ಮನೆ ಅಪರಾಧ ಹುಣಸೂರು: ಸ್ನೇಹಿತರ ಜೊತೆಗೂಡಿ ದೊಡ್ಡಪ್ಪನ ಮನೆಯಲ್ಲಿ ಕಳ್ಳತನ- ಇಬ್ಬರ ಬಂಧನ

ಹುಣಸೂರು: ಸ್ನೇಹಿತರ ಜೊತೆಗೂಡಿ ದೊಡ್ಡಪ್ಪನ ಮನೆಯಲ್ಲಿ ಕಳ್ಳತನ- ಇಬ್ಬರ ಬಂಧನ

0

ಹುಣಸೂರು: ದೊಡ್ಡಪ್ಪನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸ್ನೇಹಿತರೊಡಗೂಡಿ 3 ಲಕ್ಷ ನಗದು, 35 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದವನ ಹೆಡೆ ಮುರಿ ಕಟ್ಟಿ, 1.27 ಲಕ್ಷ ನಗದು ಹಾಗೂ 1.40ಲಕ್ಷರೂ ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಬಿಳಿಕೆರೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Join Our Whatsapp Group

ತಾಲೂಕಿನ ಉದ್ದೂರು ಗ್ರಾಮದ ಶಿವಣ್ಣೇಗೌಡರ ಪುತ್ರ ಮಂಜುನಾಥ, ಈತನ ಸ್ನೇಹಿತರಾದ ಸೂರ್ಯ ಅಲಿಯಾಸ್ ಸೂರಿ ಬಂಧಿತರು. ಇದೇ ಗ್ರಾಮದ ಅಜಯ್ ತಲೆ ಮರೆಸಿಕೊಂಡಿದ್ದಾನೆ.

ತಾಲೂಕಿನ ಧರ್ಮಾಪುರ ಗ್ರಾಮದ ರಾಮೇಗೌಡರ ಮನೆಯಲ್ಲಿ ಜೂ.೭ರಂದು ಹಾಡು ಹಗಲೇ ನಡೆದಿದ್ದ ನಗದು ಮತ್ತು ಚಿನ್ನಾಭರಣ ಕಳ್ಳತನವಾಗಿತ್ತು. ಶಿವಣ್ಣೇಗೌಡರ ಪುತ್ರ ಮಂಜುನಾಥ್ ಧರ್ಮಪುರದ ಅಜ್ಜಿ ಮನೆಗೆ ಬಂದಿದ್ದ, ದೊಡ್ಡಪ್ಪ ರಾಮೇಗೌಡರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಮಂಜುನಾಥ ಸ್ನೇಹಿತರಾದ ಸೂರಿ, ಅಜಯ್‌ನನ್ನು ಕರೆಸಿಕೊಂಡು ಅಜ್ಜಿಯ ಮನೆಗೆ ಹೊಂದಿಕೊಂಡಿದ್ದ ಗೋಡೆ ಹತ್ತಿ, ದೊಡ್ಡಪ್ಪನ ಮನೆಯ ಬೀರುವಿನಲ್ಲಿಟ್ಟಿದ್ದ ೩ಲಕ್ಷ ನಗದು ಹಾಗೂ ಸುಮಾರು 35 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ, ಈ ಸಂಬಂಧ ಬಿಳಿಕೆರೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ. ಸೀಮಾ ಲಾಟ್ಕರ್ ಸೂಚನೆಯಂತೆ ಅಡಿಷನಲ್ ಎಸ್.ಪಿ.ಗಳಾದ ನಂದಿನಿ ಹಾಗೂ ನಾಗೇಶ್, ಡಿ.ವೈ.ಎಸ್.ಪಿ ಗೋಪಾಲಕೃಷ್ಣರ ಮಾರ್ಗದರ್ಶನದಲ್ಲಿ ಬಿಳಿಕೆರೆ ಠಾಣೆ ಇನ್ಸ್ಪೆಕ್ಟರ್ ಟಿ.ಎಸ್.ಲೋಲಾಕ್ಷಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ತಂಡ ರಚಿಸಲಾಗಿತ್ತು.

ಮಂಜುನಾಥ ಉದ್ದೂರಿನ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ ಸ್ನೇಹಿತರಾದ ಸೂರಿ ಮತ್ತು ಅಜಯ್ ರೊಡಗೂಡಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ, ಕೃತ್ಯಕ್ಕೆ ಬಳಸಿದ್ದ ಮಹಿಂದ್ರಾ ಜೀಪ್, 1.27ಲಕ್ಷ ನಗದು, 1.40 ಲಕ್ಷ ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಜಯ್ ತಲೆ ಮರೆಸಿಕೊಂಡಿದ್ದು ಪತ್ತೆಗೆ ಕ್ರಮವಹಿಸಲಾಗಿದೆ. ಎಂದು ಬಿಳಿಕೆರೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ .ಎಸ್.ಲೋಲಾಕ್ಷಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎಸ್.ಐ.ನಾಗೇಶ್.ಎನ್, ಸಿಬ್ಬಂದಿಗಳಾದ ಪ್ರಸಾದ್‌ಧರ್ಮಾಪುರ, ಪ್ರತಾಪ್, ಶಿವಕುಮಾರ ಹಾಗೂ ಚಾಲಕ ಗೋವಿಂದರಾಜು ಬಾಗವಹಿಸಿದ್ದರು.