ಮನೆ ಯೋಗಾಸನ ಕುಕ್ಕುಟಾಸನ

ಕುಕ್ಕುಟಾಸನ

0

ಕುಕ್ಕುಟವೆಂದರೆ ಕೋಳಿ, ಈ ಆಸನವು ಅದನ್ನು ಹೋಲುವುದರಿಂದ ಇದಕ್ಕೆ ಆ ಹೆಸರು.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು

2. ಬಲಿಕ ತೊಡೆ ಮತ್ತು ಮೀನಾ ಖಂಡಗಳ ನಡುವೆ, ಮಂಡಿಗಳಬಳಿ ಕೈಗಳನ್ನು ತೂರಿಸಬೇಕು.ಇದಕ್ಕಾಗಿ ಮೊದಲು ಕೈಬೆರಳುಗಳನ್ನು ಸಂದುಗಳ ನಡುವೆ ಹೋಗಿಸಿ ಆಮೇಲೆ ಮೆಲ್ಲಮೆಲ್ಲಗೆ ಕೈಗಳನ್ನು ನುಗ್ಗಿಸಬೇಕು.

3. ಆಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು ಕೈ ಹೆಬೆರಳುಗಳು ಒಂದನ್ನೊಂದು ಮುಟ್ಟುವಂತೆ ಅಂಗೈಗಳನ್ನು ನೆಲದ ಮೇಲೂರಿ, ಇಡೀ ದೇಹವನ್ನು ಮೇಲೆಬ್ಬಿಸಿ ಅದರ ಭಾರವನ್ನು ಕೈಗಳಿಗೆ ವರ್ಗಾಯಿಸಿ ಸಮತೋಲನದಲ್ಲಿ  ನಿಲ್ಲಿಸಬೇಕು.ಸಾಮಾನ್ಯ ಉಸಿರಾಟದಿಂದ ಈ ಭಂಗಿಯಲ್ಲಿ ಸಾಧ್ಯವಾದಷ್ಟು ಕಾಲ ನೆಲೆಸಬೇಕು.

4. ಆ ಬಳಿಕ, ದೇಹವನ್ನು ಮೆಲ್ಲಗೆ ನೆಲದಮೇಲೆಳಿಸಿ ಕೈಗಳನ್ನು ಮೊದಲು ಬಿಡಿಸಿ ಆಮೇಲೆ ತೊಡರಿಟ್ಟು ಕಾಲುಗಳನ್ನು ಬಿಚ್ಚಬೇಕು ಈ ಭಂಗಿಯ ಅಭ್ಯಾಸವನ್ನು ಮತ್ತೆ ಮತ್ತೆ ಮಾಡಬೇಕು.

ಪರಿಣಾಮಗಳು

 ಈ ಭಂಗಿಯು ಮಣಿಕಟ್ಟುಗಳಿಗೂ ಕಿಬ್ಬೊಟ್ಟೆಯ ಪಕ್ಕೆಗಳಿಗೂ ತುಂಬಾ ಶಕ್ತಿಯನ್ನು ಅನುಕೂಲಸುತ್ತದೆ.