1. ಕೂದಲು ಬೆಳ್ಳಕಗಾಗಿರುವವರು,ತಾರೇ ಕಾಯಿ ಎಂದು ಹೇಳುವ ಕಾಯಿಗಳನ್ನು ತಂದು ಕುಟ್ಟಿ ಪುಡಿಮಾಡಿ ಎಳ್ಳೆಎಣ್ಣೆಯಲ್ಲಿ ಹಾಕಿ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಕಪ್ಪಾಗುವುದು.
2. ತ್ರಿಪಲಾ ಚೂರ್ಣವನ್ನು ಕಷಾಯ ಮಾಡಿ ಅದರಲ್ಲಿ ಎಳ್ಳೆಣ್ಣೆಯನ್ನು ಬೆರೆಸಿ ನೀರು ಆವಿಯಾಗುವವರೆಗೂ ಕಾಯಿಸಿ,ನಂತರ ಶೋಧಿಸಿ ಕೊಂಡು ತಲೆಗೆ ಸವರುವುದರಿಂದ ಕೂದಲು ಕಪ್ಪಾಗುವುದು.
3. ಸೀಬೆ ಮರದ ಎಲೆಗಳನ್ನು ತಂದು ಸ್ವಲ್ಪ ನೀರು ಬೆರೆಸಿ ಅರೆದು ಅದಕ್ಕೆ ಅರಿಸಿನ ಮಿಶ್ರ ಮಾಡಿ ರಾತ್ರಿ ಮಲಗುವಾಗ ತಲೆಗೆ ಹಚ್ಚಿಕೊಂಡು ಬೆಳಗ್ಗೆ ಎದ್ದು ಬಿಸಿ ನೀರನ ಸ್ನಾನ ಮಾಡಿದರೆ ತಲೆಯಲ್ಲಿ ಹೇನು ನಾಶವಾಗಿ ಹಗಲು ಏಳುವುದಿಲ್ಲ ಕ್ರಮೇಣ ಕಪ್ಪು ಕೂದಲಾಗುವುದು.
4. ಕೂದಲು ಅನೇಕರಿಗೆ ಉದುರುತ್ತಿರುತ್ತದೆ. ಅಕಾಲದಲ್ಲಿ ಬಿಳಿಯ ಕೂದಲು ಹುಟ್ಟುತ್ತದೆ ಆಗ ಬೇವಿನ ಬೀಜಗಳನ್ನು ಅರೆದು ಕೂದಲಿಗೆ ಹಚ್ಚಿಕೊಂಡು ಸಾಯಂಕಾಲದವರೆಗೂ ಇದ್ದು ಬೇವಿನ ಕಷಾಯದಿಂದ ತಲೆ ತೊಳೆದುಕೊಳ್ಳುತ್ತಾ ಇದ್ದರೆ ನರೆತ ಕೂದಲು ಕಪ್ಪಾಗಿ ಉದುರುವುದು ನಿಂತು ಹೋಗುತ್ತದೆ.
5. ಜೇನು ಮಧುರಂಗಿ ಸೊಪ್ಪನ್ನು ತಂದು ಕೋಳಿ ಮೊಟ್ಟೆಯ ಆರಿಶಿನದ ಭಾಗದಲ್ಲಿ ಮಿಶ್ರ ಮಾಡಿ ರಾತ್ರಿ ಮಲಗುವಾಗ ತಲೆಗೆ ಹಚ್ಚಿಕೊಂಡು ಬೆಳಗ್ಗೆ ಸ್ಥಾನ ಮಾಡುವುದರಿಂದ ಕೂದಲು ಕಪ್ಪಾಗುತ್ತದೆ.
6. ಭೃಂಗಾಮಲಕ ತೈಲ ಎಂದು ಅಂಗಡಿಯಲ್ಲಿ ಸಿಕ್ಕುವ ತೈಲವನ್ನು ಪ್ರತಿದಿನವೂ ತಲೆಗೆ ಹಚ್ಚಲು ಉಪಯೋಗಿಸುತ್ತಿದ್ದರೆ,ಕೂದಲು ಕಪ್ಪಾಗಿಯೇ ಇರುತ್ತದೆ.
7. ನಿಂಬೆ ರಸವನ್ನು ಎಳ್ಳೆಣ್ಣೆಯಲ್ಲಿ ಬೆರೆಸಿ ಮಲಗುವಾಗ ತಲೆಗೆ ಹಚ್ಚಿಕೊಂಡು ಬೆಳಗ್ಗೆ ಸ್ನಾನ ಮಾಡಬಹುದು.ಅಥವಾ ಹಾಗೇ ಬಿಡುತ್ತಾ ಬಂದರೆ ಕಪ್ಪು ಕೂದಲು ಸೊಂಪಾಗಿ ಬೆಳೆದು ಕಾಂತಿಯುಕ್ತವಾಗುವುದು.
8. ತೆಂಗಿನಕಾಯಿ ತುರಿಯ ಜೊತೆಗೆ ನೆನೆಸಿದ ಮೆಂತ್ಯ ಸೇರಿಸಿ ರುಬ್ಬಿ ತಲೆಗೆ ಹಚ್ಚಿಕೊಂಡು ಎರಡು ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ತಲೆಯಲ್ಲಿ ಹೊಟ್ಟು,ಹೇನು ಆಗುವುದೇ ಇಲ್ಲ.
9. ಹರಳೆಣ್ಣೆಯಲ್ಲಿ ಮೆಂತ್ಯದ ಪುಡಿಯನ್ನು ಹಾಕಿ ಕಾಯಿಸಿಟ್ಟುಕೊಂಡು ಅದನ್ನು ತಲೆಗೆ ಹಚ್ಚುತ್ತಾ ಬಂದರೆ ಕೂದಲು ಆ ಕಾಲದಲ್ಲಿ ಉದುರುವುದು ನಿಂತು ಹೋಗುವುದ.
10. ಪ್ರತಿದಿನವೂ ನೆಲ್ಲಿಕಾಯಿಯ ಉಪ್ಪಿನಕಾಯಿ ತಂಬುಳಿ ,ತೊಕ್ಕು ಹೀಗೆ ಅನೇಕ ವಿಧವಿಧವಾದ ತಿನಿಸುಗಳನ್ನು ಮಾಡಿ ಸೇವಿಸುತ್ತಾ ಬರಲು ಕೂದಲು ಕಪ್ಪಾಗಿಯೇ ಸ್ಥಿರವಾಗಿರುವುದು.
11. ಚ್ಯವನ ಪ್ರಾಶ ಲೇಹ್ಯವನ್ನು ಪ್ರತಿದಿನವೂ ಸೇವಿಸುತ್ತಾ ಬರಲು ಕೂದಲು ಕಪ್ಪು ಬಣ್ಣದಲ್ಲೇ ಇರುತ್ತದೆ ಹಾಗೂ ಕಾಂತಿಯುತವಾಗಿರುತ್ತದೆ.
12. ಕೊಬ್ಬರಿ ಎಣ್ಣೆಗೆ ನೆಲ್ಲಿಕಾಯಿ ಪುಡಿಯನ್ನಾಗಲೀ, ನೆಲ್ಲಿಕಾಯಿ ರಸವನ್ನಾಗಲಿ ಬೆರೆಸಿ ಕುದಿಸಿ, ನೀರು ಇಂಗಿದ ಮೇಲೆ ಒಂದು ಬಾಟಲಿಯನ್ನು ಹಾಕಿಟ್ಟುಕೊಂಡು ಪ್ರತಿದಿನವೂ ತಲೆಗೆ ಹಚ್ಚುತ್ತಾ ಬಂದರೆ ಸ್ಥಿರವಾದ ಕಪ್ಪು ಕೂದಲು ಕಾಂತಿಯುತವಾಗುತ್ತದೆ.
13. ಕೊಬ್ಬರಿ ಎಣ್ಣೆಯಾಲ್ಲಾಗಲೀ ಎಳ್ಳೆಣ್ಣೆಯಲ್ಲಾಗಲೀ, ಹರಳೆಣ್ಣೆಯಾಲ್ಲಾಗಲೀ ಅರಿಶಿನವನ್ನು ಹಾಕಿ ಚೆನ್ನಾಗಿ ಕಾಯಿಸಿ ಅದನ್ನು ತಣಿಸಿ ನೆತ್ತಿಗೆ ಚೆನ್ನಾಗಿ ಉಜ್ಜಿ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಂತು, ಸೊಂಪಾಗಿ ಬೆಳೆಯುತ್ತದೆ. 14. ತಲೆಯಲ್ಲಿ ಹೊಟ್ಟು ಆಗುವವರು ಗರಿಕೆಯನ್ನು ಕುಟ್ಟಿ ರಸವನ್ನು ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ ಸೇರಿಸಿ ತಲೆಗೆ ಹಚ್ಚಿಕೊಂಡು ಎರಡು ಗಂಟೆ ಬಿಟ್ಟು ಸ್ಥಾನ ಮಾಡುವುದರಿಂದ ಕೂದಲು ಬೆಳ್ಳಗಾಗುವುದು,ಆ ಕಾಲದಲ್ಲಿ ಉದುರುವುದು, ತಲೆಯಲ್ಲಿ ಹೊಟ್ಟು ಆಗುವುದು ನಿವಾರಣೆ ಯಾಗುವುದು.
15. ಹರಳೆಲೆಯನ್ನು ತಂದುಕುಟ್ಟಿ ರಸವನ್ನು ಹರಳೆಣ್ಣೆಗೆ ಸೇರಿಸಿ ಮಂಡಿಗೆ ಹಚ್ಚಿ ಎರಡು ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಕಪ್ಪಾಗಿಯೇ ಉಳಿಯುವುದು.ಹರಳೆಣ್ಣೆಯನ್ನು ತಲೆಗೆ ನಿತ್ಯವೂ ಹಚ್ಚುವುದರಿಂದ ತಂಪಾಗಿ ಕೂದಲು ಕಾಂತಿಯುತವಾಗಿ, ನೀಳವಾಗಿ,ಸೊಂಪಾಗಿ ಬೆಳೆಯುವುದಲ್ಲದೆ ಕೂದಲು ಉದುರುವುದು, ಹೊಟ್ಟು ಆಗುವುದೂ ನಿವಾರಣೆಯಾಗುವುದು.
16. ಎಳ್ಳೆಣ್ಣೆಯಲ್ಲಿ ವೀಳ್ಯದೆಲೆಯನ್ನು ನುಣ್ಣಗೆ ಅರೆದು ಮಿಶ್ರಮಾಡಿ,ತಲೆಗೆ ರಾತ್ರಿ ಹಚ್ಚಿ ಬೆಳಗ್ಗೆ ಸ್ನಾನ ಮಾಡುವುದರಿಂದ ಹೊಟ್ಟು ಆಗುವುದು,ಕೂದಲು ಉದುರುವುದು ನಿಂತು ಹೋಗುವುದು.
17. ನೆರೆ ಕೂದಲು ಕಾಣಿಸುತ್ತಲೇ ದಂಟಿನ ಸೊಪ್ಪಿನ ರಸವನ್ನು ತೆಗೆದು ತಲೆಗೆ ಸವರಿ ಹಾಗೇ ಬಿಟ್ಟು ಮಾರನೇ ದಿನ ಸ್ನಾನ ಮಾಡುವುದರಿಂದ ಕೂದಲು ಮೃದುವಾಗಿ ರೇಷ್ಮೆಯಂತೆ ಹೊಳೆಯುವುದು.
18. ಉಮ್ಮತ್ತಿ ಸೊಪ್ಪಿನ ರಸಕ್ಕೆ ಬೀಜದ ಚೂರ್ಣ ಹಾಕಿ, ಎಣ್ಣೆ ಕಾಯಿಸಿ ಮಂಡೆಗೆ ತಿಕ್ಕಿ ಕೂದಲು ಉದುರುವುದು ನಿಲ್ಲುತ್ತದೆ.
19. ಕರಿಲಕ್ಕಿಸೊಪ್ಪಿನ ರಸಕ್ಕೆ ಎಳ್ಳೆಣ್ಣೆಯನ್ನು ಹಾಕಿ ಕಾಯಿಸಿ, ಪ್ರತಿದಿನವೂ ಕೂದಲಿಗೆ ಹಚ್ಚುತ್ತಾ ಬಂದರೆ ಕೂದಲು ಕಪ್ಪಾಗುವುದು.
20. ಪಯಸ್ಯ, ಇದ್ರವಲ್ಲಿ,ಚಿಟಿಕೆ ಬೇರು, ಗುಬ್ಬಚ್ಚಿ ಗಿಡದ ಸಮೂಲದಿಂದ ಎಳ್ಳೆಣ್ಣೆಯಲ್ಲಿ ತಯಾರಿಸಿದ ತೈಲವನ್ನು ಉಪಯೋಗಿಸುವುದರಿಂದ ಕೂದಲು ಕಪ್ಪು ಬಣ್ಣ ತಿರುಗುವುದು.
21. ನಿಲ್ಲಿ ರಸ,ಗರುಗದ ಸೊಪ್ಪಿನ ರಸ, ಜೇಷ್ಠ ಮಧುವಿನ ಚೂರ್ಣ ಹಾಕಿ ತಯಾರಿಸಿದ ಎಳ್ಳು ಎಣ್ಣೆಯನ್ನು ಪಾಪ ವಿಧಿಯ ಪ್ರಕಾರ ತಯಾರಿಸಿದ ಮಂಡೆಗೆ ಹಚ್ಚುತ್ತಾ ಬಂದರೆ ಕೂದಲು ಕಪ್ಪಾಗುವುದು.
22. ತೆಂಗಿನಕಾಯಿಯನ್ನು ತುರಿದು,ರುಬ್ಬಿಕೊಂಡು ರಸವನ್ನು ಬೇರ್ಪಡಿಸಿ ಅದಕ್ಕೆ ನಿಲ್ಲಿ ಚೆಟ್ಟು, ಮುರರಾರ ಸಿಂಗಿ ಸೇರಿಸಿ ತೈಲಪಾಕ ವಿಧಿಯಂತೆ, ತೈಲ ತಯಾರಿಸಿ ಮಂಡೆಗೆ ಹತ್ತಿದರೆ ಕೂದಲು ಕಪ್ಪಾಗುವುದು. ಎಳ್ಳೆಣ್ಣೆಯಲ್ಲಿ ಮೇಲಿನ ದ್ರವ್ಯಗಳನ್ನು ಹಾಕಿ, ತಯಾರಿಸಿದ ಎಣ್ಣೆಯಿಂದಲೂ ಕೂದಲು ಕಪ್ಪಾಗುತ್ತದೆ.
23. ಕನ್ಯೆವದಿಲೆ ಗಡ್ಡೆ,ಎಳ್ಳು,ಜೇಷ್ಠ ಮಧು,ಸಾಸಿವೆ, ನಾಗಕೇಸರಿ ಸಮತೂಕ, ನೆಲ್ಲಿಕಾಯಿ ರಸ ಮರ್ದಿಸಿ,ಮಂಡೆಗೆ ಹಚ್ಚಲು ನರೆತ ಮಂಡೆ ಕೂದಲು ಕಪ್ಪಾಗುವುದು.
24. ತ್ರಿಫಲಾ, ಜೇಷ್ಠ ಮಧು, ಕಷಾಯಕ್ಕೆ, ಕನ್ಯೆದಿಲೆ ಗಡ್ಡೆಯ ರಸ, ಗರಗದಿಸರ ಸೇರಿಸಿ ಎಳ್ಳೆ ಎಣ್ಣೆಯಲ್ಲಿ ಹಾಕಿ, ಕಾಯಿಸಿ ತಲೆಗೆ ಹಚ್ಚುವುದರಿಂದ ಕೂದಲು ಕಪ್ಪಾಗುವುದು.
25. ಹತ್ತಿ ಬೀಜದ ತಿರುಳನ್ನು ಕುರಿಯ ಹಾಲಿನಿಂದ ಅರೆದು ಮಂಡೆಗೆ ಲೇಪಿಸುತ್ತಾ ಬರಲು ಏಳು ದಿನಕ್ಕೆ ಕೂದಲು ಕಪ್ಪಾಗುವುದು.