ಮನೆ ಅಪರಾಧ ಶಿವಮೊಗ್ಗ: ಚಿಕಿತ್ಸೆ ಫಲಿಸದೆ ಆರೋಗ್ಯ ಇಲಾಖೆ ಸಿಬ್ಬಂದಿ ಸಾವು- ಡೆಂಗ್ಯೂ ಶಂಕೆ

ಶಿವಮೊಗ್ಗ: ಚಿಕಿತ್ಸೆ ಫಲಿಸದೆ ಆರೋಗ್ಯ ಇಲಾಖೆ ಸಿಬ್ಬಂದಿ ಸಾವು- ಡೆಂಗ್ಯೂ ಶಂಕೆ

0

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಿಬ್ಬಂದಿಯಾಗಿದ್ದ ನಾಗರಾಜ್(35) ಎಂಬುವವರು ಡೆಂಗ್ಯೂನಿಂದ ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

Join Our Whatsapp Group

ಮೃತ ನಾಗರಾಜ್ ಅವರು ಕಳೆದ ಕೆಲ ದಿನಗಳಿಂದ ಡೆಂಗ್ಯೂನಿಂದ ಬಳಲುತ್ತಿದ್ದರು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ಆರೋಗ್ಯ ಇಲಾಖೆ ಸಿಬ್ಬಂದಿ ನಾಗರಾಜ್ ಮೃತಪಟ್ಟಿದ್ದಾರೆ.

ಜೊತೆಗೆ ನಾಗರಾಜ್​ಗೆ ಶುಗರ್ ಕೂಡ ಇತ್ತು. ಹೀಗಾಗಿ ಈ ಸಾವು ಡೆಂಗ್ಯೂನಿಂದಲೇ ಸಂಭವಿಸಿದೆಯೇ ಎಂದು ನಿಖರವಾಗಿ ತಿಳಿದುಬಂದಿಲ್ಲ. ಶುಗರ್ ನಿಂದಲೂ ಬಳಲುತ್ತಿದ್ದ ನಾಗರಾಜ್​ಗೆ ಪ್ಲೇಟ್ ಲೆಟ್ 26,000 ಕುಸಿದಿತ್ತು.

ಸಾಗರ ತಾಲೂಕಿನ ತಾಳಗುಪ್ಪ ನಿವಾಸಿ ನಾಗರಾಜ್, ಸಾಗರದ ಸರಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹೊರಗುತ್ತಿಗೆ ಡಿ ದರ್ಜೆ ನೌಕರನಾಗಿದ್ದರು. ಇತ್ತೀಚೆಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡ ಹಿನ್ನೆಲೆ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಾಗರಾಜ್ ಅವರಿಗೆ ಸಕ್ಕರೆ ಕಾಯಿಲೆ, ಲೀವರ್ ಸಮಸ್ಯೆ ಕೂಡಾ ಇತ್ತು. ಈ ನಡುವೆ ಕೆಲ ದಿನಗಳಿಂದ ಜ್ವರ ಬಂದಿತ್ತು. ಆತನ ರಕ್ತ ಪರೀಕ್ಷೆಯಲ್ಲಿ ಡೆಂಗ್ಯೂ ಪಾಸಿಟಿವ್ ಬಂದಿದೆ.

ಡೆಂಗ್ಯೂದಿಂದಲೇ ಮೃತಪಟ್ಟಿದ್ದಾನೆಂದು ಖಚಿತವಾಗಿ ಹೇಳಲು ಬರುವುದಿಲ್ಲ. ಮುಂದಿನ ವೈದ್ಯಕೀಯ ಪರೀಕ್ಷೆ ಬಳಿಕ ಯಾವ ಕಾರಣದಿಂದ ಸಾವು ಎಂಬುವುದು ಖಚಿತವಾಗಲಿದೆ. ಇದೊಂದು ಶಂಕಿತ ಡೆಂಗ್ಯೂ ಸಾವಿನ ಪ್ರಕರಣ ಆಗಿದೆ ಎಂದು ಶಿವಮೊಗ್ಗ ಡಿಎಚ್ ಓ ಡಾ.ನಟರಾಜ್ ಮಾಹಿತಿ ನೀಡಿದ್ದಾರೆ.