ಮನೆ ಸ್ಥಳೀಯ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯಿಂದ ಬೇಗೂರು ಗ್ರಾಮದಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭ

ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯಿಂದ ಬೇಗೂರು ಗ್ರಾಮದಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭ

0

ಗುಂಡ್ಲುಪೇಟೆ: ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್. ಎಲ್. ಎಚ್. ಪಿ) ಮೈಸೂರು ಇವರ ವತಿಯಿಂದ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಹದಿಹರೆಯದ ಯುವಕ ಯುವತಿಯರಿಗಾಗಿ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಆರಂಭಿಸಲಾಯಿತು.

Join Our Whatsapp Group

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸರಸ್ವತಿ ಇವರು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯು ಕಳೆದ 40 ವರ್ಷಗಳಿಂದ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗುಂಡ್ಲುಪೇಟೆ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಬಾಲ್ಯ ವಿವಾಹ ನಿಷೇಧಿಸಲು ಹದಿಹರೆಯದ ಹೆಣ್ಣು ಮಕ್ಕಳಿಗೆ ಗುಂಪುಗಳನ್ನು ಮಾಡಿ ಅವರಿಗೆ ಶಿಕ್ಷಣದ ಮನವರಿಕೆ ಮಾಡಿ ಬಾಲ್ಯ ವಿವಾಹ ಆಗದಂತೆ ತಡೆಗಟ್ಟ ಬೇಕೆಂಬುದು ಪ್ರಮುಖ ಉದ್ದೇಶವಾಗಿದೆ.

ಪ್ರಸ್ತುತ ದಿನಮಾನಗಳಲ್ಲಿ ಕಂಪ್ಯೂಟರ್ ಜ್ಞಾನವು ಅತಿ ಅವಶ್ಯಕವಾಗಿದ್ದು ಶಿಕ್ಷಣದೊಂದಿಗೆ ಕಂಪ್ಯೂಟರ್ ಕೌಶಲ್ಯವು ಸಹ ಅತ್ಯವಶ್ಯವಾಗಿದೆ. ನಾವು ಕಾರ್ಯನಿರ್ವಹಿಸುವ ಬಡ ಕುಟುಂಬಗಳಲ್ಲಿ ಕಂಪ್ಯೂಟರ್ ಕಲಿಯಲು ತಿಂಗಳಿಗೆ 2000-3000 ಕಟ್ಟಬೇಕಾಗಿರುತ್ತದೆ. ಆದರೆ ಇದು  ಕಷ್ಟವಾಗುತ್ತದೆ ಮತ್ತು ಪೋಷಕರು ಇದನ್ನು ನಿರಾಕರಿಸುತ್ತಾರೆ. ಆದುದರಿಂದ ಉಚಿತವಾಗಿ ಅದೇ ಹೃದಯದ ಯುಗ ಯುವತಿಯರಿಗೆ ಕಂಪ್ಯೂಟರ್ ತರಬೇತಿ ನೀಡಲು ಇದನ್ನು ಆರಂಭಿಸಲಾಗಿದೆ ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಶ್ರೀ ಗುರುಪ್ರಸಾದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,  ಶ್ರೀ ಅಣ್ಣಯ್ಯ ಗ್ರಾಮ ಪಂಚಾಯಿತಿ, ಗ್ರಾಮದ ಮುಖಂಡರು, ಸಂಸ್ಥೆಯ ಸಂಯೋಜಕರು ಮತ್ತು ಕಂಪ್ಯೂಟರ್ ತರಬೇತಿ ಪಡೆಯುವ ಮಕ್ಕಳು ಉಪಸ್ಥಿತರಿದ್ದರು.