ಮನೆ ಆರೋಗ್ಯ ಪಾರ್ಶ್ವ ವಾಯು: ಭಾಗ ಒಂದು

ಪಾರ್ಶ್ವ ವಾಯು: ಭಾಗ ಒಂದು

0

ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನಡೆದುಹೋಗುತ್ತದೆ. ಕ್ಷಣಕಾಲದಲ್ಲಿ ನಿಮ್ಮ ಜೀವನವೇ ಬದಲಾಗಿ ಬಿಡುತ್ತದೆ.

Join Our Whatsapp Group

ನೀವು ಮಾತನಾಡುವ ಶಕ್ತಿಯನ್ನು ಕಳೆದುಕೊಳ್ಳಬಹುದು.ಆಲೋಚಿಸಬಲ್ಲ ಶಕ್ತಿಯನ್ನು ಕಳೆದುಕೊಳ್ಳಬಹುದು.ಕಲೋ, ಕೈಯೋ ನಿಷ್ಕ್ರೀಯವಾಗಿ ಹೋಗಬಹುದು… ಪಾರ್ಶ್ವವಾಯು ಎಂದರೇ ಇದೇ.!!

  ಪಾರ್ಶ್ವ ವಾಯುವನ್ನು ವೈದ್ಯಕೀಯ ಪರೀಕ್ಷೆಯಲ್ಲ  ಎಂದೂ ಕರೆಯುತ್ತಾರೆ.

ಅಮೇರಿಕಾದಲ್ಲಿ ಮನುಷ್ಯರನ್ನು ಸಾವಿನ ಸಮೀಪಕ್ಕೆ ಕೊಂಡೊಯ್ಯುತ್ತಿರುವ ಅಪಾಯಕಾರಿ ರೋಗಗಳಲ್ಲಿ,ಹೃದಯರೋಗ ಮತ್ತು ಕ್ಯಾನ್ಸರ್ ಗಳಂತಹ ಪಾರ್ಶ್ವ ವಾಯು ಮೂರನೆ ಸ್ಥಾನದಲ್ಲಿದೆ.

ಅಮೆರಿಕಾದಲ್ಲಿ ವರ್ಷಕ್ಕೆ ಸುಮಾರು ಅರ್ಧ ಮಿಲಿಯ ಮಂದಿ ಪಾರ್ಶ್ವವಾಯುವಿನಿಂದ ಪೀಡಿತರಾಗುವ ಅಂದಾಜಿದೆ.ಅವರಲ್ಲಿ ಒಂದು ಲಕ್ಷದ 50 ಸಾವಿರಕ್ಕೂ ಹೆಚ್ಚು ಸಾಮನ್ನಪ್ಪುತ್ತಾರೆ. ಬದುಕುಳಿದವರು ಕೂಡಾ ಯಾವುದೋ ಒಂದು ದೈಹಿಕ ಲೋಪದಿಂದ ಮಾತು ಹೋಗುವುದು,ದೃಷ್ಟಿ ದೋಷ ಜ್ಞಾಪಕಶಕ್ತಿಯ ಲೋಪ, ನಡೆಯಲಾಗದಿರುವಿಕೆ,ಇಲ್ಲವೇ ಶರೀರದ ಒಂದು ಪಾರ್ಶ್ವ  ನಿಸ್ಸತ್ವ ವಾಗುವುದು, ಇಂತಹ ಯಾವುದೇ ಒಂದು ನ್ಯೂನತೆಯೊಂದಿಗೆ ಜೀವನ ಕಳೆಯುತ್ತಾರೆ.

ಪಾರ್ಶ್ವವಾಯು ಅಂದರೇನು?

★ ಡಾಕ್ಟರುಗಳು ಇದನ್ನು ಸೆರೆಬ್ರನ್ ಎಮರ್ಜೆನ್ಸಿ ಎಂದು ಹೇಳುತ್ತಾರೆ. ಸೆರೆಬ್ರಲ್ ಎಂದರೆ  ಮೆದುಳಿಗೆ ಸಂಬಂಧಿಸಿದ ಎಂದರ್ಥ. ಎಮರ್ಜೆನ್ಸಿ ಎಂದರೆ ತುತ್ತು ಸ್ಥಿತಿ,  ಆಕಸ್ಮಿಕ ಎಂದು.

★ಮಿದುಳಿನ ಧಮನಿಗಳ ಮೂಲಕ ಮಿದುಳಿಗೆ ಹೋಗುವ ರಕ್ತದ ಹರಿಯುವಿಕೆಗೆ ಆಕಸ್ಮಿಕವಾಗಿ ತೊಡಕು ಉಂಟಾಗುವುದೇ ಪಾರ್ಶ್ವ ವಾಯು

★ ರಕ್ತ ಸಂಚಾರಕ್ಕೆ  ಅಡ್ಡಿಯಾಗುವುದೆಂದರೆ, ಧಮನೀಯ ಯಾವುದೋ ಒಂದು ಭಾಗದಲ್ಲಿ ರಕ್ತ ಗರಣೆಗಟ್ಟುವುದರಿಂದ  ಆಗಬಹುದು ಅಥವಾ ಧಮನಿ ರಕ್ತನಾಳ ಬಿರುಕುಬಿಡುವುದರಿಂದ ಆಗಬಹುದು .

★ ಧಮನಿಯ ಮೂಲಕ ಮೆದುಳಿಗೆ ಹೋಗುವ ರಕ್ತ ಮೆದುಳಿಗೆ ಪ್ರಾಣಧಾರಾವಾದ ಆಮ್ಲಜನಕವನ್ನು ಒದಗಿಸುತ್ತದೆ.ಮೆದುಳಿಗೆ ರಕ್ತದ ಪೂರೈಕೆ ನಿಂತಕೂಡಲೇ ಆಮ್ಲಜನಕದ ಪೂರೈಕೆ ಕೂಡಾ ನಿಂತುಹೋಗುತ್ತದೆ. ಆಮ್ಲಜನಕ ಪೂರೈಕೆಯಾಗದೇ ಹೋದರೆ ಮೆದುಳಿಗೆ ಉಸಿರುಗಟ್ಟಿದಂತೆ ಆಗುತ್ತದೆ. ಆಗ ಮೆದುಳಿಗೆ ಸೇರಿದ ಅಮೂಲ್ಯ ಕೋಶಜಾಲಗಳು ನಾಶವಾಗುತ್ತವೆ ಇಲ್ಲವೇ ತೀವ್ರ ಹಾನಿಗೊಳಾಗಾಗುತ್ತವೆ. ಈ ಹಾನಿ ಉಂಟಾಗಲು ಕೇವಲ ನಾಲ್ಕು ಅಥವಾ ಐದು ನಿಮಿಷಗಳು ಸಾಕು. ಅಂದರೆ .

★ಮೆದುಳಿಗೆ ರಕ್ತ ಪೂರೈಕೆಯಲ್ಲಿ ನಾಲ್ಕೈದು ನಿಮಿಷಗಳ ಕಾಲ ಅಡ್ಡಿ ಯುಂಟಾದರೂ ಸಾಕು, ಪಾರ್ಶ್ವ  ವಾಯು ಬರುತ್ತದೆಂದಾಯಿತು !

★ಹೀಗೆ ಹಾನಿಗೊಳಗಾದ ಮಿದುಳಿನ ನರಕೋಶಗಳ ಎಡಗೈಯನ್ನು ಕೆಲಸ ಮಾಡಿಸುವವಾದರೆ ವ್ಯಕ್ತಿಯ ಎಡಗೈ ಬಿದ್ದು ಹೋಗುತ್ತದೆ ಜ್ಞಾಪಕ ಶಕ್ತಿಯನ್ನು ನಿಯಂತ್ರಿಸುವವಾದರೆ ಜ್ಞಾಪಕಶಕ್ತಿಯನ್ನು ಕಳೆದುಹೋಗುವುದು.ಒಂದು ವೇಳೆ ಮೆದುಳಿನ ಅತ್ಯಧಿಕ ನರ ಕೋಶಗಳು ನಶಿಸಿಹೋದರೆ  ಆ ವ್ಯಕ್ತಿಯೇ ಸಾಯುತ್ತಾನೆ.

★ಆಕಸ್ಮಿಕವಾಗಿ ರಕ್ತ ಪೂರೈಕೆ ನಿಂತು ಹೋಗುವುದು ಎನ್ನುವುದು ಆರೋಗ್ಯವಾಗಿರುವವರ ಧಮನಿಗಳಲ್ಲಿ ಏನು ಆಗದು.ದೀರ್ಘಕಾಲ ಹಾನಿಗೊಳಗಾದ ಧಮನಿಗಳಲ್ಲಿ ಮಾತ್ರವೇ ಆಗುತ್ತದೆ.