ಮನೆ ಯೋಗಾಸನ ಗರ್ಭಪಿಂಡಾಸನ

ಗರ್ಭಪಿಂಡಾಸನ

0

ಗರ್ಭ ಪಿಂಡ ಎಂದರೆ ಗರ್ಭದೊಳಗೆ ಅಡಗಿರುವ ಪಿಂಡ ಇದು ಪದ್ವಾಸನದ ಒಂದು ವ್ಯತ್ಯಸ್ತ ಭಂಗಿ. ಇದು ಹಿಂದಿನ ಆಸನದ ವಿವರಣೆಯಲ್ಲಿದ್ದಂತೆ, ಕೈಗಳನ್ನು ತೊಡೆ ಮೀನಖಂಡಗಳ ನಡುವೆ ತೋರಿಸಿ,ಬಳಿಕ ಮಣಕೈಗಳನ್ನು ಬಗ್ಗಿಸಿ, ತೋಳನ್ನು ಮೇಲೆತ್ತಿ,ಕೈಗಳಿಂದ ಕಿವಿಗಳನ್ನು ಮುಟ್ಟಿ ಹಿಡಿಯುವ ಭಂಗಿ.

Join Our Whatsapp Group

ಈ ಭಂಗಿಯು ಸ್ತ್ರೀ ಗರ್ಭಕೋಶದಲ್ಲಿ ಅಡಗಿರುವ ಶಿಶುವನ್ನು ಹೊಲುತ್ತದೆ. ಅದಕ್ಕಾಗಿ ಭಂಗಿಗೆ ಈ ಹೆಸರು. ಇಲ್ಲಿಯ ಒಂದು ವ್ಯತ್ಯಾಸವೆನೆಂದರೆ  ಗರ್ಭಕೋಶದಲ್ಲಿರುವ ಶಿಶುವಿನ ತಲೆ ಕೆಳಭಾಗಕ್ಕಿದ್ದರೆ ಈ ಭಂಗಿಯಲ್ಲಿ ಅದು ಮೇಲಕ್ಕಿದ್ದಂತೆ  ತೋರುತ್ತದೆ. ಅಲ್ಲದೆ ಶಿಶುವಿನ ಕಾಲುಗಳು ಪದ್ಮಾಸದಲ್ಲಿ ರುವುದಿಲ್ಲ.ಗರ್ಭೋಪನಿಷತ್ತಿ ನಲ್ಲಿಯೂ ಮತ್ತು ಪಿಂಡೋತ್ಪತ್ತಿ ಪ್ರಕರಣಗಳಲ್ಲಿರುವ ಇತರ ಪ್ರಾಚೀನ ಗ್ರಂಥಗಳಲ್ಲಿಯೂ ಸ್ತ್ರೀ ಗರ್ಭಕೋಶದಲ್ಲಿ ಪಿಂಡೋತ್ಪತ್ತಿಯಾಗುವ ಬಗೆ ಅದರಲ್ಲಿ  ಪಿಂಡವು  ದಿನೇ ದಿನೇ ಹೇಗೆ ಬೆಳೆದು ಶಿಶುವಿನ ಆಕಾರವನ್ನು ಪಡೆದು, ತಾಯಿಯ ಗರ್ಭದಿಂದ ಯಾವಾಗ ಹೊರಬರುತ್ತದೆ ಎಂಬ ವಿಷಯವನ್ನು ಕೂಲಂಕಷವಾಗಿ ವಿಂಗಡಿಸಿ ಬರೆದಿರುತ್ತಾರೆ..ಈ ಕ್ರಮ ವು ಆಧುನಿಕ ವೈಜ್ಞಾನಿಕರ ಅಭಿಪ್ರಾಯಕ್ಕೆ ಪುಷ್ಟಿಕೊಡುವುದರಿಂದ ಈ ಪಿಂಡೋತ್ಪತ್ತಿ,ಅದರ ಬೆಳವಣಿಗೆಯ ಕ್ರಮ ಮತ್ತು ಶಿಶುಜನನ ಇವುಗಳ ವಿಷಯದಲ್ಲಿ ನಮ್ಮ ಋಷಿಗಳಿಗೆ ಎಂಥ ಜ್ಞಾನವಿದ್ದಿತೆಂಬುದನ್ನು ಸೂಚಿಸುತ್ತದೆ. ವೈದ್ಯಕೀಯ ಆಯುಧಸಾಮಗ್ರಿಗಳು ಇರಲಿಲ್ಲವಾದರೂ ಗರ್ಭ ರಹಸ್ಯದ  ಅರಿವು ಅವರಿಗೆ ಚೆನ್ನಾಗಿತ್ತು.

ಅಭ್ಯಾಸ ಕ್ರಮ

1. ಮೊದಲು ಪದ್ಮಾಸನದಲ್ಲಿ ನೆಲದ ಮೇಲೆ ಕುಳಿತುಕೊಳ್ಳಬೇಕು

2. ಆಮೇಲೆ ತೋಳುಗಳನ್ನು ಮುಂದೂಡುತ್ತ ಬಂದು  ಮೊಣ ಕೈಗಳನ್ನು ಮೇಲ್ಭಾಗಕ್ಕೆ ಬಗ್ಗಿಸಬೇಕು..

3. ಆನಂತರ ಉಸಿರನ್ನು ಹೊರ ಹೋಗಿಸುತ್ತ, ತೊಡೆಗಳನ್ನು ನೆಲದಿಂದ ಮೇಲೆತ್ತಿ,ದೇಹವನ್ನು ತ್ರಿಕದ ಪೃಷ್ಠಭಾಗಧ  ತಾಳಗಡೆಯ ಕಾಕ್ಸಿಸ್ ಎಂಬ ತ್ರಿಕೋಣಾಕಾರದ ಎಲುಬು ಆಧಾರದಿಂದ ಸಮತೋಲದಲ್ಲಿ ನಿಲ್ಲಿಸಿ, ಕೈಬೆರಳುಗಳಿಂದ ಆಯಾ ಕಿವಿಗಳನ್ನು ಹಿಡಿದುಕೊಳ್ಳಬೇಕು.

4. ಆಮೇಲೆ,ತೋಳುಗಳನ್ನು ಮುಂದೂಡುತ್ತಾ ಒಂದು ಮೊಣಕೈಗಳನ್ನು ಮೇಲ್ಬಾಗಕ್ಕೆ ಬಗ್ಗಿಸಬೇಕು.

5. ಈ ಭಂಗಿಯಲ್ಲಿ ಸಾಮಾನ್ಯ ಉಸಿರಾಟದಿಂದ 15  30 ಸೆಕೆಂಡುಗಳ ಕಾಲ ಕಾಲವಿದ್ದು ಬಳಿಕ ಕಾಲುಗಳನ್ನು ಕೆಳಕ್ಕಿಳಿಸಿ,ಕೈಗಳನ್ನು ಕಾಲುಸಂದುಗಳಿಂದ ಮೆಲ್ಲಗೆ ಒಂದೊಂದಾಗಿ ಬಿಡಿಸಿ ಕೊಂಡು, ಆನಂತರ ಕಾಲುಗಳನ್ನು ನೀಡ ಮಾಡಿ  ಮಿಶ್ರಮಿಸಿಕೊಳ್ಳಬೇಕು.

6. ಇದಾದ ಮೇಲೆ ಕಾಲುಗಳ ಸ್ಥಾನಗಳನ್ನು ವ್ಯತ್ಯಾಸ ಮಾಡಿ ಬಂಗಿಯನ್ನು ಮತ್ತೆ ಬನ್ನಿ ಅಭ್ಯಸಿಸಬೇಕು.

ಪರಿಣಾಮಗಳು

ಈ ಭಂಗಿಯಲ್ಲಿ ಅಂಗಗಳು ಚೆನ್ನಾಗಿ ಕುಗ್ಗುವುದು ಮಾತ್ರವಲ್ಲದೆ ಅಂಗಾಂಗಗಳಲ್ಲೆಲ್ಲ  ಸುಗಮವಾಗಿ ನಡೆಯುತ್ತದೆ ಮತ್ತು ಈ ಮೂಲಕ  ಅವು ಸೊಪುಗೊಳ್ಳುತ್ತವೆ.