ಮನೆ ಯೋಗಾಸನ ಬದ್ಧ ಕೋನಾಸನ

ಬದ್ಧ ಕೋನಾಸನ

0

 ‘ಬದ್ಧ’ವೆಂದರೆ ಕಟ್ಟಲ್ಪಟ್ಟ ತಡೆಯನ್ನು ಹೊಂದಿದ ಎಂದರ್ಥ. ‘ಕೋನ’ವೆಂದರೆ ಮೂಲೆ. ಈ ಭಂಗಿಯಲ್ಲಿ. ನೆಲದ ಮೇಲೆ ಕುಳಿತು, ಹಿಮ್ಮಡಿಗಳನ್ನು ಗುದ್ಧಗುಹ್ಯಸ್ಥಾನಗಳ ನಡುತಾಣಕ್ಕೆ (Perineum)ಆಳವಡಿಸಿ, ಪಾದಗಳನ್ನು ಹಿಡಿದು, ಮಂಡಿಯ ಭಾಗಗಳು ಎರಡು ಕಡೆಗಳಲ್ಲಿಯೂ ನೆಲಮುಟ್ಟುವವರೆಗೂ ತೊಡೆಗಳನ್ನಾಗಲಿಸಬೇಕಾಗಿದೆ. ಭಾರತದಲ್ಲಿ ಮೋಚಿಗಳು (Cobblers)ಕುಳಿತುಕೊಳ್ಳುವ ಬಗೆ ಹೀಗೆಯೇ.

Join Our Whatsapp Group

ಅಭ್ಯಾಸ ಕ್ರಮ –

1. ಮೊದಲು ನೆಲದ ಮೇಲೆ ಕುಳಿತು,ಕಾಲುಗಳನ್ನು ಮುಂಭಾಗಕ್ಕೆ ನೀಳವಾಗಿ ಚಾಚಬೇಕು.

2. ಬಳಿಕ ಮಂಡಿಗಳನ್ನು ಮಂಡಿಸಿ ಪಾದಗಳನ್ನು ಮುಂಡಭಾಗದ ಬಳಿಗೆ ಸೇರಿಸಬೇಕು.

3. ಈಗ ಅಂಗಾಲುಗಳನ್ನೂ ಮತ್ತು ಹಿಮ್ಮಡಿಗಳನ್ನೂ ಜೊತೆಗೂಡಿಸಿ,ಪಾದಗಳನ್ನು ಕಾಲ್ಬೆರಳಗಳ ಬಳಿ ಕೈಗಳಿಂದ ಹಿಡಿದು, ಹಿಮ್ಮಡಿಗಳನ್ನು ಗುದ್ದಗುಹ್ಯಗಳ ಮಧ್ಯಭಾಗಕ್ಕೆ (Perineum)ತಂದಿಡಬೇಕು. ಪಾದಗಳೆರಡರ ಹೊರಬದಿಗಳು ನೆಲದಮೇಲೆ ಒರಗು ವಂತೆಯೂ, ಹಿಮ್ಮಡಿಗಳ ಹಿಂಬದಿ ಗುದಗುಹ್ಯಸ್ಥಾನಗಳ ನಡು ತಾಣವನ್ನು ಮುಟ್ಟುವಂತೆಯೂ ಅಳವಡಿಸಬೇಕು.

4. ಆಮೇಲೆ ತೊಡೆಗಳನ್ನಗಲಿಸಿ, ಮಂಡಿಗಳನ್ನು ತಗ್ಗಿಸುತ್ತ, ಅವನ್ನು ನೆಲಕ್ಕೊಸಿರಗಿಡಸ ಬೇಕು.

5. ಬಳಿಕ ಕೈ ಬೆರಳುಗಳನ್ನು ಒಂದರಲ್ಲೊಂದು ಒಮ ಹೆಣೆದು ಪಾದಗಳನ್ನು ಬಿಗಿಯಾಗಿ ಹಿಡಿದು ಬೆನ್ನೆಲುಬನ್ನು ಹಿಗ್ಗಿಸಿ, ದೃಷ್ಟಿಯನ್ನು ಮೇಲ್ದಿಕ್ಕಿಗೋ, ಇಲ್ಲವೇ ಮೂಗಿನ ತುದಿಗೋ ನೆಡಬೇಕು  ಈ ಭಂಗಿಯಲ್ಲಿ ಸಾಧ್ಯವಾದಷ್ಟು ಕಾಲ ನಿಲ್ಲಸಬೇಕು.

6. ಅನಂತರ ಮೊಣಕೈಗಳನ್ನು ತೊಡೆಗಳ ಮೇಲಿರಿಸಿ ಅವುಗಳನ್ನು ಕೆಳಕ್ಕೆ ಒತ್ತಬೇಕು. ಈಗ ಉಸಿರನ್ನು ಹೊರಕ್ಕೆ ಬಿಟ್ಟು ಮುಂಬಾಗಿ, ಮೊದಲು ತಲೆ ಬಳಿಕ ಮೂಗು ಕಡೆಯಲ್ಲಿ ಗದ್ದ ಇವನ್ನು ಕ್ರಮವಾಗಿ ನೆಲದಮೇಲೆ ಇರಿಸಬೇಕು ಈ ಭಂಗಿಯಲ್ಲಿ ಸುಮಾರು ಅರ್ಧದಿಂದ ಒಂದು ನಿಮಿಷದವರೆಗೂ ಸಾಮಾನ್ಯ ಉಸಿರಾಟದಿಂದ ನೆಲೆಸಬೇಕು.

7. ಮತ್ತೆ ಉಸಿರನ್ನು ಒಳಕ್ಕೆಳೆದು,ಮುಂಡಗವನ್ನು ನೆಲದಿಂದ ಮೇಲೆತ್ತಿ ಮತ್ತೆ ಐದನೇ ಭಂಗಿಯ ಸ್ಥಿತಿಗೆ ಬರಬೇಕು.

8. ಆ ಬಳಿಕ ಪಾದಗಳನ್ನು ಸಡಿಲಿಸಿ, ಪಾದವನ್ನು ನೀಳವಾಗಿಸಿ ವಿಶ್ರಮಿಸಿಕೊಳ್ಳಬೇಕು.

ಪರಿಣಾಮಗಳು:-  

ಈ ಆಸನದ ಬಗ್ಗೆಯು ಮೂತ್ರ ವಿಸರ್ಜನೆಯಲ್ಲಿ ತೊಂದರೆಗಳನ್ನು ಅನುಭವಿಸುವವರಿಗೆ ಅತ್ಯುತ್ತಮ ಫಲಕಾರಿ. ವಸ್ತಿಕುಹರ, ಕ್ಕಿಬ್ಬೊಟ್ಟೆ ಮತ್ತು ಬೆನ್ನಿನ ಭಾಗಗಳಲ್ಲಿ ಸಾಕಷ್ಟು ರಕ್ತ ಪರಿಚಲನೆಯಾಗಿ ಅದರಿಂದ ಅವೆಲ್ಲವೂ ಹುರುಪುಗೊಂಡು ಶಕ್ತಿಯನ್ನು ಗಳಿಸುತ್ತವೆ. ಅಲ್ಲದೆ ಈ ಆಸನವು ಮೂತ್ರಪಿಂಡಗಳು, ಮೂತ್ರಕೋಶ ಮತ್ತು ಜನೇಂದ್ರಿಯದ ಸುತ್ತಲಿರುವ ಗ್ರಂಥಿಗಳನ್ನು ಆರೋಗ್ಯ ಸ್ಥಿತಿಯಲ್ಲಿಡುತ್ತದೆ.ಭಾರತ ದೇಶದಲ್ಲಿಯ ಮೋಚಿಗಳು(Cobblers) ತಮ್ಮ ವೃತ್ತಿಯಲ್ಲಿ ತೊಡಗಿದ್ದಾಗ,ಇದನ್ನೇ ಹೋಲುವ ಆಸನದ ಭಂಗಿಯಲ್ಲಿ ನೆಲೆಸಿರುವುದರಿಂದ ಅಂಥವರಿಗೆ ಮೂತ್ರಪಥ ಮತ್ತು ಮೂತ್ರ ದ್ವಾರಗಳಲ್ಲಿ ರೋಗಬರುವುದು ಅತಿ ವಿರಳ.  ಇದರ ಜೊತೆಗೆ ಈ ಆಸನಾ ಭ್ಯಾಸವು ಸೊಂಟನೋವು ಮತ್ತು ಅಂಡವಾಯು (Hernia)ಇವುಗಳ ಬಾಧೆಯನ್ನು ಕಳೆಯುತ್ತದೆ. ಈ ಆಸನವನ್ನು ಬಿಡದೇ ಕ್ರಮವಾಗಿ ಅಭ್ಯಾಸಮಾಡಿದರೆ  ವೃಷಣಗಳಲ್ಲಿಯ (Testicles)ನೋವು ಮತ್ತು ಅವುಗಳಲ್ಲಿ ಭಾರ ತೋರುವುದು ಇವೆಲ್ಲವೂ ಕಣ್ಮರೆಯಾಗುತ್ತವೆ.

  ಈ ಆಸನದ ಭಂಗಿ ಸ್ತ್ರೀವರ್ಗಕ್ಕೆ ಒಂದು ವರಪ್ರಸಾದವೆಂದೇ ಹೇಳಬೇಕು ಸರ್ವಾಂಗಸನ ಮತ್ತು ಅದರ ಪರ್ವತಕಗಳಾದ ಅಂದರೆ ಆಸನಗಳನ್ನೂ ಜೊತೆಸೇರಿಸಿ ಈ ಆಸನಾಭ್ಯಾಸವನ್ನು ಮಾಡಿದ್ದೇ ಆದರೆ ಸ್ತ್ರೀಯರಿಗೆ ತಲೆದೋರುವ ಅಕ್ರಮ ರಾಜೋದರ್ಶನಗಳನ್ನು ಸರಿಪಡಿಸಿ ಅಂಡಾಶಯಗಳ(Ovaries) ಕಾರ್ಯಗಳು ಸರಿಯಾಗಿ ನಡೆಯುವೆಂತೆ ಮಾಡುತ್ತವೆ.ಗರ್ಭಿಣಿಸ್ತ್ರೀಯರು ಪ್ರತಿದಿನವೂ ಈ ಭಂಗಿಯಲ್ಲಿ ಕೆಲವು ನಿಮಿಷಗಳು ಕುಳಿತುಕೊಳ್ಳುವ ಅಭ್ಯಾಸ ನಡೆಸಿದ್ದರಿಂದ ಪ್ರಸವವೇದನೆಯು ಬಹುಮಟ್ಟಿಗೆ ತಗ್ಗಿ ಸುಖಪ್ರಸವವಾಗಿರುವ ಪ್ರಸಂಗಗಳು ಕಂಡುಬಂದಿವೆ.ಅಲ್ಲದೆ, ಅಪಧಮನಿಯ ರಕ್ತನಾಳದ ಊತರೋಗವು (Varicose veins)ಅವರಿಗೆ ತಲೆ ದೋರದಂತೆ ಈ ಆಸನವು ನೆರವಾಗುತ್ತದೆ. (ಗರ್ಭಿಣಿ ಸ್ತ್ರೀಯರಿಗಾಗಿ, ಡಾಕ್ಟರ್ ಗ್ರಾಂಟ್ಲಿ ಡಿಕ್  ರೀಡ್ ಎಂಬ ವಿದ್ವಾಂಸನು ರಚಿಸಿದ “ನಿರಾತಂಕಪ್ರಸವ Childbirth without Fear ಎಂಬ ಗ್ರಂಥದಲ್ಲಿ ಈ ಆಸನಾಭ್ಯಾಸದ ಅವಶ್ಯಕತೆಯನ್ನು ಒತ್ತಿಹೇಳಿದ್ದಾರೆ.

ಪದ್ಮಾಸನ ಮತ್ತು ವೀರಾಸನಗಳ ಜೊತೆ ಈ ಆಸನವನ್ನು ಪ್ರಾಣಾಯಾಮಭ್ಯಾಸಕ್ಕೂ ಮತ್ತು ಧಾನ್ಯಕ್ರಮಕ್ಕೂ ತಕ್ಕದೆಂದು ಸಲಹೆ ಮಾಡಿದೆ.ಈ ಭಂಗಿಯಲ್ಲಿ ಕುಳಿತಾಗ ಅಂಗೈಗಳನ್ನು ಜೋಡಿಸಿ, ಎದೆಯ ಮುಗಡೆಯಿಟ್ಟು, ಬೆನ್ನನ್ನು ನೇರ ಮಾಡಿ ಕುಳಿತುಕೊಳ್ಳಬೇಕು. ಹೀಗೆ ಮಾಡುವುದು ಅಭ್ಯಾಸದಿಂದ ಕೈವಶವಾಗುತ್ತದೆ. ಈ ಆಸನವನ್ನು ಊಟ ಮಾಡಿದ ಮೇಲೆ ಕೂಡ ನಿರ್ಭಯವಾಗಿ ಆಚರಿಸಬಹುದು. ಆದರೆ ತಲೆಯನ್ನು ನೆಲದಮೇಲೆ ಊರಿಡಬಾರದು.