ಈ ದಿವ್ಯ ಶ್ರೀ ಕ್ಷೇತ್ರ ಕೊಲ್ಲೂರ ಅಂಬೆ
ಎಂದೆಂದೂ ಶ್ರೀ ಚರಣ ರಕ್ಷ ನೀಡೆಂದೆ ||
ಜಗದಂಬೆ ಶ್ರೀ ಮಾತೆ ಶ್ರೀ ಲಕ್ಷ್ಮಿ ನೀನೆ ||
ಸದಾನಂದ ಸೌಭಾಗ್ಯ ತರುವಂತ ಮಾನ್ಯ || ಈ ದಿವ್ಯ ||
ಸೌಪರ್ಣಿಕ ನದಿಯ ಶ್ರೀ ತೀರ್ಥದಿಂದ
ನಿತ್ಯ ನಿರ್ಮಲೆ ನಿನ್ನ ಅಭಿಷೇಕ ಚಂದ ||
ಕೊಡಚಾದ್ರಿ ಬುಡ ನಿನ್ನ ಗುಡಿಯಂತೆ ಮಾಯೆ ||
ಅಮೃತಧಾರೆಯ ನೋಟ ನೀ ತೋರೋ ತಾಯಿ|| ಈ ದಿವ್ಯ ||
ಶ್ರೀಕಾಳಿ ಶ್ರೀ ಲಕ್ಷ್ಮಿ ಶ್ರೀ ವಾಣಿ ರೂಪ
ಏಕೈಕ ಶಕ್ತಿಯೇ ನಿನ್ನ ಪ್ರತಿರೂಪ ||
ಮೂಲೋಕ ವಂದಿಸುವ ಮಂಗಳದ ದೀಪ ||
ಕಲ್ಯಾಣಿ ನೀಡೆಯಮಗೆ ಶೌರ್ಯಪ್ರತಾಪ || ಈ ದಿವ್ಯ ||
ನೀ ಧನ್ಯ ನೀ ಮಾನ್ಯ ಕರುಣ್ಯ ಪೂರ್ಣೆ
ನಿನ್ನಿಂದ ರವಿಚಂದ್ರನ್ ಉದಯಸ್ತ ತಾನೆ ||
ನೀ ಮುನಿಯ ಪ್ರಳಯವೆ ಬಳಿ ಬಂದ ಹಾಗೆ ||
ಈ ಜೀವಕೋಟಿಗೆ ತಾಳದಿರು ಬೇಗೆ || ಈ ದಿವ್ಯ ||
ಎಂದೆಂದೂ ಶ್ರೀ ಚರಣ ರಕ್ಷೆ ನೀಡೆಂದೆ || 2 ||