ಮನೆ ಆರೋಗ್ಯ ಪಾರ್ಶ್ವವಾಯು: ಭಾಗ ಮೂರು

ಪಾರ್ಶ್ವವಾಯು: ಭಾಗ ಮೂರು

0

ಲಘು ಪಾಶ್ವ ವಾಯು

Join Our Whatsapp Group

★ ಸ್ವಲ್ಪ ಕಾಲವಿರುವ ಲಕ್ಷಣಗಳು ಬರಲಿರುವ ತೀವ್ರ ಪಾರ್ಶ್ವ ವಾಯುವಿನ (Major Stroke) ಸೂಚನೆಗಳಿಗಾಗಿ (ರೆಡ್ ಲೈಟ್ ವಾರ್ನಿಂಗ್ ನಂತೆ) ಪರಿಗಣಿಸಬಹುದು. ಈ ಲಘು ಪಾರ್ಶ್ವ ವಾಯುವನ್ನು ವೈದ್ಯಕೀಯ   ಪರಿಭಾಷೆಯಲ್ಲಿ Transient Ischaemic Attack (TlA)ಎಂದು ಕರೆಯುತ್ತಾರೆ.

ಮಿನಿ ಸ್ಟ್ರೋಕ್ ಲಕ್ಷಣಗಳು

★ ಮುಖದ ಒಂದು ಪಾರ್ಶ್ವ ಮರಗಟ್ಟಿದಂತೆ ಅನಿಸುವುದು

 ★ಮಾತಿನಲ್ಲಿ ತೊದಲುವಿಕೆ

 ★ಒಂದು ಕೈಇಲ್ಲವೇ ಕಾಲು ಬಲಹೀನವಾಗಿ ತೋರುವುದು

 ★ಕಿವಿಗಳಲ್ಲಿ ಗುಯ್ ಗುಡುವ ಶಬ್ದ

  ★ಜೋಡಿ ದೃಶ್ಯಗಳು ಕಾಣಿಸುವುದು, ಇಲ್ಲವೆ ಒಂದು ಕಣ್ಣು ಕಾಣಿಸದೇ ಹೋಗುವುದು

 ★ತೂಗಿ ಬಿದ್ದು ಹೋಗುತ್ತಿರುವಂತೆ ಅನ್ನಿಸುವುದು

 ★ಶರೀರದ ಒಂದು ಪಾರ್ಶ್ವ ಸ್ಪರ್ಶಜ್ಞಾನವನ್ನು ಕಳೆದುಕೊಳ್ಳುವುದು ಇತ್ಯಾದಿ.

 ★ಮೆದುಳಿಗೆ ರಕ್ತವನ್ನು ಕೊಂಡೊಯ್ಯುವ ರಕ್ತನಾಳಗಳಲ್ಲಿ ಒಂದರಲ್ಲಾಗಲಿ ಇಲ್ಲವೇ ಹೆಚ್ಚು ರಕ್ತ ನಾಳಗಳಲ್ಲಿಯಾಗಲಿ ಆಕಸ್ಮಾತಾಗಿ ರಕ್ತ ಪೂರೈಕೆ ಕುಂಠಿತವಾದರೆ,ಮೇಲೆ ಹೇಳಿದ ಮಿನಿ ಸ್ಟ್ರೋಕ್ ಲಕ್ಷಣಗಳು ಕಂಡುಬರುತ್ತವೆ.

 ★ಈ ಲಕ್ಷಣಗಳು 10 ನಿಮಿಷಗಳಿಂದ ಒಂದು ಗಂಟೆಯವರೆಗೂ ಇರಬಹುದು. ಒಮ್ಮೊಮ್ಮೆ 24 ಗಂಟೆಯಗಳವರೆಗೂ ಇರಬಹುದು.ಈ ಲಕ್ಷಣಗಳು ಯಾವ ವ್ಯಕ್ತಿಗೆ ಯಾವಾಗ ಬರುತ್ತವೋ ಹೇಳಲಾಗದು.

 ★ತ್ರಿವ್ರ ಪ್ರಾಶವಾಯು ಬಂದ ರೋಗಿಗಳಲ್ಲಿ ಮೂರನೆಯ ಒಂದು ಭಾಗದ ಜನರಿಗೆ ಅದಕ್ಕೆ ಮುನ್ನ, ಒಂದೆರಡು ಬಾರಿ ಲಘು ಪಶ್ಚಿಮ ವಾಯು ಬಂದಿರುವ ದಾಖಲೆಗಳಿವೆ.

 ★ಲಘು ಪಾರ್ಶ್ವ ವಾಯುವಿನ ಲಕ್ಷಣಗಳನ್ನು ಸಕಾಲದಲ್ಲಿ ಗುರುತಿಸಿ, ಔಷಧಿಗಳೊಂದಿಗೆ ಕ್ರಮಬದ್ಧ ಚಿಕಿತ್ಸೆ ಮಾಡಿದರೆ, ತೀವ್ರ ಪಾರ್ಶ್ವ ವಾಯು ಬರದಂತೆ ನೋಡಿಕೊಳ್ಳಬಹುದು.

 ★ನಿಮಗಾಗಲಿ ನಿಮಗೆ ಗೊತ್ತಿರುವ ಯಾರಿಗನ್ನಾಗಲಿ,ಮೇಲೆ ಹೇಳಿದ ಲಘು ಪಾರ್ಶವಾಯುವಿನ ಲಕ್ಷಣಗಳು ಕಂಡು ಬಂದರೆ,ಕೂಡಲೇ ವೈದ್ಯರಲ್ಲಿಗೆ ಕರೆದುಕೊಂಡು ಹೋಗುವುದು ಒಳ್ಳೆಯದು. ಅಷ್ಟೇಲ್ಲದೆ ಸ್ವಲ್ಪ ಹೊತ್ತಿನಲ್ಲಿ ಕಡಿಮೆಯಾಗುವುದೇನೋ ನೋಡೋಣ ಎಂದುಕೊಂಡು ಕೂರಬಾರದು.

 ಲಘು ಪಾಶ್ವವಾಯು ಬಂದ ಆರು ರಿಂದ 18 ತಿಂಗಳ ಒಳಗೆ, ತೀವ್ರ ಪಾರ್ಶ್ವವಾಯುವುಂಟಾಗುವ ಸಂಭವವಿರುತ್ತದೆ.ಒಮ್ಮೊಮ್ಮೆ ಮಾರನೆಯ ದಿನವೇ ಬರಬಹುದು ಕೂಡಾ.

ತೀವ್ರ ಪಾರ್ಶ್ವ ವಾಯುವಿನ ಲಕ್ಷಣಗಳು

★ ತೀವ್ರ ಪಾರ್ಶ್ವ ವಾಯು ಬಂದ ಕೂಡಲೇ ಸಾಧಾರಣವಾಗಿ ಆ ವ್ಯಕ್ತಿಗೆ ಪ್ರಜ್ಞೆ ತಪ್ಪುತ್ತದೆ.

 ★ಮುಖಕ್ಕೆ ರಕ್ತ ತಳ್ಳಲ್ಪಟ್ಟು ಬೆಚ್ಚಗಾಗುತ್ತದೆ. ಒಮ್ಮೊಮ್ಮೆ ರಕ್ರವಿಲ್ಲದಂತೆ ಬಿಳಿಚಿ ಕೊಳ್ಳಲೂಬಹುದು.

 ★ನಾಡಿ ಮೊದಲು ನಿಧಾನವಾಗಿಯೂ ಬಲವಾಗಿಯೂ ಮಿಡಿಯುತ್ತದೆ ನಂತರ ವೇಗವಾಗಿಯೂ, ಬಲಹೀನವಾಗಿಯೂ ಮಿಡಿಯುತ್ತದೆ.

★ ಉಚ್ಛ್ವನಿಶ್ವಾಸಗಳು ನಿಧಾನವಾಗಿ ಎದುರಿಸಿನಿಂದ ಕೂಡಿರುತ್ತವೆ.

★ ಎರಡು ಕಣ್ಣುಗಳಲ್ಲಿಯೂ ಕಣ್ಣು ಪಾಪೆಗಳ ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ.

 ★ಯಾವ ಪಾರ್ಶ್ವದ  ಮಿದುಳಿನ ಭಾಗಕ್ಕೆ ರಕ್ತ ಪೂರೈಕೆ ನಿಂತು ಹೋಗಿದೆಯೆಂಬುದಕ್ಕೆ ಅನುಗುಣವಾಗಿ,ಇನ್ನೊಂದು ಪಾರ್ಶ್ವದ ಶರೀರದ ಭಾಗದ ಪಾರ್ಶ್ವ ವಾಯುವಿಗೆ ಈಡಾಗುತ್ತದೆ.(ರೋಗಿಯ ಪ್ರತಿವರ್ತನೆಗಳನ್ನು ಪರೀಕ್ಷೆ ಮಾಡುವ ಮೂಲಕ ವೈದ್ಯರು ಈ ವಿಷಯವನ್ನು ನಿರ್ಧರಿಸಬಲ್ಲರು ).

 ★ಮಲಮೂತ್ರ ವಿಸರ್ಜನೆಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾನೆ. ಅಂದರೆ ತನಗೆ ತಿಳಿಯದೆಯೇ ಬಟ್ಟೆಗಳಲ್ಲಿ ವಿಸರ್ಜನೆಗಳನ್ನು ಮಾಡಿಬಿಡುತ್ತಾನೆ.

 ★ಮಾತನಾಡಲಾಗದೆ ಹೋಗುವುದರಿಂದ ತೊದಲು ಮಾತುಗಳು ಬರುತ್ತವೆ .