ಕಾರವಾರ: ಪಿಎಸ್ಐ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಭಾಸ್ಕರ್ ಬೋಂಡೆಲ್ಕರ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಅವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಮನಗರ ಪಿಎಸ್ಐ ಬಸವರಾಜ ವಿರುದ್ಧ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು.
ಹಿರಿಯ ಅಧಿಕಾರಿಗಳಿಗೆ ದೂರು ನೀಡಿದಕ್ಕೆ ಭಾಸ್ಕರ್ ಅವರಿಗೆ ಪಿಎಸ್ಐ ಬಸವರಾಜ ನಿರಂತರ ಕಿರುಕಳ ಕೊಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಪಿಎಸ್ಐ ಬಸವರಾಜ ಕಿರುಕಳಕ್ಕೆ ಬೇಸತ್ತು ಭಾಸ್ಕರ್ ರಾಮನಗರ ಬಿಟ್ಟು ಜೋಯಿಡಾದಲ್ಲಿ ಕೆಲಸಕ್ಕೆ ಸೇರಿದ್ದರು.
ಕೆಲ ದಿನಗಳ ಹಿಂದೆ ಜಮೀನು ವಿಚಾರದಲ್ಲಿ ಪೊಲೀಸರು ಭಾಸ್ಕರ ಅವರ ಮಾವ ಗಣಪತಿಗೆ ಅವರಿಗೆ ನೋಟಿಸ್ ಕೊಟ್ಟಿದ್ದರು. ಇದನ್ನು ತಿಳಿದ ಭಾಸ್ಕರ್ ನನಗೆ ಪಿಡುಸುತ್ತಿದ್ದ ಪೊಲೀಸರು ಈಗ ನನ್ನ ಮಾವನಿಗೂ ಪಿಡಿಸುತ್ತುದ್ದಾರೆಂದು ಭಾವಿಸಿ ಜೂನ್ 13 ರಂದು ಮಧ್ಯಪಾನ ಮಾಡಿ ಪೊಲೀಸ್ ಠಾಣೆಗೆ ಹೋಗಿ ನೋಟಿಸ್ ಕೊಟ್ಟಿರುವುದಕ್ಕೆ ಪ್ರಶ್ನಿಸಿದ್ದರು.
ಈ ವೇಳೆ ಪೊಲೀಸರು ಸರಿಯಾಗಿ ಸ್ಪಂದಿಸದೆ ಭಾಸ್ಕರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಬಳಿಕ ಪೊಲೀಸ್ ಠಾಣೆ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಬೆಂಕಿ ಹಂಚಿಕೊಂಡಿದನ್ನ ಕಂಡು ಪೊಲೀಸರು ಕೂಡಲೆ ಬೆಂಕಿ ನಂದಿಸಿದರು. ಅರ್ಧ ದೇಹ ಸುಟ್ಟು, ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಫಲಕಾರಿಯಾಗದೆ ಇಂದು (ಜೂ.15) ಆಸ್ಪತ್ರೆಯಲ್ಲೇ ಭಾಸ್ಕರ ಮೃತಪಟ್ಟಿದ್ದಾರೆ. ಭಾಸ್ಕರ ಸಾವು ಖಂಡಿಸಿ ಕುಣಬಿ ಸಮಾಜ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.