ಮನೆ ರಾಜ್ಯ ಪಿಎಂ ಕಿಸಾನ್ ಯೋಜನೆ: 17ನೇ ಕಂತಿನ ಹಣ ಬಿಡುಗಡೆ

ಪಿಎಂ ಕಿಸಾನ್ ಯೋಜನೆ: 17ನೇ ಕಂತಿನ ಹಣ ಬಿಡುಗಡೆ

0

ನವದೆಹಲಿ: ರೈತರಿಗೆ ವ್ಯವಸಾಯಕ್ಕೆ ಧನಸಹಾಯವಾಗುವ ಪಿಎಂ ಕಿಸಾನ್ ಯೋಜನೆಯಲ್ಲಿ 17ನೇ ಕಂತಿನ ಹಣ ಬಿಡುಗಡೆ ಆಗಿದೆ.

Join Our Whatsapp Group

 ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಕೈಗೊಂಡ ಮೊದಲ ಕ್ರಮ ಇದು ಎಂಬುದು ವಿಶೇಷ. ಇಂದು ಪ್ರಧಾನಿಗಳು ಪಿಎಂ ಕಿಸಾನ್ ನಿಧಿಯ ಹಣ ವಿಲೇವಾರಿ ಕಡತಕ್ಕೆ ಸಹಿಹಾಕಿದ್ದಾರೆ.

 ಇದರೊಂದಿಗೆ 9.3 ಕೋಟಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ 17ನೇ ಕಂತಿನ ಹಣವಾದ 2,000 ಕೋಟಿ ರೂ ಜಮೆಯಾಗಲಿದೆ. ಸರ್ಕಾರ ಒಟ್ಟು 20,000 ಕೋಟಿ ರೂ ಹಣವನ್ನು ಬಿಡುಗಡೆ ಮಾಡಿದೆ.

ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯಾ ಎಂದು ಖಾತ್ರಿಪಡಿಸಿಕೊಳ್ಳಿ. ಕೆಲವೊಮ್ಮೆ ಖಾತೆಗೆ ಹಣ ಜಮೆ ಆಗಲು ಒಂದು ವಾರದವರೆಗೂ ಸಮಯ ಆಗಬಹುದು. ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನೀವಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಕ್ರಮ ಅನುಸರಿಸಿ:

ಪಿಎಂ ಕಿಸಾನ್ ಯೋಜನೆಯ ವೆಬ್ ​ಸೈಟ್​ ಗೆ ಹೋಗಿ: pmkisan.gov.in/

ಇಲ್ಲಿ ಕೆಳಗೆ ತುಸು ಸ್ಕ್ರಾಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣಬಹುದು. ಅದರಲ್ಲಿ ಬೆನಿಫಿಶಿಯರಿ ಲಿಸ್ಟ್ ಅನ್ನು ಕ್ಲಿಕ್ ಮಾಡಿ

ಇದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಊರನ್ನು ಆಯ್ದುಕೊಳ್ಳಿ.

ನಿಮ್ಮ ಊರಿನಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ. ಇದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.

ಹಣ ಬಂದಿಲ್ಲದಿದ್ದರೆ ಅಥವಾ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಹೇಗೆ?

ಒಂದು ವೇಳೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೆ ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಒಂದು, ನೀವು ಇಕೆವೈಸಿ ಪೂರ್ಣಗೊಳಿಸದೇ ಇರಬಹುದು, ಅಥವಾ ಮಾಡಿಲ್ಲದೇ ಇರಬಹುದು. ಇನ್ನೊಂದು, ನೀವು ಈ ಯೋಜನೆಯ ಫಲಾನುಭವಿಯಾಗಲು ಇರುವ ಅರ್ಹತೆಯ ಅಂಶಗಳು ನಿಮಗೆ ಅನ್ವಯ ಆಗದೇ ಇರಬಹುದು.

ಪಿಎಂ ಕಿಸಾನ್ ಫಲಾನುಭವಿಗಳೆಲ್ಲರೂ ಇಕೆವೈಸಿ ಮಾಡುವುದು ಕಡ್ಡಾಯ. ಕಳೆದ ಒಂದು ವರ್ಷದಲ್ಲಿ ನೀವು ಒಮ್ಮೆ ಇಕೆವೈಸಿ ಮಾಡಿಸಿದ್ದರೆ ಸಾಕು. ಇನ್ನೂ ನೀವು ಕೆವೈಸಿ ಅಪ್​ಡೇಟ್ ಮಾಡದೇ ಹೋಗಿದ್ದರೆ ಕೂಡಲೇ ಮಾಡಿರಿ. ಪಿಎಂ ಕಿಸಾನ್ ವೆಬ್ ​ಸೈಟ್ ​ಗೆ ಹೋಗಿ ಅಲ್ಲಿಂದಲೇ ಇಕೆವೈಸಿ ಅಪ್​ಡೇಟ್ ಮಾಡಬಹುದು. ಇದಕ್ಕೆ ನಿಮ್ಮ ಆಧಾರ್ ಕಾರ್ಡ್ ಇದ್ದರೆ ಸಾಕು. ಈ ಆಧಾರ್ ​ಗೆ ಮೊಬೈಲ್ ನಂಬರ್ ಜೋಡಿತವಾಗಿರಬೇಕು. ಒಟಿಪಿ ಮೂಲಕ ಇಕೆವೈಸಿ ಅಪ್​ ಡೇಟ್ ಮಾಡಬಹುದು.

ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅಲ್ಲಿಂದಲೂ ನೀವು ಇಕೆವೈಸಿ ಅಪ್​ಡೇಟ್ ಮಾಡಲು ಸಾಧ್ಯ.