ಕರ್ನಾಟಕ ದೇವಾಲಯಗಳ ಬಿಡು ಅದರಲ್ಲೂ ಮಂಡ್ಯ ಜಿಲ್ಲೆಯ ಹಲವಾರು ದೇವಸ್ಥಾನಗಳಿವೆ. ಹೆಸರುವಾಸಿಯಾಗಿದೆ ಮಳವಳ್ಳಿ ತಾಲೂಕಿನ ಕಲ್ಲುವೀರನ ಹಳ್ಳಿಯಲ್ಲಿರುವ ಶ್ರೀಮತ್ತಿತಾಳೆಶ್ವರ ಕ್ಷೇತ್ರವು ಒಂದು ಈ ಕ್ಷೇತ್ರ 900 ವರ್ಷಗಳ ಕಾಲ ಇತಿಹಾಸ ಹೊಂದಿದೆ. ಸುಂದರವಾದ ಮತ್ತು ವಿಲಾವಾದ ಕೊಳವಿದೆ. ಇಲ್ಲಿಯ ಸ್ವಾಮಿಯು ಉದ್ಭವವಾಗಿರುವುದು ಬಹಳ ವಿಶೇಷವಾಗಿದೆ.
ಇಲ್ಲಿ ಹಸುಗಳು ಬಂದು ಹುತ್ತಕ್ಕೆ ಹಾಲನ್ನು ನೀಡುತ್ತಿದ್ದನ್ನು ಗ್ರಾಮಸ್ಥರು ಹುತ್ತದಲ್ಲಿ ಏನಿರುವುದು ಎಂದು ಮಡಿಕೆಯ ನೀರಿನಿಂದ ಹುತ್ತವನ್ನು ಕರಗಿಸಿದಾಗ ಸುಬ್ರಹ್ಮಣ್ಯಶ್ವರನು ಉದ್ಭವಿಸಿರುವುದನ್ನು ನೋಡಿ ಅಂದಿನಿಂದ ಇಂದಿನವರೆಗೂ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.ಇಲ್ಲಿ ಸಾವಿರಾರು ಹುತ್ತಗಳು ಮತ್ತು ಮತ್ತಿ ಮರಗಳಿದ್ದವು.ಇಲ್ಲಿ ಚರ್ಮ ವ್ಯಾಧಿ ಇದ್ದವರು ಬಂದು ಪೂಜೆ ಸಲ್ಲಿಸಿ ಹುತ್ತದ ಮಣ್ಣನ್ನು ಮೈಗೆ ಲೇಪಿಸಿದರೆ ಚರ್ಮ ವ್ಯಾದಿಯು ಗುಣಮುಖವಾಗುತ್ತದೆ.
ಪ್ರತಿ ಭಾನುವಾರ ಗುರುವಾರದಂದು ಇಲ್ಲಿ ವಿಶೇಷ ಪೂಜೆಗಳಿರುತ್ತದೆ.ಚರ್ಮ ವ್ಯಾದಿ ಇದ್ದ ಭಕ್ತಾದಿಗಳು ಇಲ್ಲಿನ ಕೊಳದಲ್ಲಿ ಮಿಂದು ಸ್ವಯಂ ಉದ್ಭವ ಮೂರ್ತಿಗೆ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಮಾಡಿಸಿ. ಇಲ್ಲಿಂದ ಹುತ್ತದ ಮಣ್ಣನ್ನು ತೆಗೆದುಕೊಂಡು ಹೋಗುತ್ತಾರೆ. ಇಲ್ಲಿ ಸುಬ್ರಹ್ಮಣ್ಯ ಸೃಷ್ಟಿ ಮತ್ತು ರಥೋತ್ಸವಗಳು ಬಹಳ ವಿಜ್ರಮಣೆಯಿಂದ ನಡೆಸುತ್ತಾರೆ.