group

ಅದರಲ್ಲೂ ಈ ಬಾರಿ ಕೂಡ ಭಾರತ ತಂಡ ನಾಲ್ವರು ಆಲ್​ರೌಂಡರ್​ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಏಕೆಂದರೆ ಇದೇ ಮೈದಾನದಲ್ಲಿ ಆಡಲಾದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಕಣಕ್ಕಿಳಿದಿದ್ದರು. ಇದೇ ಸಂಯೋಜನೆಯೊಂದಿಗೆ ಭಾರತ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ.

7 ಬೌಲರ್​ಗಳು:

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ನಾಲ್ವರು ಆಲ್​ರೌಂಡರ್​ಗಳಿರುವುದರಿಂದ ನಾಯಕ ರೋಹಿತ್ ಶರ್ಮಾಗೆ 7 ಬೌಲರ್​ಗಳ ಆಯ್ಕೆ ಲಭಿಸಲಿದೆ. ಅಂದರೆ ವೇಗಿಗಳಾಗಿ ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಕಣಕ್ಕಿಳಿಯುವುದು ಖಚಿತ.

ಟೀಮ್ ಇಂಡಿಯಾದಲ್ಲಿ ಹೆಚ್ಚುವರಿ ವೇಗಿಗಳಾಗಿ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆಯನ್ನು ಬಳಸಿಕೊಳ್ಳಬಹುದು. ಹಾಗೆಯೇ ಸ್ಪಿನ್ನರ್​ಗಳಾಗಿ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್​ ಆಯ್ಕೆಗಳಿವೆ. ಹೀಗಾಗಿ ಟೀಮ್ ಇಂಡಿಯಾ 7 ಬೌಲರ್​ಗಳೊಂದಿಗೆ ರಣತಂತ್ರ ರೂಪಿಸಬಹುದು.

ಆರಂಭಿಕರು ಯಾರು?

ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಿದ್ದರು.  ಹೀಗಾಗಿ ಪಾಕ್ ವಿರುದ್ಧ ಪಂದ್ಯದಲ್ಲೂ ಇದೇ ಜೋಡಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಆಡುವುದು ಖಚಿತ.

ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸಿದರೆ, ಐದನೇ ಕ್ರಮಾಂಕದಲ್ಲಿ ಶಿವಂ ದುಬೆ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಹಾರ್ದಿಕ್ ಪಾಂಡ್ಯ ಆರನೇ ಕ್ರಮಾಂಕದಲ್ಲಿ ಆಡಿದರೆ, ಫಿನಿಶರ್ ಪಾತ್ರಗಳಲ್ಲಿ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ.

ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ…

ರೋಹಿತ್ ಶರ್ಮಾ

ವಿರಾಟ್ ಕೊಹ್ಲಿ

ರಿಷಭ್ ಪಂತ್ (ವಿಕೆಟ್ ಕೀಪರ್)

ಸೂರ್ಯಕುಮಾರ್ ಯಾದವ್

ಶಿವಂ ದುಬೆ

ಹಾರ್ದಿಕ್ ಪಾಂಡ್ಯ

ರವೀಂದ್ರ ಜಡೇಜಾ

ಅಕ್ಷರ್ ಪಟೇಲ್

ಜಸ್​ಪ್ರೀತ್ ಬುಮ್ರಾ

ಮೊಹಮ್ಮದ್ ಸಿರಾಜ್

ಅರ್ಷದೀಪ್ ಸಿಂಗ್

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ.

ಮೀಸಲು ಆಟಗಾರರು: ಶುಭ್​ಮನ್ ಗಿಲ್, ಅವೇಶ್ ಖಾನ್, ರಿಂಕು ಸಿಂಗ್, ಖಲೀಲ್ ಅಹ್ಮದ್.